ಮಲಗುವಾಗ ಮೊಬೈಲ್ ಅನ್ನು ಎಷ್ಟು ದೂರ ಇಟ್ಟುಕೊಳ್ಳಬೇಕು?: ನೀವು ಈ ತಪ್ಪು ಮಾಡದಿರಿ

Mobile Addiction: ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಬಹುದು. ಮಲಗುವಾಗ ಮೊಬೈಲ್‌ ಅನ್ನು ಎಷ್ಟು ದೂರ ಇರಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹತ್ತಿರದಲ್ಲಿ ಮೊಬೈಲ್ ಇಟ್ಟುಕೊಂಡು ಮಲಗುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ಮಲಗುವಾಗ ಮೊಬೈಲ್ ಅನ್ನು ಎಷ್ಟು ದೂರ ಇಟ್ಟುಕೊಳ್ಳಬೇಕು?: ನೀವು ಈ ತಪ್ಪು ಮಾಡದಿರಿ
Smartphone
Follow us
Vinay Bhat
|

Updated on: Sep 09, 2023 | 12:42 PM

ಇಂದು ಮೊಬೈಲ್ (Mobile) ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಬೆಳಗ್ಗೆ ಎದ್ದ ತಕ್ಷಣ ಫೋನ್ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಜನರು ಸ್ಮಾರ್ಟ್​ಫೋನ್​ಗೆ ಅಡಿಕ್ಟ್ ಆಗಿದ್ದಾರೆ. ಅಷ್ಟೇ ಅಲ್ಲ, ಊಟ ಮಾಡುವಾಗ, ಮಲಗುವಾಗಲೂ ಜನರು ಫೋನ್ ಬಿಟ್ಟಿರುವುದಿಲ್ಲ. ಇದನ್ನು ಮೊಬೈಲ್ ಚಟ ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಈ ರೀತಿಯ ಅಭ್ಯಾಸ ತುಂಬಾ ಅಪಾಯಕಾರಿ. ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಬಹುದು.

ಮಲಗುವಾಗ ಮೊಬೈಲ್ ಅನ್ನು ಎಷ್ಟು ದೂರ ಇಡಬೇಕು?:

ಮಲಗುವಾಗ ಮೊಬೈಲ್‌ ಅನ್ನು ಎಷ್ಟು ದೂರ ಇರಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹತ್ತಿರದಲ್ಲಿ ಮೊಬೈಲ್ ಇಟ್ಟುಕೊಂಡು ಮಲಗುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. WHO ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಪ್ಯೂನ ವರದಿಯ ಪ್ರಕಾರ, 90 ಪ್ರತಿಶತ ಹದಿಹರೆಯದವರು ಮತ್ತು 68 ಪ್ರತಿಶತ ವಯಸ್ಕರು ತಮ್ಮ ದಿಂಬಿನ ಪಕ್ಕದಲ್ಲಿ ಮೊಬೈಲ್ ಫೋನ್ ಅನ್ನು ಇಟ್ಟುಕೊಂಡು ಮಲಗುತ್ತಾರೆ.

ಗೂಗಲ್ ಪಿಕ್ಸೆಲ್ 8, 8 ಪ್ರೊ ಬಿಡುಗಡೆ ದಿನಾಂಕ ಬಹಿರಂಗ: ಭಾರತಕ್ಕೆ ಬರುತ್ತಿದೆ ಪವರ್​ಫುಲ್ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಹುವೈ ​ಫೋನ್: ಯಾವುದು?, ಬೆಲೆ ಎಷ್ಟು?
Image
ಶವೋಮಿ 12 ಪ್ರೊ ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
Image
ಭಾರತದಲ್ಲಿ ಒಪ್ಪೋ A38 ಫೋನ್ ಬಿಡುಗಡೆ: ಬೆಲೆ ಕೇವಲ 12,999 ರೂ.
Image
ತಯಾರಾಗಿ: ಮುಂದಿನ ವಾರ ಭಾರತಕ್ಕೆ ಅಪ್ಪಳಿಸುತ್ತಿದೆ ಮೋಟೋ ಎಡ್ಜ್ 40 ನಿಯೋ

ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವುದರಿಂದ ಅನೇಕ ಸಮಸ್ಯೆ ಕಾಡಬಹುದು. ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವನ್ನು ತಪ್ಪಿಸಲು ಮಲಗುವ ಸಮಯದಲ್ಲಿ ಸ್ಮಾರ್ಟ್​ಫೋನನ್ನು ದೂರವಿಡುವುದು ಉತ್ತಮ. ಸಾಧ್ಯವಾದರೆ, ಮಲಗುವಾಗ ಮೊಬೈಲ್ ಫೋನ್‌ಗಳನ್ನು ಕನಿಷ್ಠ 3 ಅಡಿ ದೂರದಲ್ಲಿಡಿ. ಹೀಗೆ ಮಾಡುವುದರಿಂದ ಮೊಬೈಲ್ ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ನೀವು ವಿಕಿರಣದಿಂದ ಬಳಲುವುದಿಲ್ಲ. ಹಾಗಾಗಿ ದಿಂಬಿನ ಕೆಳಗೆ ಫೋನ್ ಇಟ್ಟು ಮಲಗಬೇಡಿ.

WHO, ಮೊಬೈಲ್ ಫೋನ್‌ ಪಕ್ಕದಲ್ಲಿಟ್ಟು ಮಲಗುವ ಜನರಿಗೆ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. WHO ಪ್ರಕಾರ, ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವು ಸ್ನಾಯು ನೋವುಗಳು, ತಲೆನೋವಿಗೆ ದಾರಿ ಮಾಡಿಕೊಡುತ್ತದೆ. ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನುಗಳ ಸಮತೋಲನವನ್ನು ಸಹ ಅಡ್ಡಿಪಡಿಸುತ್ತದೆ. ಇದು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ ಎಂದು ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ