Airtel: ಐಪಿಎಲ್ ವೀಕ್ಷಿಸಲು ಅಭಿಮಾನಿಗಳಿಗೆ ಬಂಪರ್ ಆಫರ್ ಪರಿಚಯಿಸಿದ ಏರ್ಟೆಲ್

| Updated By: Vinay Bhat

Updated on: Sep 19, 2021 | 2:03 PM

IPL 2021: ಏರ್ಟೆಲ್ ಸದ್ಯ ಐಪಿಎಲ್ ಪ್ರಿಯರಿಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪ್ಲಾನ್​ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ.

Airtel: ಐಪಿಎಲ್ ವೀಕ್ಷಿಸಲು ಅಭಿಮಾನಿಗಳಿಗೆ ಬಂಪರ್ ಆಫರ್ ಪರಿಚಯಿಸಿದ ಏರ್ಟೆಲ್
IPL 2021 Airtel
Follow us on

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ (IPL 2021) ಆವೃತ್ತಿಯ ಎರಡನೇ ಚರಣಕ್ಕೆ ಇಂದು ಚಾಲನೆ ಸಿಗಲಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚೆನ್ನೈ ಸೈಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (CSK vs MI) ತಂಡಗಳು ಕಾದಾಡುವ ಮೂಲಕ ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಮತ್ತೆ ಪುನರಾರಂಭಗೊಳ್ಳಲಿದೆ. ಈಗಾಗಲೇ ಅಭಿಮಾನಿಗಳಂತು ಈ ಮದಗಜಗಳ ಕಾದಾಟ ವೀಕ್ಷಿಸಲು ಕಾದು ಕುಳಿತಿದ್ದಾರೆ. ಆನ್​ಲೈನ್​ನಲ್ಲಿ ಐಪಿಎಲ್ ಪಂದ್ಯಾವಳಿಯ ನೇರಪ್ರಸಾರವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್​ನಲ್ಲಿ (Disney+ Hotstar) ವೀಕ್ಷಿಸಬಹುದು. ಹೀಗಿರುವಾಗ ಏರ್ಟೆಲ್ (Airtel) ತನ್ನ ಬಳಕೆದಾರರಿಗೆ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ.

ಏರ್ಟೆಲ್ ಸದ್ಯ ಹೊಸ ಚಂದಾದಾರಿಕೆ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪ್ಲಾನ್​ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಈಗಾಗಲೇ ಜಿಯೋ ಮತ್ತು ವಿ ಟೆಲಿಕಾಂಗಳು ಕೂಡ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 1 ವರ್ಷದ ಚಂದಾದಾರಿಕೆ ನೀಡುವ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದೀಗ ಏರ್‌ಟೆಲ್‌ ಕೂಡ ಇದೇ ಸಾಲಿಗೆ ಸೇರಿದೆ.

ಏರ್ಟೆಲ್​ನ 499 ರೂ. ಪ್ರಿಪೇಯ್ಡ್‌ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಮತ್ತು ಪ್ರತಿದಿನ 3GB ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ. ಇದಲ್ಲದೆ ಏರ್ಟೆಲ್ ಚಂದಾದಾರರು ಫ್ರೀ ಹೆಲೋಟ್ಯೂನ್ಸ್, ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್ ಟ್ರಯಲ್ ಅನ್ನು 30 ದಿನಗಳವರೆಗೆ ಪಡೆಯುವ ಅವಕಾಶವಿದೆ.

ಇದು ಬಿಟ್ಟರೆ ಏರ್ಟೆಲ್​ನ 699 ರೂ. ಪ್ರಿಪೇಯ್ಡ್‌ ಪ್ಲಾನ್ ಕೂಡ ಇದ್ದು, ಇದರಲ್ಲಿ ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಪ್ರತಿನಿತ್ಯ ನೂರು ಎಸ್‌ಎಂಎಸ್‌ ಅನ್ನು ನೀಡಲಿದೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ ಮೂಲಕ ನೀವು ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಪ್ಲಾನ್‌ ಅನ್ನು ಪಡೆದುಕೊಳ್ಳಬಹುದು. ಅಲ್ಲದೆ 30 ದಿನಗಳ ಟ್ರಯಲ್‌ ಪ್ರೈಮ್ ವಿಡಿಯೋ ಚಂದಾದಾರಿಕೆಯ ಮೊಬೈಲ್ ಆವೃತ್ತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಇನ್ನೂ ಏರ್ಟೆಲ್​ನ 2798 ರೂ. ಪ್ಲಾನ್​ನಲ್ಲೂ ಈ ಆಯ್ಕೆಯನ್ನು ನೀಡಲಾಗಿದೆ. ಏರ್ಟೆಲ್ ಬಿಟ್ಟರೆ ವಿ ಟೆಲಿಕಾಂನ ಹೊಸ 501 ರೂ. ಪ್ಲಾನ್​ನಲ್ಲಿ ಅನಿಯಮಿತ ಕರೆಗಳು, ದಿನಕ್ಕೆ 100 SMS, ದಿನಕ್ಕೆ 3GB ಡೇಟಾ ಹಾಗೂ 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್‌ ಮೂಲಕ ನೀವು ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಕಂಪೆನಿ ಕೂಡ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಗಾಗಿ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಲಾಂಚ್‌ ಮಾಡಿದೆ. ಇದರಲ್ಲಿ ಮೊದಲ ಪ್ಲಾನ್‌ 499 ರೂ. ಗಳಿಂದ ಪ್ರಾರಂಭವಾಗುತ್ತದೆ.

Xiaomi 11 Lite NE 5G: ಬಿಡುಗಡೆಗು ಮುನ್ನವೇ ಸೋರಿಕೆಯಾಯ್ತು ಶವೋಮಿ 11 ಲೈಟ್‌ NE 5G ಸ್ಮಾರ್ಟ್​ಫೋನ್ ವಿಶೇಷತೆ

Infinix Hot 11: ಭಾರತದಲ್ಲಿ ಕೇವಲ 8,999 ರೂ. ಗೆ ಬಿಡುಗಡೆ ಆಯಿತು ಆಕರ್ಷಕ ಫೀಚರ್​ಗಳ ಸ್ಮಾರ್ಟ್​ಫೋನ್

(IPL 2021 How to watch IPL Match free here is Airtel plans with free DisneyPlus Hotstar to watch livestream online)