
ಬೆಂಗಳೂರು (ಸೆ. 19): ಐಫೋನ್ 17 ಸರಣಿಯ (Apple iPhone 17 Series) ಮೊದಲ ಮಾರಾಟ ಇಂದು ಪ್ರಾರಂಭವಾಗಿದೆ. ಬೆಳಿಗ್ಗೆಯಿಂದಲೇ ಆಪಲ್ ಸ್ಟೋರ್ ಹೊರಗೆ ಜನಸಂದಣಿ ಹೆಚ್ಚಿದೆ. ಇದರಿಂದ ಐಫೋನ್ 17 ಸರಣಿಯ ಕ್ರೇಜ್ ಎಷ್ಟಿದೆ ಎಂಬುದು ಗ್ರಹಿಸಬಹುದು. ಐಫೋನ್ 17, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಐಫೋನ್ ಏರ್ ಆನ್‌ಲೈನ್‌ನಲ್ಲಿಯೂ ಲಭ್ಯವಿದೆ. ಇದರ ಮಧ್ಯೆ ಮುಂಬೈನ ಬಿಕೆಸಿ ಆಪಲ್ ಅಂಗಡಿಯ ಹೊರಗಿನಿಂದ ಬಂದ ವಿಡಿಯೋವೊಂದು ಜನರನ್ನು ಬೆಚ್ಚಿಬೀಳಿಸಿದೆ. ಐಫೋನ್ 17 ಸರಣಿಯನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಜನರ ಗುಂಪು ಮುಂಬೈನ ಆಪಲ್ ಸ್ಟೋರ್ ಹೊರಗೆ ನಿಯಂತ್ರಣ ತಪ್ಪಿದ್ದು, ಗುಂಪಿನಲ್ಲಿದ್ದ ಕೆಲವು ಜನರ ನಡುವೆ ತಳ್ಳಾಟ, ಹೊಡೆದಾಟ ಮತ್ತು ಗಲಾಟೆ ನಡೆದಿದೆ. ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಆಪಲ್ ಸ್ಟೋರ್ ಹೊರಗೆ ಪಿಟಿಐ ಸುದ್ದಿ ಸಂಸ್ಥೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ಐಫೋನ್ 17 ಸರಣಿಯನ್ನು ಖರೀದಿಸಲು ಜನರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಇದ್ದಕ್ಕಿದ್ದಂತೆ, ಬೃಹತ್ ಜನಸಮೂಹದಲ್ಲಿ ಅವ್ಯವಸ್ಥೆ ಭುಗಿಲೆದ್ದಿತು, ಮತ್ತು ಕೆಲವರು ತಳ್ಳಾಡಲು ಪ್ರಾರಂಭಿಸಿದರು. ಜನರು ಪರಸ್ಪರ ಒದೆಯುವುದು ಮತ್ತು ಹೊಡೆದಾಡಲು ಶುರುಮಾಡಿದರು. ನಂತರ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಕಳಪೆ ಭದ್ರತಾ ವ್ಯವಸ್ಥೆಯಿಂದಾಗಿ ಇದು ಸಂಭವಿಸಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಯಾರಿಗೂ ಗಾಯಗಳಾಗಿಲ್ಲ.
VIDEO | iPhone 17 series launch: A scuffle broke out among a few people amid the rush outside the Apple Store at BKC Jio Centre, Mumbai, prompting security personnel to intervene.
Large crowds had gathered as people waited eagerly for the iPhone 17 pre-booking.#iPhone17… pic.twitter.com/cskTiCB7yi
— Press Trust of India (@PTI_News) September 19, 2025
“ನಾವು ಬೆಳಿಗ್ಗೆಯಿಂದ ಕಾಯುತ್ತಿದ್ದೇನೆ. ಸರತಿ ಸಾಲಿನಲ್ಲಿ ನಿಂತಿದ್ದೇನೆ… ಆದರೆ ಇಲ್ಲಿನ ಭದ್ರತಾ ಸಿಬ್ಬಂದಿಗೆ ಯಾವುದೇ ಜವಾಬ್ದಾರಿ ಇಲ್ಲ. ಜನರು ಸಾಲುಗಳನ್ನು ತಪ್ಪಿಸುತ್ತಿದ್ದಾರೆ. ಭದ್ರತಾ ಅಧಿಕಾರಿಗಳ ಜವಾಬ್ದಾರಿಯ ಕೊರತೆಯಿಂದಾಗಿ ಹಿಂದೆ ನಿಂತಿರುವವರಿಗೆ ಉತ್ಪನ್ನವನ್ನು ಖರೀದಿಸಲು ಅವಕಾಶ ಸಿಗುತ್ತಿಲ್ಲ” ಎಂದು ಅವರು ಕೆಲವರು ದೂರಿದ್ದಾರೆ.
iPhone 17 Sale: ಐಫೋನ್ 17 ಸರಣಿ ಖರೀದಿಗೆ ರಾತ್ರಿಯಿಂದಲೇ ಕ್ಯೂ ನಿಂತ ಜನರು: ಈ ಬಾರಿ ದಾಖಲೆ ಖಚಿತ
ನವದೆಹಲಿ ಮತ್ತು ಬೆಂಗಳೂರಿನ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿರುವ ಆಪಲ್ ಸ್ಟೋರ್‌ನ ಹೊರಗೆ ಇದೇ ರೀತಿಯ ಜನಸಂದಣಿ ಕಂಡುಬಂದಿದೆ, ಆದರೂ ಯಾವುದೇ ಗಲಾಟೆಯ ವರದಿಗಳು ಇನ್ನೂ ಹೊರಬಂದಿಲ್ಲ.
ಇಷ್ಟೊಂದು ಜನಸಂದಣಿಯನ್ನು ನೋಡಿದರೆ, ಭಾರತೀಯರು ನಿಜವಾಗಿಯೂ ಐಫೋನ್ ಬಗ್ಗೆ ಎಷ್ಟು ಕ್ರೇಜ್ ಹೊಂದಿದ್ದಾರೆಂದು ತಿಳಿಯುತ್ತದೆ. ಅನೇಕ ಜನರು ತಮ್ಮ ಇತರ ಕೆಲಸಗಳನ್ನು ಬಿಟ್ಟು ಹೊಸ ಐಫೋನ್ ಖರೀದಿಸಲು ಗಂಟೆಗಟ್ಟಲೆ ಬಿಸಿಲಿನಲ್ಲಿ ದೀರ್ಘ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಆಪಲ್‌ನ ಆಫ್‌ಲೈನ್ ಅಂಗಡಿಗಳ ಜೊತೆಗೆ, ಹೊಸ ಐಫೋನ್‌ಗಳನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು.
ಐಫೋನ್ 17 ಸರಣಿಯನ್ನು ಕ್ರೋಮಾ, ವಿಜಯ್ ಸೇಲ್ಸ್ ಮತ್ತು ರಿಲಯನ್ಸ್ ಡಿಜಿಟಲ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೂ ಖರೀದಿಸಬಹುದು. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಕೊಡುಗೆಗಳು ಸಹ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಪಾವತಿಸುವಾಗ ರಿಯಾಯಿತಿಗಳು ಲಭ್ಯವಿದೆ. ಈ ರೀತಿಯಾಗಿ, ನೀವು ಮನೆಯಲ್ಲಿ ಕುಳಿತು ಕಡಿಮೆ ಬೆಲೆಗೆ ಐಫೋನ್ 17 ಸರಣಿಯನ್ನು ಪಡೆಯಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ