AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ ಯುವ ಭಾರತಕ್ಕೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

U19 Cricket World Cup: ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲೆಯ 6ನೇ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ಯುವ ಪಡೆಗೆ ಬಿಸಿಸಿಐ ಭಾರಿ ಬಹುಮಾನ ಘೋಷಿಸಿದೆ. ಫೈನಲ್‌ನಲ್ಲಿ 311 ರನ್ ಗಳಿಸಿ, ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ತಂಡದ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ 7.5 ಕೋಟಿ ರೂ. ನಗದು ಬಹುಮಾನ ದೊರೆಯಲಿದೆ. ಈ ಗೆಲುವು ಭಾರತದ ಕ್ರಿಕೆಟ್ ಕೀರ್ತಿಯನ್ನು ಹೆಚ್ಚಿಸಿದೆ.

ಪೃಥ್ವಿಶಂಕರ
|

Updated on:Feb 07, 2026 | 4:36 PM

Share
ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್​ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಸಿದ ಭಾರತ ಯುವ ಪಡೆ ದಾಖಲೆಯ 6ನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆಯುಷ್ ಮ್ಹಾತ್ರೆ ತಂಡದ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ವಿಶ್ವ ಕ್ರಿಕೆಟ್​ ಮುಂದೆ ಭಾರತದ ಕೀರ್ತಿ ಪತಾಕೆಯನ್ನು  ಮತ್ತೊಮ್ಮೆ ಹಾರಿಸಿದ ಯುವ ಟೀಂ ಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿದೆ.

1 / 5
ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ದಾಖಲೆಯ 311 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 311 ರನ್​ಗಳಿಗೆ ಆಲೌಟ್ ಆಗಿ 100 ರನ್​ಗಳಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಚಾಂಪಿಯನ್ ಭಾರತಕ್ಕೆ ಐಸಿಸಿ ಕಡೆಯಿಂದ ಟ್ರೋಫಿ ಹಾಗೂ ಪದಕ ಸಿಕ್ಕಿತ್ತು. ಆದರೆ ನಗದು ರೂಪದಲ್ಲಿ ಯಾವುದೇ ಬಹುಮಾನ ಸಿಕ್ಕಿರಲಿಲ್ಲ.

2 / 5
ವಾಸ್ತವವಾಗಿ ಈ ಪಂದ್ಯಾವಳಿಯನ್ನು ಯುವ ಆಟಗಾರರಿಗೆ ಅಭಿವೃದ್ಧಿ ವೇದಿಕೆಯಾಗಿ ಆಡಲಾಗುತ್ತಿರುವುದರಿಂದ ಐಸಿಸಿ ಅಂಡರ್-19 ಮಟ್ಟದಲ್ಲಿ ಯಾವುದೇ ನಗದು ಬಹುಮಾನವನ್ನು ವಿತರಿಸುವುದಿಲ್ಲ. ಹೀಗಾಗಿ ಟ್ರೋಫಿ ಮತ್ತು ಪದಕದೊಂದಿಗೆ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳುತ್ತಿದ್ದಾರೆ. ಇದೀಗ ಬಿಸಿಸಿಐ ಚಾಂಪಿಯನ್ ಭಾರತ ತಂಡಕ್ಕೆ ಭರ್ಜರಿ ನಗದು ಬಹುಮಾನ ಘೋಷಿಸಿದೆ.

3 / 5
ಇಂಗ್ಲೆಂಡ್‌ ತಂಡವನ್ನು ಮಣಿಸಿ 6ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದ್ದ ಭಾರತ ಯುವ ಪಡೆಗೆ ಬಿಸಿಸಿಐ 7.5 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಹುಮಾನದ ಮೊತ್ತವನ್ನು ಈ ಪಂದ್ಯಾವಳಿಯಲ್ಲಿ ತಂಡದ ಭಾಗವಾಗಿದ್ದ ಆಟಗಾರರು, ಕೋಚಿಂಗ್ ಸಿಬ್ಬಂದಿಗಳಿಗೆ ಹಂಚಲಾಗುವುದು. ಬಿಸಿಸಿಐ ಈ ರೀತಿ ಬಹುಮಾನ ಘೋಷಿಸಿರುವುದು ಇದೇ ಮೊದಲಲ್ಲ.

4 / 5
ಇದಕ್ಕೂ ಮುನ್ನ ಬಿಸಿಸಿಐ ಅಂಡರ್ 19 ವಿಶ್ವಕಪ್ ಗೆದ್ದ ತಂಡಗಳಿಗೆ ನಗದು ಬಹುಮಾನ ಘೋಷಿಸಿತ್ತು. 2024 ರ ಅಂಡರ್ 19 ವಿಶ್ವಕಪ್‌ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 30 ಲಕ್ಷ ರೂ. ಬಹುಮಾನ ನೀಡಿತ್ತು. ಅದೇ ರೀತಿ, 2025 ರ ಮಹಿಳಾ ಅಂಡರ್-19 ಟಿ20 ವಿಶ್ವಕಪ್‌ ಗೆದ್ದಿದ್ದ ವನಿತಾ ಪಡೆಗೆ ಬಿಸಿಸಿಐ 5 ಕೋಟಿ ರೂ. ಬಹುಮಾನ ನೀಡಿತ್ತು. ಅದರಂತೆ ಈ ಬಾರಿಯೂ ಸಹ ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತರಬೇತಿ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದೆ.

5 / 5

Published On - 4:36 pm, Sat, 7 February 26

ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ

ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ

ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು

ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್

ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!

ಶೋಗಾಗಿ ಮತ್ತೆ ಒಂದಾದ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ

ಒಪ್ಪಂದ ಆಗಿದೆ, ನಾವು ಡಿಕೆಶಿಗಾಗಿ ಪ್ರಾಣ ಕೊಡಲೂ ಸಿದ್ಧ: ಬಸವರಾಜ ಶಿವಗಂಗಾ

T20 World Cup 2026: ಇಟಲಿ ಮುಂದೆ ಯುಎಇ ಪಲ್ಟಿ!

ಶಾಸಕರು, ರಾಜ್ಯದ ಜನರಿಗೆ ನಾನೇ ಸಿಎಂ ಆಗಬೇಕೆಂದಿದೆ: ಡಿಕೆ ಶಿವಕುಮಾರ್

ಎರಡಂಕಿ ಮೊತ್ತಕ್ಕೆ ನಮೀಬಿಯ ಆಲೌಟ್: ಭಾರತಕ್ಕೆ ಭರ್ಜರಿ ಜಯ