ಇಂದು ಬಹುನಿರೀಕ್ಷಿತ ಐಫೋನ್ 15 ಸರಣಿ ಬಿಡುಗಡೆ: ಭಾರತದಲ್ಲಿ ಎಷ್ಟು ಗಂಟೆಗೆ ಲಾಂಚ್?
iPhone 15 launching today: ಇಂದು ಬಹುನಿರೀಕ್ಷಿತ ಐಫೋನ್ 15 ಸರಣಿ ಬಿಡುಗಡೆಯಾಗಲಿದೆ. ಐಫೋನ್ 15 ಮಾದರಿಗಳು ಡೈನಾಮಿಕ್ ಐಲ್ಯಾಂಡ್ ವಿನ್ಯಾಸದೊಂದಿಗೆ ಬರುತ್ತವೆ ಎಂದು ಸೋರಿಕೆಯಿಂದ ತಿಳಿದುಬಂದಿದೆ. ಇದು ಪ್ರಸ್ತುತ ಪ್ರೊ ಮಾದರಿಗಳಿಗೆ ಮಾತ್ರ ಸೀಮಿತವಾಗಿದೆ. ಮುಂಬರುವ ಐಫೋನ್ ಮಾದರಿಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರುವುದು ಬಹುತೇಕ ಖಚಿತ.
ಇಂದು ನಡೆಯಲಿರುವ ಆ್ಯಪಲ್‌ನ ‘ವಂಡರ್‌ಲಸ್ಟ್’ ಈವೆಂಟ್ನಲ್ಲಿ ಐಫೋನ್ 15 ಸರಣಿಯು (iPhone 15 Series) ಬಿಡುಗಡೆಯಾಗಲಿದೆ. ಭಾರತದಲ್ಲಿ ಈ ಈವೆಂಟ್ ರಾತ್ರಿ 10:30 ಕ್ಕೆ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮದ ಲೈವ್ ಅನ್ನು ಆ್ಯಪಲ್‌ನ ಅಧಿಕೃತ ಯೂಟ್ಯೂಬ್ ಚಾನಲ್ನಲ್ಲಿ ವೀಕ್ಷಿಸಬಹುದು. ಈ ವರ್ಷದ ಐಫೋನ್ 15 ಸರಣಿಯ ಬಗ್ಗೆ ಈಗಾಗಲೇ ಹಲವು ಮಾಹಿತಿ ಸೋರಿಕೆಯಾಗಿದೆ. ಐಫೋನ್ 15 ಗೆ ಭಾರತದಲ್ಲಿ ಎಷ್ಟು ಬೆಲೆ ಇರಬಹುದು?, ಫೀಚರ್ಸ್ ಏನಿದೆ?, ಡಿಸೈನ್ ಹೇಗಿದೆ? ನೋಡೋಣ.
ಐಫೋನ್ 15: ನಿರೀಕ್ಷಿತ ಫೀಚರ್ಸ್:
ಐಫೋನ್ 15 ಮಾದರಿಗಳು ಡೈನಾಮಿಕ್ ಐಲ್ಯಾಂಡ್ ವಿನ್ಯಾಸದೊಂದಿಗೆ ಬರುತ್ತವೆ ಎಂದು ಸೋರಿಕೆಯಿಂದ ತಿಳಿದುಬಂದಿದೆ. ಇದು ಪ್ರಸ್ತುತ ಪ್ರೊ ಮಾದರಿಗಳಿಗೆ ಮಾತ್ರ ಸೀಮಿತವಾಗಿದೆ. ಮುಂಬರುವ ಐಫೋನ್ ಮಾದರಿಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರುವುದು ಬಹುತೇಕ ಖಚಿತ. ಆಪಲ್ ಮ್ಯೂಟ್ ಸ್ವಿಚ್ ಅನ್ನು ಮಾರ್ಪಾಡು ಮಾಡಿದೆ ಎಂದು ವರದಿಯಾಗಿದೆ. ಇತ್ತೀಚಿನ iOS ಬೀಟಾ ಆವೃತ್ತಿಯಲ್ಲಿ ಕಂಡುಬರುವ ಈ ಹೊಸ ವೈಶಿಷ್ಟ್ಯವು ಸೈಲೆಂಟ್ ಮೋಡ್, ಫ್ಲ್ಯಾಷ್‌ಲೈಟ್, ಫೋಕಸ್ ಮೋಡ್ ಮತ್ತು ಐಫೋನ್‌ನ ಕ್ಯಾಮೆರಾ ಸೇರಿದಂತೆ ವಿವಿಧ ಕಾರ್ಯಗಳನ್ನು ನಿಯಂತ್ರಿಸಲು ಇದು ಬಳಕೆಯಾಗಲಿದೆ. ಈ ವೈಶಿಷ್ಟ್ಯವು ಕೇವಲ ಪ್ರೊ ಮಾದರಿಗಳಲ್ಲಿ ಅಥವಾ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಪರಿಚಯಿಸಲ್ಪಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್: ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಕಂಪನಿ ಮೊಟ್ಟ ಮೊದಲ ಫ್ಲಿಪ್ ಸ್ಮಾರ್ಟ್ಫೋನ್
ಕೆಲವು ವರದಿಗಳ ಪ್ರಕಾರ, ಐಫೋನ್ 15 ಕ್ಯಾಮೆರಾ ಕಾರ್ಯಕ್ಷಮತೆಯನ್ನು ಹೆಚ್ಚು ಸುಧಾರಿಸಿದೆ ಎನ್ನಲಾಗಿದೆ. ವಿಶೇಷವಾಗಿ ಕಡಿಮೆ-ಬೆಳಕಿನಲ್ಲಿ ಉತ್ತಮ ಫೋಟೋ ಸೆರೆ ಹಿಡಿಯುತ್ತಂತೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಸಹ ನವೀಕರಿಸಿದ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಪ್ಯಾಕ್ ಮಾಡಬಹುದು. ಐಫೋನ್ 14 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಆದ್ದರಿಂದ, ಐಫೋನ್ 15 ದೊಡ್ಡ ಕ್ಯಾಮೆರಾ ನವೀಕರಣಗಳನ್ನು ನೀಡುವ ಸಾಧ್ಯತೆಯಿದೆ.
ಐಫೋನ್ 14 ಮತ್ತು ಹಿಂದಿನ ಎಲ್ಲಾ ಐಫೋನ್ ಮಾದರಿಗಳಂತೆಯೇ ಐಫೋನ್ 15 6.1-ಇಂಚಿನ ಲಿಕ್ವಿಡ್ ರೆಟಿನಾ ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಈ ವರ್ಷದ ಐಫೋನ್ ಕಳೆದ ವರ್ಷದ A16 ಬಯೋನಿಕ್ ಚಿಪ್‌ಸೆಟ್ ಅನ್ನು ಬಳಸುತ್ತದೆ. ಇದು ಐಫೋನ್ 14 ಗಿಂತ ಬೃಹತ್ ಅಪ್‌ಗ್ರೇಡ್ ಆಗಿರುತ್ತದೆ. ಇದರ ಜೊತೆಗೆ ಬ್ಯಾಟರಿಯಲ್ಲಿ ಅಪ್‌ಗ್ರೇಡ್ ಪಡೆಯುವ ಸಾಧ್ಯತೆ ಇದೆ. ಇದರರ್ಥ ಫೋನ್ ಹಿಂದಿನ ಮಾದರಿಗಳಿಗಿಂತ ಹೆಚ್ಚು ಸಮಯ ಚಾರ್ಜ್ ಬರಲಿದೆ. ಸ್ಟ್ಯಾಂಡರ್ಡ್ ಆವೃತ್ತಿಯು 3,877mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು, ಐಫೋನ್ 14 ನಲ್ಲಿ 3,279mAh ಬ್ಯಾಟರಿ ಇತ್ತು.
ಐಫೋನ್ 15 ಬೆಲೆ ಎಷ್ಟಿರಬಹುದು?:
ಆ್ಯಪಲ್ ಐಫೋನ್ 15 ಬೆಲೆಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಕೆಲವು ಸಾವಿರ ರೂಪಾಯಿಗಳಷ್ಟು ಹೆಚ್ಚಿಸಬಹುದು. ಅಥವಾ ಹೊಸ 2023 ಐಫೋನ್‌ಗಳನ್ನು ಅದೇ ಹಳೆಯ ಬೆಲೆಯಲ್ಲಿ ನೀಡಬಹುದು. ಐಫೋನ್ 14 ಅನ್ನು ಭಾರತದಲ್ಲಿ 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರೊ ಮಾದರಿಗಳ ಬೆಲೆ ಏರಿಕೆಯನ್ನು ಪಡೆಯುತ್ತವೆ ಎಂದು ಹೇಳಲಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ