ಬಹುನಿರೀಕ್ಷಿತ ಐಕ್ಯೂ Z8, ಐಕ್ಯೂ Z8x ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್

|

Updated on: Sep 01, 2023 | 1:41 PM

iQoo Z8, iQoo Z8x Launched: ಐಕ್ಯೂ Z8 ಮತ್ತು ಐಕ್ಯೂ Z8x ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಈ ಸ್ಮಾರ್ಟ್​ಫೋನ್​ಗಳು ಮೂರು ಶೇಖರಣಾ ಆಯ್ಕೆಗಳಲ್ಲಿ ಲಭ್ಯವಿದೆ. 44W ವೈರ್ಡ್ ಫ್ಲ್ಯಾಷ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 6,000mAh ಬ್ಯಾಟರಿ ನೀಡಲಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಬಹುನಿರೀಕ್ಷಿತ ಐಕ್ಯೂ Z8, ಐಕ್ಯೂ Z8x ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್
iQoo Z8, iQoo Z8x
Follow us on

ಪ್ರಸಿದ್ಧ ಐಕ್ಯೂ ಕಂಪನಿ ತನ್ನ ಬಹುನಿರೀಕ್ಷಿತ ಐಕ್ಯೂ Z8 (iQoo Z8) ಮತ್ತು ಐಕ್ಯೂ Z8x ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿದೆ. ಹೊಸ Z-ಸರಣಿಯ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 13-ಆಧಾರಿತ OriginOS 3.0 ನೊಂದಿಗೆ ರನ್ ಆಗಲಿದೆ. ಇದು ಐಕ್ಯೂ Z7 ಮತ್ತು ಐಕ್ಯೂ Z7x ಫೋನಿನ ಉತ್ತರಾಧಿಕಾರಿಯಾಗಿದೆ. ಐಕ್ಯೂ Z8 ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ನಿಂದ ಚಾಲಿತವಾಗಿದ್ದರೆ, ಐಕ್ಯೂ Z8x ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಸದ್ಯ ಈ ಫೋನ್ ಚೀನಾದಲ್ಲಿ ಮಾತ್ರ ರಿಲೀಸ್ ಆಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಐಕ್ಯೂ Z8, ಐಕ್ಯೂ Z8x ಬೆಲೆ, ಲಭ್ಯತೆ:

ಐಕ್ಯೂ Z8 ಮತ್ತು ಐಕ್ಯೂ Z8x ಸ್ಮಾರ್ಟ್​ಫೋನ್​ಗಳು ಮೂರು ಶೇಖರಣಾ ಆಯ್ಕೆಗಳಲ್ಲಿ ಲಭ್ಯವಿದೆ. ಐಕ್ಯೂ Z8 ನ 8GB + 256GB ರೂಪಾಂತರದ ಬೆಲೆ CNY 1,699 (ಸುಮಾರು ರೂ. 19,300), 12GB + 256GB ಮತ್ತು 12GB + 512GB ಸ್ಟೋರೇಜ್ ಸಾಮರ್ಥ್ಯದ ಬೆಲೆ ಕ್ರಮವಾಗಿ CNY 1,799 (ಸರಿಸುಮಾರು 20,5000), CNY 1,999 (ಸುಮಾರಿ 22,800).

ಸೆಟಲೈಟ್ ಕಾಲ್ ಬೆಂಬಲ: ಸದ್ದಿಲ್ಲದೆ ಮಾರುಕಟ್ಟೆಗೆ ಅಪ್ಪಳಿಸಿದ ಹುವೈ ಮೇಟ್ 60 ಪ್ರೊ ಸ್ಮಾರ್ಟ್​ಫೋನ್: ಬೆಲೆ?

ಇದನ್ನೂ ಓದಿ
ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ಮೋಟೋ G84 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
ನೀವು ಫೋಟೋಗ್ರಫಿ ಪ್ರಿಯರ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್
ಬಲಿಷ್ಠ ಪ್ರೊಸೆಸರ್, ಬ್ಯಾಟರಿ, ಆಕರ್ಷಕ ಕ್ಯಾಮೆರಾ: ಭಾರತದಲ್ಲಿ ಐಕ್ಯೂ Z7 ಪ್ರೊ 5G ಫೋನ್ ಬಿಡುಗಡೆ: ಬೆಲೆ ಎಷ್ಟು?
ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು

ಐಕ್ಯೂ Z8x ನ 8GB + 128GB ರೂಪಾಂತರದ ಬೆಲೆ CNY 1,299 (ಸುಮಾರು ರೂ. 14,800), 8GB + 256GB ಮತ್ತು 12GB + 256GB ಆಯ್ಕೆಗಳ ಬೆಲೆ ಕ್ರಮವಾಗಿ CNY 1,399 (ಸುಮಾರು16,000ರೂ. ), CNY 1,499 (ಸುಮಾರು ರೂ. 17,100). ಈ ಫೋನ್‌ಗಳು ಪ್ರಸ್ತುತ ಚೀನಾದಲ್ಲಿ ಮುಂಗಡ-ಬುಕ್ಕಿಂಗ್​ಗೆ ಲಭ್ಯವಿವೆ ಮತ್ತು ಸೆಪ್ಟೆಂಬರ್ 7 ರಿಂದ ಮಾರಾಟವಾಗಲಿದೆ.

ಐಕ್ಯೂ Z8, ಐಕ್ಯೂ Z8x ಫೀಚರ್ಸ್:

ಈ ಎರಡೂ ಸ್ಮಾರ್ಟ್​ಫೋನ್​ಗಳು 6.64-ಇಂಚಿನ IPS ಪೂರ್ಣ-HD+ (2400 x 1080 ಪಿಕ್ಸೆಲ್‌ಗಳು) LCD ಡಿಸ್ ಪ್ಲೇಯೊಂದಿಗೆ ಬರುತ್ತದೆ. 120Hz ನ ರಿಫ್ರೆಶ್ ದರ ಮತ್ತು 19:9 ರ ಅನುಪಾತವಿದೆ. ಆಂಡ್ರಾಯ್ಡ್ 13-ಆಧಾರಿತ OriginOS 3.0 ಔಟ್-ಆಫ್-ದಿ-ಬಾಕ್ಸ್ ಮೂಲಕ ರನ್ ಮಾಡುತ್ತಾರೆ. ಐಕ್ಯೂ Z8 ಫೋನಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ನೀಡಿದ್ದರೆ, ಐಕ್ಯೂ Z8x ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

ಐಕ್ಯೂ Z8 ನ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಒಳಗೊಂಡಿದೆ. ಐಕ್ಯೂ Z8x, OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಸೆಲ್ಫಿಗಾಗಿ, ಐಕ್ಯೂ Z8 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಐಕ್ಯೂ Z8x ನಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

ಐಕ್ಯೂ Z8 120W ವೈರ್ಡ್ ಅಲ್ಟ್ರಾ-ಫ್ಲ್ಯಾಶ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಆದರೆ ಐಕ್ಯೂ Z8x 44W ವೈರ್ಡ್ ಫ್ಲ್ಯಾಷ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 6,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ, ಈ ಫೋನ್‌ಗಳು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳು ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿವೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G, Wi-Fi 6, ಬ್ಲೂಟೂತ್ v5.3, GPS ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ