AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ; ವಿಡಿಯೋ ವೈರಲ್

ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Feb 07, 2026 | 8:17 PM

Share

ಪ್ರಧಾನಿ ಮೋದಿ ಅವರನ್ನು ಮಲೇಷ್ಯಾದಲ್ಲಿ ಸ್ವಾಗತಿಸಲು ಭಾರತೀಯ ನೃತ್ಯವನ್ನು ಪ್ರದರ್ಶಿಸಲಾಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತೀಯ ಸಾಂಸ್ಕೃತಿಕ ಕೇಂದ್ರ (NSCBICC) ಕೌಲಾಲಂಪುರ್‌ನಲ್ಲಿ ಭಾರತೀಯ ಸಂಸ್ಕೃತಿಯ ಅದ್ಭುತ ಪ್ರದರ್ಶನವನ್ನು ಆಯೋಜಿಸಿ ಗಮನ ಸೆಳೆಯಿತು. ಭಾರತೀಯ ಸಮುದಾಯ ಮಲೇಷ್ಯಾದ ಸಾಂಸ್ಕೃತಿಕ ಸಮಿತಿಯ ಬ್ಯಾನರ್ ಅಡಿಯಲ್ಲಿ ಸುಮಾರು 800 ನರ್ತಕರು ಒಂದೇ ಬಾರಿಗೆ ನಿರಂತರ 5 ನಿಮಿಷಗಳ ಕಾಲ ನೃತ್ಯ ಪ್ರದರ್ಶಿಸಿದರು. ಇದು ವಿವಿಧ ರೀತಿಯ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.

ಕೌಲಾಲಂಪುರ, ಫೆಬ್ರವರಿ 7: ಪ್ರಧಾನಿ ಮೋದಿ ಇಂದು ತಮ್ಮ 2 ದಿನಗಳ ಭೇಟಿಗಾಗಿ ಮಲೇಷ್ಯಾಕ್ಕೆ ಆಗಮಿಸಿದರು. ಈ ವೇಳೆ 800ಕ್ಕೂ ಹೆಚ್ಚು ನೃತ್ಯಗಾರರಿಂದ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರಧಾನಿ ಮೋದಿಯವರಿಗೆ (PM Modi in Malaysia) ವಿನೂತನವಾಗಿ ಸ್ವಾಗತ ಕೋರಲಾಯಿತು. ವಿದೇಶಿ ನೆಲದಲ್ಲಿ ನೂರಾರು ಜನರು ಪ್ರದರ್ಶಿಸಿದ ಭರತನಾಟ್ಯ ಕಂಡು ಪ್ರಧಾನಿ ಮೋದಿ ಅಚ್ಚರಿಗೊಂಡರು. ಈ ವೇಳೆ ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಘೋಷಣೆಗಳು ಮಾರ್ದನಿಸಿದವು.

ಪ್ರಧಾನಿ ಮೋದಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಸಮುದಾಯ ಕಾರ್ಯಕ್ರಮದ ಭಾಗವಾದ ಈ ಪ್ರದರ್ಶನವನ್ನು ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣೀಕರಿಸಿದೆ. ಭಾರತೀಯ ಸಮುದಾಯ ಮಲೇಷ್ಯಾದ ಸಾಂಸ್ಕೃತಿಕ ಸಮಿತಿಯ ಬ್ಯಾನರ್ ಅಡಿಯಲ್ಲಿ ಸುಮಾರು 800 ನರ್ತಕರು ಒಂದೇ ಬಾರಿಗೆ ನಿರಂತರ 5 ನಿಮಿಷಗಳ ಕಾಲ ನೃತ್ಯ ಪ್ರದರ್ಶಿಸಿದರು. ಇದು ವಿವಿಧ ರೀತಿಯ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ