ಐಫೋನ್‌ನಿಂದ ವಿವೋ V50 ವರೆಗೆ: ಈ ಸ್ಮಾರ್ಟ್‌ಫೋನ್‌ಗಳು ಮುಂದಿನ ವಾರ ಬಿಡುಗಡೆಯಾಗಲಿವೆ

ಈ ವರ್ಷದ ಮೊದಲ ಐಫೋನ್ ಫೆಬ್ರವರಿ 19 ರಂದು ಬಿಡುಗಡೆಯಾಗುವುದು ಬಹುತೇಕ ದೃಢಪಟ್ಟಿದೆ. ಇದು ಐಫೋನ್ SE 4 ಆಗಿದ್ದು, ಆಕರ್ಷಕ ಲುಕ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಅನಾವರಣಗೊಳ್ಳಲಿದೆ. ಇದು A18 ಚಿಪ್‌ಸೆಟ್, 48MP ಕ್ಯಾಮೆರಾ, ಫೇಸ್ ಐಡಿಯೊಂದಿಗೆ ಪೂರ್ಣ-ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಯಿದೆ. ಇದು USB-C ಪೋರ್ಟ್‌ನೊಂದಿಗೆ ರಿಲೀಸ್ ಆಗಲಿದೆ.

ಐಫೋನ್‌ನಿಂದ ವಿವೋ V50 ವರೆಗೆ: ಈ ಸ್ಮಾರ್ಟ್‌ಫೋನ್‌ಗಳು ಮುಂದಿನ ವಾರ ಬಿಡುಗಡೆಯಾಗಲಿವೆ
Apple Iphone Se 4
Updated By: Vinay Bhat

Updated on: Feb 16, 2025 | 10:16 AM

Upcoming Smartphones: ಮುಂದಿನ ವಾರ ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಾಕಷ್ಟು ವಿಶೇಷವಾಗಿದೆ. ಮುಂದಿನ ವಾರ, ವರ್ಷದ ಮೊದಲ ಐಫೋನ್ ಮತ್ತು ಅನೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಸದ್ಯ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಮುಂದಿನ ವಾರ ನಿಮಗೆ ಹಲವು ಹೊಸ ಆಯ್ಕೆಗಳು ಲಭ್ಯವಿರುತ್ತವೆ. ಬಜೆಟ್ ಬೆಲೆಯಿಂದ ಹಿಡಿದು ಮಧ್ಯಮ-ದುಬಾರಿ ಬೆಲೆ ಫೋನುಗಳು ಕೂಡ ಬಿಡುಗಡೆ ಆಗಲಿದೆ. ಹಾಗಾದರೆ ಮುಂದಿನ ವಾರ ಯಾವ ಫೋನ್‌ಗಳೆಲ್ಲ ಅನಾವರಣ ಗೊಳ್ಳಲಿದೆ?, ಇಲ್ಲಿದೆ ನೋಡಿ ಮಾಹಿತಿ.

ಐಫೋನ್ ಎಸ್ಇ 4:

ಈ ವರ್ಷದ ಮೊದಲ ಐಫೋನ್ ಫೆಬ್ರವರಿ 19 ರಂದು ಬಿಡುಗಡೆಯಾಗುವುದು ಬಹುತೇಕ ದೃಢಪಟ್ಟಿದೆ. ಇದು ಐಫೋನ್ SE 4 ಆಗಿದ್ದು, ಆಕರ್ಷಕ ಲುಕ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಅನಾವರಣಗೊಳ್ಳಲಿದೆ. ಇದು A18 ಚಿಪ್‌ಸೆಟ್, 48MP ಕ್ಯಾಮೆರಾ, ಫೇಸ್ ಐಡಿಯೊಂದಿಗೆ ಪೂರ್ಣ-ಡಿಸ್​ಪ್ಲೇ ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಯಿದೆ. ಇದು USB-C ಪೋರ್ಟ್‌ನೊಂದಿಗೆ ರಿಲೀಸ್ ಆಗಲಿದೆ. ಇದು ಆಪಲ್ ಇಂಟೆಲಿಜೆನ್ಸ್ ಬೆಂಬಲದೊಂದಿಗೆ ಬರಲಿದೆ. ಈ ಕಡಿಮೆ ಬೆಲೆಯ ಐಫೋನ್ ಆಂಡ್ರಾಯ್ಡ್‌ನ ಪ್ರೀಮಿಯಂ ವಿಭಾಗಕ್ಕೆ ಸವಾಲಾಗಿ ಪರಿಣಮಿಸಲಿದೆ.

ಭಾರತದಲ್ಲಿ ಐಫೋನ್ ಎಸ್​ಇ 4 ಬೆಲೆ 49,900 ರೂ. ಗಳಿಂದ ಪ್ರಾರಂಭವಾಗಬಹುದು ಎಂದು ಊಹಿಸಲಾಗಿದೆ. ಆದರೆ ಇದನ್ನು ಕಂಪನಿ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಬಿಡುಗಡೆಯಾದ ತಕ್ಷಣ ಅದರ ಪ್ರಿ-ಆರ್ಡರ್‌ಗಳು ಪ್ರಾರಂಭವಾಗುತ್ತವೆ. ಇದರ ಮಾರಾಟವೂ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಟಚ್ ಐಡಿ ಬದಲಿಗೆ ಫೇಸ್ ಐಡಿ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 18 ವರ್ಷಗಳ ನಂತರ ಹೋಮ್ ಬಟನ್ ವೈಶಿಷ್ಟ್ಯಕ್ಕೆ ವಿದಾಯ ಹೇಳಲಿದೆ.

IPL 2025: ಐಪಿಎಲ್ ಫ್ಯಾನ್ಸ್​ಗೆ ಬಿಗ್ ಶಾಕ್: ಇನ್ಮುಂದೆ ಮೊಬೈಲ್‌ನಲ್ಲಿ ಮ್ಯಾಚ್ ಫ್ರೀ ವೀಕ್ಷಿಸಲು ಸಾಧ್ಯವಿಲ್ಲ

ರಿಯಲ್‌ ಮಿ ಪಿ3ಎಕ್ಸ್ ಮತ್ತು ರಿಯಲ್‌ ಮಿ ಪಿ3 ಪ್ರೊ:

ಈ ಎರಡೂ ರಿಯಲ್‌ ಮಿ ಫೋನ್‌ಗಳು ಫೆಬ್ರವರಿ 18 ರಂದು ಬಿಡುಗಡೆಯಾಗಲಿವೆ. ಪ್ರೊ ಮಾದರಿಯಲ್ಲಿ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್ ಪ್ರೊಸೆಸರ್ ಕಂಡುಬರುತ್ತದೆ. ಈ ಸರಣಿಯು ಜಿಟಿ ಬೂಸ್ಟ್ ಗೇಮಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಅನ್ನು ಶಾಖದಿಂದ ರಕ್ಷಿಸಲು, ಇದನ್ನು ಏರೋಸ್ಪೇಸ್ ದರ್ಜೆಯ ವಿಸಿ ಕೂಲಿಂಗ್ ವ್ಯವಸ್ಥೆಯೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಪ್ರೊ ಮಾದರಿಯನ್ನು ಬರೋಬ್ಬರಿ 6000 mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಬಹುದು. ಈ ಎರಡೂ ಫೋನ್‌ಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಪಡೆದಿವೆ.

ವಿವೋ V50:

ಈ ಫೋನ್‌ನ ಬಿಡುಗಡೆಯನ್ನು ಫೆಬ್ರವರಿ 17 ರಂದು ದೃಢಪಡಿಸಲಾಗಿದೆ. ಇದು 12GB RAM ಅನ್ನು ಹೊಂದಿರಬಹುದು, ಇದನ್ನು ಸ್ನಾಪ್​ಡ್ರಾಗನ್ 7 Gen 3 ನೊಂದಿಗೆ ಜೋಡಿಸಲಾಗುತ್ತದೆ. ಇದು OIS ಬೆಂಬಲದೊಂದಿಗೆ 50MP ಪ್ರಾಥಮಿಕ ಮತ್ತು 50MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಬಹುದು. ಈ ಫೋನ್ 6000 mAh ನೊಂದಿಗೆ ಸಹ ಬರಬಹುದು. 6.7-ಇಂಚಿನ 120Hz AMOLED ಡಿಸ್ ಪ್ಲೇ ಮತ್ತು ಹಲವು ಕೃತಕ ಬುದ್ದಿಮತ್ತೆ (AI) ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ