Vi: ವಿ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್ ಯೋಜನೆ ಘೋಷಣೆ: ಜಿಯೋ ಏರ್ಟೆಲ್​ನಲ್ಲಿಲ್ಲ ಈ ಪ್ಲಾನ್

Vi: ವಿ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್ ಯೋಜನೆ ಘೋಷಣೆ: ಜಿಯೋ ಏರ್ಟೆಲ್​ನಲ್ಲಿಲ್ಲ ಈ ಪ್ಲಾನ್
Vodafone Idea New Plans

Vodafone Idea: ಜಿಯೋ, ಏರ್ಟೆಲ್ ನಡುವೆ ಕಠಿಣ ಪೈಪೋಟಿಸುತ್ತಿರುವ ವಿ ಟೆಲಿಕಾಂನ ಈ ಹೊಸ ಆಡ್-ಆನ್ ಪ್ಯಾಕ್ 151 ರೂ. ಬೆಲೆಯದ್ದಾಗಿದ್ದು ಒಟಿಟಿ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಈ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.

TV9kannada Web Team

| Edited By: Vinay Bhat

May 23, 2022 | 2:53 PM

ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ (Vodafone Idea) ತನ್ನ ಬಳಕೆದಾರರಿಗೆ ಇದೀಗ ಭರ್ಜರಿ ಆಫರ್ ಒಂದನ್ನು ಪ್ರಕಟಿಸಿದೆ. ಜಿಯೋ, ಏರ್ಟೆಲ್ ನಡುವೆ ಕಠಿಣ ಪೈಪೋಟಿಸುತ್ತಿರುವ ವಿ ಟೆಲಿಕಾಂನ ಈ ಹೊಸ ಆಡ್-ಆನ್ ಪ್ಯಾಕ್ 151 ರೂ. ಬೆಲೆಯದ್ದಾಗಿದ್ದು ಒಟಿಟಿ (OTT) ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಈ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ವಿಶೇಷವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ SonyLIV ಮೊಬೈಲ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗಳನ್ನು ನೀಡುವ ವಿಭಿನ್ನ ಹಾಗೂ ವಿಶೇಷ ಆಡ್‌ಆನ್ ಪ್ಯಾಕ್‌ ಯೋಜನೆ ಇದಾಗಿದೆ.

ಇತ್ತೀಚೆಗಷ್ಟೆ ಏರ್ಟೆಲ್ ಕೂಡ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ ಉಚಿತ ಮೂರು ತಿಂಗಳ ಚಂದಾದಾರಿಕೆಯೊಂದಿಗೆ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿತ್ತು. ಎರಡು ಹೊಸ ಯೋಜನೆಗಳ ಬೆಲೆ ರೂ. 399 ಮತ್ತು ರೂ. 839 ಮತ್ತು ಕ್ರಮವಾಗಿ 28 ದಿನಗಳು ಮತ್ತು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಹೊಸ ಯೋಜನೆಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಭಿಮಾನಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದೀಗ ವಿ ಕಡಿಮೆ ಬೆಲೆಯಲ್ಲಿ ಕ್ರಿಕೆಟ್ ವೀಕ್ಷಣಾ ಪ್ರಿಯರು ಹಾಗೂ ಮನರಂಜನಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.

ವೊಡಾಫೋನ್ ಐಡಿಯಾ ವೆಬ್‌ಸೈಟ್ ಪ್ರಕಾರ, ಹೊಸ 151 ರೂ. ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಒಟ್ಟು 8GB ಡೇಟಾ ನೀಡುತ್ತದೆ. ಈ ಯೋಜನೆ 30 ದಿನಗಳ ಮಾನ್ಯತೆ ಹೊಂದಿದೆ. ಆದರೆ, ಈ ಪ್ಲಾನ್‌ ಯಾವುದೇ ಸೇವಾ ಮಾನ್ಯತೆಯನ್ನು ಹೊಂದಿಲ್ಲ ಎಂದು ವರದಿಯಾಗಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಬಂದ ಮೆಸೇಜ್ ಅನ್ನು ಯಾರೂ ನೋಡದ ಹಾಗೆ ಮಾಡಬಹುದು: ಹೇಗೆ?

ಇದೇ ರೀತಿಯಲ್ಲಿ 82 ರೂ. ಗಳಿಗೆ SonyLIV ಮೊಬೈಲ್​ಗೆ ಉಚಿತ ಚಂದಾದಾರಿಕೆಯನ್ನು ಒದಗಿಸುವ ಯೋಜನೆಯನ್ನು ಸಹ ವೊಡಾಫೋನ್ ಐಡಿಯಾ ನಿಡುತ್ತಿದ್ದು, ಈ ಯೋಜನೆಯು 14 ದಿನಗಳ ವ್ಯಾಲಿಡಿಟಿಯಲ್ಲಿ 4GB ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಇತ್ತೀಚಿಗಷ್ಟೇ ವೊಡಾಫೋನ್ ಐಡಿಯಾದಿಂದ Vi Hero ಅನ್‌ಲಿಮಿಟೆಡ್ ಕೊಡುಗೆಗಳನ್ನು ಸಹ ಪ್ರಕಟಿಸಲಾಗಿದೆ.

ಇನ್ನು ವಿ ಟೆಲಿಕಾಂ ಕೆಲವು ದಿನಗಳ ಹಿಂದೆ ತನ್ನ ಬಳಕೆದಾರರಿಗೆ ಡೇಟಾ ಡಿಲೈಟ್‌ ಆಫರ್‌ ಅನ್ನು ಪರಿಚಯಿಸಿದೆ. ಇದರಿಂದ ವಿ ಟೆಲಿಕಾಂ ಬಳಕೆದಾರರು ಪ್ರತಿ ತಿಂಗಳು 2GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆದುಕೊಳ್ಳಬಹುದು. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ದೈನಂದಿನ ಡೇಟಾ ಮಿತಿಯ ಮೇಲೆ ಒದಗಿಸಲಾಗುತ್ತದೆ. ಆದರೆ ಈ ಆಫರ್‌ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುವುದಿಲ್ಲ ಎನ್ನಲಾಗಿದೆ. ಅಂತೆಯೆ ವಾರಾಂತ್ಯದ ಡೇಟಾ ರೋಲ್‍ಓವರ್ ಕೊಡುಗೆಯು ಬಳಕೆದಾರರಿಗೆ ವಾರದ ದಿನಗಳಲ್ಲಿ ಬಳಕೆಯಾಗದ ದೈನಂದಿನ ಡೇಟಾವನ್ನು ಸಂಗ್ರಹಿಸಲು ಮತ್ತು ವಾರಾಂತ್ಯದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬಳಸಲು ಅನುಮತಿಸುತ್ತದೆ.

ಇದನ್ನೂ ಓದಿ

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada