ಐಫೋನ್ 15 ಸರಣಿ ಬಿಡುಗಡೆಗೆ ಒಂದೇ ದಿನ ಬಾಕಿ: ಬೆಲೆ ಎಷ್ಟಿರಬಹುದು?

Apple iPhone 15 Series Launch: ಆ್ಯಪಲ್ ಐಫೋನ್ 15 ಸರಣಿ ಮಂಗಳವಾರ ಬಿಡುಗಡೆಗೆ ಆಗಲಿದೆ. ಇದರಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ. ಮುಂಬರುವ ಫೋನ್‌ನಲ್ಲಿ ಆ್ಯಪಲ್ A16 ಬಯೋನಿಕ್ ಚಿಪ್‌ಸೆಟ್ ಅನ್ನು ಅಳವಡಿಸಬಹುದಾಗಿದೆ. ಇದು A15 ಬಯೋನಿಕ್‌ಗಿಂತ 7 ಪ್ರತಿಶತ ವೇಗವಾಗಿದೆ ಎಂದು ಹೇಳಲಾಗಿದೆ.

ಐಫೋನ್ 15 ಸರಣಿ ಬಿಡುಗಡೆಗೆ ಒಂದೇ ದಿನ ಬಾಕಿ: ಬೆಲೆ ಎಷ್ಟಿರಬಹುದು?
Apple iPhone 15 Series
Follow us
Vinay Bhat
|

Updated on:Sep 11, 2023 | 2:56 PM

ಆ್ಯಪಲ್ ಐಫೋನ್ 15 ಸರಣಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಂಗಳವಾರ ನಡೆಯಲಿರುವ ‘ವಂಡರ್‌ಲಸ್ಟ್’ ಈವೆಂಟ್​ನಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ. ಐಫೋನ್ 15 ಸರಣಿಯಲ್ಲಿ (iPhone 15 Series) ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ. ಈ ಈವೆಂಟ್ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:30 ಕ್ಕೆ ಶುರುವಾಗಲಿದೆ. ನೀವು ಆಪಲ್‌ನ ‘ವಂಡರ್‌ಲಸ್ಟ್’ ಈವೆಂಟ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಮತ್ತು Apple TV ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು. ಐಫೋನ್ 15 ಸರಣಿ ಕುರಿತ ಕೆಲ ಕುತೂಹಲ ಕಾರಿ ಮಾಹಿತಿ ಇಲ್ಲಿದೆ.

ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಡಿಸ್ ಪ್ಲೇ

ಐಫೋನ್ 15 ನಲ್ಲಿ, 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್ ಪ್ಲೇಯನ್ನು ನೋಡಬಹುದು. ಅದು 2532 × 1170 ಪಿಕ್ಸೆಲ್​ಗಳ ರೆಸಲ್ಯೂಶನ್ ನೀಡುತ್ತದೆ. ಐಫೋನ್ 15 ಪ್ಲಸ್​ನಲ್ಲಿ, 60Hz ನ ರಿಫ್ರೆಶ್ ದರದೊಂದಿಗೆ 2778 x 1284 ರೆಸಲ್ಯೂಶನ್ ನೀಡಬಲ್ಲ 6.7 ಇಂಚಿನ ಡಿಸ್ ಪ್ಲೇ ಇರಲಿದೆ. ಈ ಬಾರಿ ಕಂಪನಿಯು ಮುಂಬರುವ ಸರಣಿಯಲ್ಲಿ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಒದಗಿಸಬಹುದು. ಹಿಂದಿನ ಸರಣಿಯಲ್ಲಿ, ಈ ವೈಶಿಷ್ಟ್ಯವು ಪ್ರೊ ಮಾದರಿಗಳಲ್ಲಿ ಮಾತ್ರ ನೀಡಲಾಗಿತ್ತು.

ಐಫೋನ್ 15 ಬ್ಯಾಟರಿ

ಮುಂಬರುವ ಫೋನ್‌ನಲ್ಲಿ ಆ್ಯಪಲ್ A16 ಬಯೋನಿಕ್ ಚಿಪ್‌ಸೆಟ್ ಅನ್ನು ಅಳವಡಿಸಬಹುದಾಗಿದೆ. ಇದು A15 ಬಯೋನಿಕ್‌ಗಿಂತ 7 ಪ್ರತಿಶತ ವೇಗವಾಗಿದೆ ಎಂದು ಹೇಳಲಾಗಿದೆ. ಈ ಫೋನ್ 6GB RAM ಮತ್ತು 128GB ಸಂಗ್ರಹಣೆಯನ್ನು ಪಡೆಯಬಹುದು. 3,877mAh ಬ್ಯಾಟರಿಯನ್ನು ಐಫೋನ್ 15 ನಲ್ಲಿ ನೋಡಬಹುದಾಗಿದೆ. ಐಫೋನ್ 15 ಪ್ಲಸ್‌ನಲ್ಲಿ 4,912mAh ಬ್ಯಾಟರಿ ಇರಲಿದೆ. ಮುಂಬರುವ ಫೋನ್ USB-C ಚಾರ್ಜಿಂಗ್ ಪೋರ್ಟ್ ಮತ್ತು USB-C ಕೇಬಲ್‌ನೊಂದಿಗೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ
Image
ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ
Image
ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ
Image
ರೆಡ್ಮಿ ಪ್ರಿಯರಿಗಾಗಿ ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್
Image
ಭಾರತಕ್ಕಿಂದು ಅಪ್ಪಳಿಸುತ್ತಿದೆ ನೋಕಿಯಾ G42 5G ಸ್ಮಾರ್ಟ್​ಫೋನ್

ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್: ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಕಂಪನಿ ಮೊಟ್ಟ ಮೊದಲ ಫ್ಲಿಪ್ ಸ್ಮಾರ್ಟ್​ಫೋನ್

ಐಫೋನ್ 15, ಐಫೋನ್ 15 ಪ್ಲಸ್ ಕ್ಯಾಮೆರಾ

ಫೋಟೋಗಳು ಮತ್ತು ವಿಡಿಯೋಗ್ರಫಿಗಾಗಿ 48-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಐಫೋನ್ 15 ಮತ್ತು ಐಫೋನ್ 15 ಪ್ಲಸ್​ನಲ್ಲಿ ಕಾಣಬಹುದು. ಐಫೋನ್ 15 ಕ್ಯಾಮೆರಾ ದೊಡ್ಡ ಅಪ್‌ಗ್ರೇಡ್‌ನೊಂದಿಗೆ ಪ್ರವೇಶಿಸಬಹುದು. ಇದರಲ್ಲಿರುವ ಸೆಕೆಂಡರಿ ಕ್ಯಾಮೆರಾ 12 ಮೆಗಾಪಿಕ್ಸೆಲ್ ಆಗಿರಬಹುದು ಅದು ƒ/2.4 ದ್ಯುತಿರಂಧ್ರವನ್ನು ಹೊಂದಿರುತ್ತದೆ. ಡೈನಾಮಿಕ್ ಐಲ್ಯಾಂಡ್‌ನಲ್ಲಿ ಕಂಡುಬರುವ ಮುಂಭಾಗದ ಕ್ಯಾಮೆರಾ 12 ಮೆಗಾಪಿಕ್ಸೆಲ್​ನಿಂದ ಕೂಡಿದೆ.

ಐಫೋನ್ 15, ಐಫೋನ್ 15 ಪ್ಲಸ್ ಬೆಲೆ

ಐಫೋನ್ 15 ನ ಆರಂಭಿಕ ಬೆಲೆ ಸುಮಾರು 65,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಐಫೋನ್ + ಬೆಲೆಯು 75,000 ರೂ. ಯಿಂದ ಆರಂಭವಾಗಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Mon, 11 September 23