ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್: ರಿಲೀಸ್ ಆಯಿತು ರಿಯಲ್ ಮಿ GT 5 ಸ್ಮಾರ್ಟ್ಫೋನ್
Realme GT 5 Launched: ರಿಯಲ್ ಮಿ GT 5 ಸ್ಮಾರ್ಟ್ಫೋನ್ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್ ನೀಡಲಾಗಿದ್ದು, 24GB ಯ RAM ಆಯ್ಕೆ ಕೂಡ ಇದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಸಿದ್ಧ ರಿಯಲ್ ಮಿ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಈಗ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಬಲಿಷ್ಠ ಪ್ರೊಸೆಸರ್, ಫಾಸ್ಟ್ ಚಾರ್ಜರ್ ಮೇಲೆ ಹೆಚ್ಚು ಗಮನವಿಟ್ಟು ಆಕರ್ಷಕ ಮೊಬೈಲ್ ಅನ್ನು ಪರಿಚಯಿಸುತ್ತಿರುವ ರಿಯಲ್ ಮಿ ಇದೀಗ ತನ್ನ GT ಸರಣಿಯ ಅಡಿಯಲ್ಲಿ ನೂತನವಾದ ರಿಯಲ್ ಮಿ GT 5 (Realme GT 5) ಸ್ಮಾರ್ಟ್ಫೋನನ್ನು ರಿಲೀಸ್ ಮಾಡಿದೆ. ಈ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್ ನೀಡಲಾಗಿದ್ದು, 24GB ಯ RAM ಆಯ್ಕೆ ಕೂಡ ಇದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ರಿಯಲ್ ಮಿ GT 5 ಬೆಲೆ, ಲಭ್ಯತೆ:
ರಿಯಲ್ ಮಿ GT 5 ಸ್ಮಾರ್ಟ್ಫೋನ್ ಸದ್ಯಕ್ಕೆ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಚೀನಾದಲ್ಲಿ ಅನಾವರಣಗೊಂಡಿದೆ. ಇದರ 12GB RAM ಮತ್ತು 256GB ಸಂಗ್ರಹಕ್ಕೆ CNY 2,999. 16GB + 512GB ಸ್ಟೋರೇಜ್ ಕಾನ್ಫಿಗರೇಶನ್ಗೆ CNY 3,299. ಅಂತೆಯೆ 24GB RAM + 1TB ಸ್ಟೋರೇಜ್ ಆಯ್ಕೆಗೆ CNY 3,799 ನಿಗದಿ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ ಫ್ಲೋಯಿಂಗ್ ಸಿಲ್ವರ್ ಇಲ್ಯೂಷನ್ ಮಿರರ್ ಮತ್ತು ಸ್ಟಾರ್ರಿ ಓಯಸಿಸ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಸೆಪ್ಟೆಂಬರ್ 4 ರಿಂದ ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ಚೀನಾದಲ್ಲಿ ಮಾರಾಟವಾಗಲಿದೆ.
ರಿಯಲ್ ಮಿ GT 5 ಫೀಚರ್ಸ್:
ಡ್ಯುಯಲ್-ಸಿಮ್ (ನ್ಯಾನೋ) ರಿಯಲ್ ಮಿ GT 5 ಆಂಡ್ರಾಯ್ಡ್ 13 ಆಧಾರಿತ ರಿಯಲ್ ಮಿ UI 4 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.74-ಇಂಚಿನ ಪೂರ್ಣ-HD+ (1,240×2,772 ಪಿಕ್ಸೆಲ್‌ಗಳು) ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್ ಮತ್ತು 93.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ. ಈ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 8 Gen 2 SoC ಯಿಂದ 24GB ವರೆಗಿನ LPDDR5X RAM ನೊಂದಿಗೆ ಜೋಡಿಸಲ್ಪಟ್ಟಿದೆ.
ಕೇವಲ 999 ರೂ. ವಿನ ಜಿಯೋ ಭಾರತ್ 4G ಫೋನ್ ಇದೀಗ ಖರೀದಿಗೆ ಲಭ್ಯ
ಈ ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಇದೆ. 50-ಮೆಗಾಪಿಕ್ಸೆಲ್ನ ಮುಖ್ಯ ಕ್ಯಾಮೆರಾ ಸೋನಿ IMX890 ಸಂವೇದಕ ಮತ್ತು f/1.88 ಅಪರ್ಚರ್ ರೇಟ್ನೊಂದಿಗೆ ನೀಡಲಾಗಿದೆ. 112-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು f/2 ಜೊತೆಗೆ 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಇದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗ ಸ್ಯಾಮ್‌ಸಂಗ್ S5K3P9 ಸಂವೇದಕ ಮತ್ತು f/2.45 ದ್ಯುತಿರಂಧ್ರದೊಂದಿಗೆ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ರಿಯಲ್ ಮಿ GT 5 ಫೋನ್ ಎರಡು ಬ್ಯಾಟರಿ ಚಾರ್ಜಿಂಗ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. 150W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,240mAh ಬ್ಯಾಟರಿ ಮತ್ತು 240W ವೇಗದ ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿ ಆಯ್ಕೆ ಇದೆ. 240W ವೇಗದ ಚಾರ್ಜಿಂಗ್ ಆಯ್ಕೆ 24GB RAM + 1TB ಸ್ಟೋರೇಜ್ಗೆ ಮಾತ್ರ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS, A-GPS ಒಳಗೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ