ದಿ ಗ್ರೇಟ್ ಗಾಮಾರ 144ನೇ ಜನ್ಮದಿನ ಆಚರಿಸುತ್ತಿರುವ ಗೂಗಲ್ ಸರ್ಚ್ ಇಂಜಿನ್‌ನ ಡೂಡಲ್, ಯಾರು ಈ ದಿ ಗ್ರೇಟ್ ಗಾಮಾ ಇಲ್ಲಿದೆ ಮಾಹಿತಿ
ಗೂಗಲ್ ಸರ್ಚ್ ಇಂಜಿನ್‌ನ ಡೂಡಲ್ ಇಂದು ದಿ ಗ್ರೇಟ್ ಗಾಮಾ ಅವರ 144ನೇ ಜನ್ಮದಿನವನ್ನು ಆಚರಿಸುತ್ತಿದ್ದೆ
ಗೂಗಲ್ ಸರ್ಚ್ (Google Search)ಇಂಜಿನ್‌ನ ಡೂಡಲ್ ಇಂದು ದಿ ಗ್ರೇಟ್ ಗಾಮಾ (The Grate Gama) ಅವರ 144ನೇ ಜನ್ಮದಿನವನ್ನು ಆಚರಿಸುತ್ತಿದ್ದೆ. 20 ನೇ ಶತಮಾನದ ಆರಂಭದಲ್ಲಿದ್ದ ಭಾರತೀಯ ಕುಸ್ತಿಪಟು ಗುಲಾಮ್ ಮೊಹಮ್ಮದ್ ಬಕ್ಷ್ ಭಟ್ ಅವರ ಜನ್ಮದಿವನ್ನು ಗೂಗಲ್ ತನ್ನ ಡೂಡಲ್ನಲ್ಲಿ ಅವರ ಭಾವಚಿತ್ರವನ್ನು ಅಳವಡಿಸುವ ಮೂಲಕ ಆಚರಿಸುತ್ತದೆ. ಅವರ ಸಾಧನೆ ಮತ್ತು ಭಾರತೀಯ ಸಂಸ್ಕೃತಿಗೆ ಅವರು ತಂದ ಪ್ರಾತಿನಿಧ್ಯದ ಕುರಿತು ತಿಳಿಸುತ್ತಿದೆ.
ದಿ ಗ್ರೇಟ್ ಗಾಮಾ ಎಂದು ಪ್ರಖ್ಯಾತಿ ಪಡೆದಿರುವ ಗುಲಾಮ್ ಮೊಹಮ್ಮದ್ ಬಕ್ಷ್ ಬಟ್ (Ghulam Mohammad Baksh Butt) ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದಾರೆ. ಇವರು ಆಡಿದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಕ್ಕೆ ದಿ ಗ್ರೇಟ್ ಗಾಮಾ ಎಂಬ ಹೆಸರನ್ನು ಪಡೆದರು.ಪಂಜಾಬ್‌ನ ಅಮೃತಸರ ಜಿಲ್ಲೆಯ ಜಬ್ಬೋವಾಲ್ ಗ್ರಾಮದಲ್ಲಿ ಜನಿಸಿದ ಗಾಮಾ ಅವರು ತಮ್ಮ ವೃತ್ತಿಜೀವನದಲ್ಲಿ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ (1910) ಮತ್ತು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ (1927) ನ ಭಾರತೀಯ ಆವೃತ್ತಿಗಳನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಪಡೆದರು.
ಇದನ್ನು ಓದಿ: ವೇಗದ ಬದುಕಿಗೆ ಸಹಾಯವಾಗಲು ಬಂತು 5G ನೆಟವರ್ಕ್ | 1G ಯಿಂದ 5Gವರೆಗಿನ ನೆಟವರ್ಕ್ ಪಯಣ ಇಲ್ಲಿದೆ
ಗಾಮಾ ಪೈಲ್ವಾನ್ ದಶಕಗಳಿಂದ ಭಾರತದಲ್ಲಿ ಮನೆಮಾತಾಗಿದ್ದಾರೆ. ಒಬ್ಬ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಟೀಕೆ ಮಾಡುವಾಗ ಇವರ ಹೆಸರನ್ನು ಹೆಚ್ಚಾಗಿ ಬಳಸಲಾಗುತ್ತದೆ. ಗೂಗಲ್ ಡೂಡಲ್ ಬ್ಲಾಗ್ ಪ್ರಕಾರ ಗಾಮಾ ಪೈಲ್ವಾನ್ 10 ವರ್ಷದವರಿದ್ದಾಗ ಅವರು 500 ಲುಂಜ್‌ಗಳು ಮತ್ತು 500 ಪುಷ್ಅಪ್‌ಗಳನ್ನು ಮಾಡುತ್ತಿದ್ದರಂತೆ.
ಅವರು 15 ವರ್ಷ ವಯಸ್ಸಿನ ನಂತರ ಕುಸ್ತಿ ಆಡಲು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಇವರ ಸಾಧನೆ ಕಂಡು ಭಾರತೀಯ ಪತ್ರಿಕೆಗಳು ಗಾಮಾ ಅವರನ್ನು ರಾಷ್ಟ್ರೀಯ ಹೀರೋ ಮತ್ತು ವಿಶ್ವ ಚಾಂಪಿಯನ್ ಎಂದು ಬರೆದವು. 1947 ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಅನೇಕ ಹಿಂದೂಗಳ ಜೀವಗಳನ್ನು ಉಳಿಸಿದ್ದಕ್ಕಾಗಿ ಹೀರೋ ಎಂದು ಪರಿಗಣಿಸಲಾಗಿದೆ. ಗಾಮಾ ಪೈಲ್ವಾನ್ 1960 ರಲ್ಲಿ ಲಾಹೋರ್‌ನಲ್ಲಿ ಮರಣ ಹೊಂದಿದರು.
ದನ್ನು ಓದಿ: ಡಬಲ್ ಧಮಾಕ: ಬಜೆಟ್ ಬೆಲೆಗೆ ಎರಡು ಆಕರ್ಷಕ ಫೋನ್ಗಳನ್ನು ರಿಲೀಸ್ ಮಾಡಿದ ಇನ್ಫಿನಿಕ್ಸ್
ಗಾಮಾ ನಡೆದು ಬಂದ ದಾರಿ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ. ನಟ ಬ್ರೂಸ್ ಲೀ ಕೂಡ ಒಬ್ಬ ಗಾಮಾ ಅವರ ಅಭಿಮಾನಿಯಾಗಿದ್ದಾರೆ ಮತ್ತು ಗಾಮಾ ಅವರ ಜೀವನದ ಕೆಲವೊಂದು ಅಂಶಗಳನ್ನು ತನ್ನದೇ ಆದ ತರಬೇತಿ ದಿನಚರಿಯಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಗೂಗಲ್ ಡೂಡಲ್ ಬ್ಲಾಗ್ ಹೇಳಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Sun, 22 May 22