AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು

How to Clean Laptop: ಲ್ಯಾಪ್​ಟಾಪ್ ಡಿಸ್ ಪ್ಲೇಯನ್ನು ಸ್ವಚ್ಛಗೊಳಿಸುವ ಸಂದರ್ಭ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಸಾವಿರಾರು ರೂಪಾಯಿ ನಷ್ಟವಾಗಬಹುದು. ಲ್ಯಾಪ್‌ಟಾಪ್ ಅನ್ನು ಸ್ವಚ್ಛಗೊಳಿಸುವಾಗ ಕಾಳಜಿ ವಹಿಸಬೇಕಾದ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು
Laptop Cleaning
Vinay Bhat
|

Updated on: Aug 31, 2023 | 12:07 PM

Share

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು (Laptops) ಬಹುತೇಕ ಎಲ್ಲರೂ ಹೊಂದಿರುವ ಪ್ರಮುಖ ಸಾಧನವಾಗಿದೆ. ಇದನ್ನು ಕಚೇರಿಯಿಂದ ಮನೆಗೆ- ಮನೆಯಿಂದ ಕಚೇರಿಗೆ ಸದಾ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಕೂಡ ಇಂದು ಲ್ಯಾಪ್‌ಟಾಪ್ ಬಳಸುತ್ತಾರೆ. ಲ್ಯಾಪ್​ಟಾಪ್​ನಲ್ಲಿ ಸ್ಕ್ರೀನ್ ಎಂಬುದು ತುಂಬಾ ಸೆನ್ಸಿಟಿವ್ ವಸ್ತು. ಸಣ್ಣದೊಂದು ಸ್ಕ್ರಾಚ್ ಅಥವಾ ರಾಸಾಯನಿಕಗಳ ಬಳಕೆಯು ಡಿಸ್ ಪ್ಲೇಯನ್ನು ಹಾನಿಗೊಳಿಸುತ್ತದೆ.

ಲ್ಯಾಪ್​ಟಾಪ್ ಡಿಸ್ ಪ್ಲೇಯನ್ನು ಸ್ವಚ್ಛಗೊಳಿಸುವ ಸಂದರ್ಭ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಸಾವಿರಾರು ರೂಪಾಯಿ ನಷ್ಟವಾಗಬಹುದು. ಲ್ಯಾಪ್‌ಟಾಪ್ ಅನ್ನು ಸ್ವಚ್ಛಗೊಳಿಸುವಾಗ ಕಾಳಜಿ ವಹಿಸಬೇಕಾದ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್: ರಿಲೀಸ್ ಆಯಿತು ರಿಯಲ್ ಮಿ GT 5 ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ಸೆಟಲೈಟ್ ಕಾಲ್ ಬೆಂಬಲ: ಸದ್ದಿಲ್ಲದೆ ಮಾರುಕಟ್ಟೆಗೆ ಅಪ್ಪಳಿಸಿದ ಹುವೈ ಮೇಟ್ 60 ಪ್ರೊ ಸ್ಮಾರ್ಟ್​ಫೋನ್: ಬೆಲೆ?
Image
ಐಫೋನ್ 15 ಸರಣಿ ಬಿಡುಗಡೆ ದಿನಾಂಕ ಘೋಷಿಸಿದ ಆ್ಯಪಲ್: ಯಾವಾಗ?
Image
SIM Card Port: ಒಂದು ಸಿಮ್ ಕಾರ್ಡ್​ ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತಾ?
Image
108MP ಕ್ಯಾಮೆರಾದ ಸ್ಮಾರ್ಟ್​ಫೋನ್ ಬೇಕೇ?: ಇದೀಗ ಸೇಲ್ ಕಾಣುತ್ತಿದೆ ರಿಯಲ್ ಮಿ 11 5G

ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಹೀಗೆ ಮಾಡಬೇಡಿ:

  • ಲ್ಯಾಪ್‌ಟಾಪ್ ಪರದೆಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕಗಳನ್ನು ಬಳಸದಂತೆ ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ. ಹಾಗೊಂದು ವೇಳೆ ನೀವು ಮಾಡಿದರೆ ಲ್ಯಾಪ್​ಟಾಪ್ ಪರದೆ ಹಾಗೂ ಹಾರ್ಡ್‌ವೇರ್ ಹಾನಿಗೊಳಗಾಗಬಹುದು.
  • ಸ್ಕ್ರೀನ್​ನಿಂದ ಧೂಳನ್ನು ತೆಗೆದುಹಾಕಲು ಯಾವುದೇ ರೀತಿಯ ಸ್ಪ್ರೇ ಅನ್ನು ಬಳಸಬೇಡಿ. ಇದು ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಮೇಲೆ ಪರಿಣಾಂ ಬೀರುತ್ತದೆ.
  • ಸ್ಕ್ರೀನ್ ಸ್ವಚ್ಛಗೊಳಿಸಲು ಆಲ್ಕೋಹಾಲ್ ಅಥವಾ ಯಾವುದೇ ರಾಸಾಯನಿಕಗಳನ್ನು ಬಳಸಬೇಡಿ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಟಿವಿಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಬಳಸಲಾಗುತ್ತದೆ. ರಾಸಾಯನಿಕಗಳು ಅದನ್ನು ಹಾನಿಗೊಳಿಸಬಹುದು.

ಸ್ವಚ್ಛಗೊಳಿಸುವುದು ಹೇಗೆ?:

  • ಲ್ಯಾಪ್‌ಟಾಪ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು ಒಣ ಹತ್ತಿ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.
  • ನೀವು ಉಪಯೋಗಿಸುವ ಬಟ್ಟೆ ಕೂಡ ಸ್ವಚ್ಛವಾಗಿರಬೇಕು. ಸ್ಕ್ರೀನ್ ಸ್ಕ್ರಾಚ್ ಆಗದಂತೆ ಬಟ್ಟೆಯಿಂದ ಒರಸಬೇಕು.
  • ಡಿಸ್ ಪ್ಲೇಯನ್ನು ಶುಚಿಗೊಳಿಸುವಾಗ, ಒತ್ತಡ ಹೇರಬಾರದು ಮತ್ತು ಹಾನಿಯಾಗದಂತೆ ನಿಮ್ಮ ಕೈಗಳಿಂದ ಮೃದುವಾಗಿ ಉಜ್ಜಬೇಕು.
  • ಸ್ಕ್ರೀನ್ ಕಲೆಯಾಗಿದ್ದರೆ, ಮೊದಲು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ. ನಂತರ ನೀವು ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಸ್ಕ್ರೀನ್ ಅನ್ನು ಒರೆಸಬಹುದು. ಆದರೆ ಒಳಗೆ ನೀರು ಬರದಂತೆ ಎಚ್ಚರವಹಿಸಿ.
  • ಪರದೆಯು ಇನ್ನೂ ಸ್ವಚ್ಛವಾಗದಿದ್ದರೆ, ಮೈಕ್ರೋಫೈಬರ್ ಬಟ್ಟೆಗೆ ಸ್ವಲ್ಪ ಸ್ಯಾನಿಟೈಸರ್ ಅನ್ನು ಅನ್ವಯಿಸಿ ಮತ್ತು ಅದನ್ನು ನಿಧಾನವಾಗಿ ಉಜ್ಜಿಕೊಳ್ಳಿ.
  • ಇದು LCD ಪರದೆಯಾಗಿದ್ದರೆ, ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಬೇಡಿ. ಹಾಗೆಯೆ ಲ್ಯಾಪ್​ಟಾಪ್ ಸ್ಕ್ರೀನ್ ಅನ್ನು ವೃತ್ತಾಕಾರದ ಮೂಲಕ ಸ್ವಚ್ಛಗೊಳಿಸುವಾಗ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು