Kannada News Technology iQOO is all set to launch its next mid-range device the Neo 6 in India on May 31
iQoo Neo 6: ಭಾರತಕ್ಕೆ ಅಪ್ಪಳಿಸಲಿದೆ ವಿದೇಶದಲ್ಲಿ ಧೂಳೆಬ್ಬಿಸಿದ ಐಕ್ಯೂ ನಿಯೋ 6 5G: ಮೇ 31ಕ್ಕೆ ರಿಲೀಸ್
ಕಂಪನಿ ಭಾರತದಲ್ಲಿ ತನ್ನ ಹೊಸ ಐಕ್ಯೂ ನಿಯೋ 6 5G (iQoo Neo 6) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ವಿದೇಶದಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿರುವ ಈ ಫೋನ್ ಇದೇ ಮೇ 31 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ.
ಈಗಂತು ಮಾರುಕಟ್ಟೆಗೆ ದಿನಕ್ಕೊಂದರಂತೆ ಹೊಸ ಹೊಸ ಸ್ಮಾರ್ಟ್ಫೋನ್ಗಳು (Smartphone) ಲಗ್ಗೆಯಿಡುತ್ತವೆ. ಪ್ರತಿ ಫೋನ್ನಲ್ಲೂ ತನ್ನದೇ ಆದ ವಿಶೇಷ ಫೀಚರ್ಗಳು ಒಳಗೊಂಡಿರುತ್ತವೆ. ಇವುಗಳ ನಡುವೆ ವಿಭಿನ್ನವಾಗಿ ನಿಲ್ಲುವುದು ಐಕ್ಯೂ (iQoo) ಕಂಪನಿ. ವಿಶೇಷ ಫೀಚರ್ಗಳ ಜೊತೆ ಸ್ಟೈಲಿಶ್ ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಈ ಬ್ರ್ಯಾಂಡ್ ಇದೀಗ ಭಾರತದಲ್ಲಿ ತನ್ನ ಹೊಸ ಐಕ್ಯೂನಿಯೋ 6 5G (iQoo Neo 6) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ವಿದೇಶದಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿರುವ ಈ ಫೋನ್ ಇದೇ ಮೇ 31 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಐಕ್ಯೂ ನಿಯೋ 6 ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟಿರಬಹುದು?, ಏನು ವಿಶೇಷತೆ ಎಂಬುದನ್ನ ನೋಡೋಣ.
ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.62 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.
ಬಲಿಷ್ಠವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ OriginOS ಓಷನ್ ಕಸ್ಟಮ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL ಪ್ಲಸ್ GW1P ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ.
ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ
ದಿ ಗ್ರೇಟ್ ಗಾಮಾರ 144ನೇ ಜನ್ಮದಿನ ಆಚರಿಸುತ್ತಿರುವ ಗೂಗಲ್ ಸರ್ಚ್ ಇಂಜಿನ್‌ನ ಡೂಡಲ್, ಯಾರು ಈ ದಿ ಗ್ರೇಟ್ ಗಾಮಾ ಇಲ್ಲಿದೆ ಮಾಹಿತಿ
Tech Tips: ಈ ಆ್ಯಪ್ ಇನ್ಸ್ಟಾಲ್ ಮಾಡಿದ್ರೆ ನಿಮ್ಮ ಫೋನ್ ಬ್ಯಾಟರಿ ಖಾಲಿ ಆಗೋದೆ ಇಲ್ಲ
Vivo Y75: ಬಜೆಟ್ ಬೆಲೆಗೆ ಬಂಪರ್ ಫೋನ್: ಭಾರತದಲ್ಲಿ ವಿವೋ Y75 ಸ್ಮಾರ್ಟ್‌ಫೋನ್ ರಿಲೀಸ್
ಭಾರತೀಯ ಮಾರುಕಟ್ಟೆಗೆ ಬಂದಿದೆ Vivo ಕಂಪನಿಯ ಹೊಸ ಮೊಬೈಲ್, Vivo X80 Pro
ದೀರ್ಘ ಸಮಯ ಬಾಳಿಕೆ ಬರುವ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಅಳವಡಿಸಲಾಗಿದೆ.
ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ ಒಟ್ಟು ಮೂರು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ವಿದೇಶದಲ್ಲಿ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ CNY 2,799 (ಭಾರತದಲ್ಲಿ ಇದರ ಬೆಲೆ ಅಂದಾಜು 33,500 ರೂ. ಎನ್ನಬಹುದು).
ಹಾಗೆಯೇ 8GB RAM ಮತ್ತು 256GB ಮಾದರಿಯ ಆಯ್ಕೆಗೆ CNY 2,999 (ಸುಮಾರು 35,900ರೂ) ಬೆಲೆ ಹೊಂದಿದೆ. ಜೊತೆಗೆ ಟಾಪ್-ಎಂಡ್ 12GB RAM ಮತ್ತು 256GB ಆಯ್ಕೆ CNY 3,299 (ಸರಿಸುಮಾರು. 39,400ರೂ) ಬೆಲೆ ನಿಗದಿ ಮಾಡಲಾಗಿದೆ.