ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಬೀಳುತ್ತೆ ಭಾರಿ ದಂಡ
ಇನ್ನೂ ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ
ನವದೆಹಲಿ: ಇನ್ನೂ ಮುಂದೆ ದ್ವಿಚಕ್ರ ವಾಹನ (Bike) ಸವಾರರು ಹೆಲ್ಮೆಟ್ (Helmet) ಇಲ್ಲದೆ ಸವಾರಿ ಮಾಡಿದರೆ ಭಾರಿ ದಂಡ ಬೀಳುತ್ತದೆ. ಹೌದು ಭಾರತ ಸರಕಾರ 1998 ರ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ತಿದ್ದುಪಡಿ ಪ್ರಕಾರ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದರೆ 2,000 ರೂ.ವರೆಗಿನ ತ್ವರಿತ ದಂಡವನ್ನು ಭರಿಸಬೇಕಾಗುತ್ತದೆ.
ಇದನ್ನು ಓದಿ: ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ದುರ್ಮರಣ, ನಾಲ್ವರ ಸ್ಥಿತಿ ಗಂಭೀರ
ಈ ಕೆಳಗಿನ ಸಂದರ್ಭಗಳಲ್ಲಿ ರೂ 2,000 ವರೆಗಿನ ದಂಡವನ್ನು ವಿಧಿಸಬಹುದು:
- ಸವಾರ ಹೆಲ್ಮೆಟ್ ಧರಿಸಿದ್ದರೂ ಬಕಲ್ ಬಿಚ್ಚಿದ್ದರೆ 1,000 ರೂ ದಂಡ ಹಾಕುತ್ತಾರೆ
- ಹೆಲ್ಮೆಟ್ ನಿಜವಾದ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ 1,000 ರೂ ದಂಡ ವಿಧಿಸಬಹುದು.
- ಹೆಲ್ಮೆಟ್ ಧರಿಸಿದ್ದರೂ ಸಿಗ್ನಲ್ ಜಂಪ್ ಮಾಡುವಂತಹ ಇತರ ಸಂಚಾರ ಉಲ್ಲಂಘನೆಗಳಿಗೆ 2,000 ರೂ ದಂಡವನ್ನು ವಿಧಿಸಲಾಗುತ್ತದೆ.
ಸ್ಟ್ರಾಪ್ ಲಾಕ್ ಆಗಿರುವ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ ಏಕೆಂದರೆ ಅದು ಇಲ್ಲದೆ, ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಹಾರಿಹೋಗಬಹುದು. ಗರಿಷ್ಟ ಸುರಕ್ಷತೆಯನ್ನು ಒದಗಿಸಲು ಹೆಲ್ಮೆಟ್ ತಲೆಯ ಸುತ್ತಲೂ ದೃಢವಾಗಿ ಉಳಿಯಬೇಕು. ಚಲನ್‌ಗಳನ್ನು ತಪ್ಪಿಸುವ ಸಲುವಾಗಿ ಹಲವಾರು ದ್ವಿಚಕ್ರ ವಾಹನ ಸವಾರರು ತಮ್ಮ ತಲೆಯ ಮೇಲೆ ಹೆಲ್ಮೆಟ್ ಅನ್ನು ಸರಳವಾಗಿ ಇಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗಾಗಿ ಜನರನ್ನು ಎಚ್ಚರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Fri, 20 May 22