ಬರೋಬ್ಬರಿ 24GB RAM: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ರಿಯಲ್ ಮಿ ಜಿಟಿ 5 ಸ್ಮಾರ್ಟ್​ಫೋನ್

24GB RAM Realme GT 5 Smartphone: ರಿಯಲ್ ಮಿ ಜಿಟಿ 5 ಸ್ಮಾರ್ಟ್​ಫೋನ್ ಬಿಡುಗಡೆ ಯಾವಾಗ ಎಂಬ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದು ಮುಂಬರುವ ದಿನಗಳಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ನ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ.

ಬರೋಬ್ಬರಿ 24GB RAM: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ರಿಯಲ್ ಮಿ ಜಿಟಿ 5 ಸ್ಮಾರ್ಟ್​ಫೋನ್
realme gt 5
Follow us
Vinay Bhat
|

Updated on: Aug 17, 2023 | 2:26 PM

ಪ್ರಸಿದ್ಧ ರಿಯಲ್ ಮಿ ಕಂಪನಿ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ನೂತನ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತದೆ. ಈಗಾಗಲೇ ತನ್ನ ರಿಯಲ್ ಮಿ 11 ಮತ್ತು ರಿಯಲ್ ಮಿ 11X ಫೋನನ್ನು ಆಗಸ್ಟ್ 23 ರಂದು ಭಾರತದಲ್ಲಿ ಅನಾವರಣ ಮಾಡುವುದಾಗಿ ಘೋಷಿಸಿದೆ. ಹೀಗಿರುವಾಗ ರಿಯಲ್ ಮಿ ಸಂಸ್ಥೆಯ ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಬಗ್ಗೆ ಸುದ್ದಿ ಹೊರಬಿದ್ದಿದೆ. ಇದರ ಹೆಸರು ರಿಯಲ್ ಮಿ ಜಿಟಿ 5 (Realme GT 5). ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಬರೋಬ್ಬರಿ 24GB RAM ಆಯ್ಕೆ ನೀಡಲಾಗಿದೆಯಂತೆ. ಜೊತೆಗೆ ಹೊಚ್ಚ ಹೊಸ ಕ್ವಾಲ್ಕಂನ ಪ್ರೊಸೆಸರ್ ಕೂಡ ಅಳವಡಿಸಲಾಗಿದೆ.

ರಿಯಲ್ ಮಿ ಜಿಟಿ 5 ಸ್ಮಾರ್ಟ್​ಫೋನ್ ಬಿಡುಗಡೆ ಯಾವಾಗ ಎಂಬ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದು ಮುಂಬರುವ ದಿನಗಳಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಂನ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ. ಇದನ್ನು ರಿಯಲ್ ಮಿಯ ಚೀನಾ ಅಧ್ಯಕ್ಷ ಕ್ಸು ಕಿ ಚೇಸ್ ಖಚಿತ ಪಡಿಸಿದ್ದಾರೆ. ಈ ಫೋನ್​ನಲ್ಲಿ “ಕಿಲ್ಲರ್ ವೈಶಿಷ್ಟ್ಯ” ಇರಲಿದೆ ಎಂದು ಕೂಡ ಹೇಳಿದ್ದಾರೆ.

ಒನ್​ಪ್ಲಸ್​ನ ಬಹುನಿರೀಕ್ಷಿತ ಏಸ್ 2 ಪ್ರೊ ​ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ

ಇದನ್ನೂ ಓದಿ
Image
ಕೆಲವೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ರಿಯಲ್ ಮಿ 11, ರಿಯಲ್ ಮಿ 11X ಸ್ಮಾರ್ಟ್​ಫೋನ್
Image
ನೋಕಿಯಾ ಕಮ್​ಬ್ಯಾಕ್?: ಒಂದೇ ದಿನ ಎರಡು ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ
Image
3 ವರ್ಷಗಳ ಬಳಿಕ ಭಾರತಕ್ಕೆ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್: ರಿಲೀಸ್ ಮಾಡುತ್ತಿರುವ ಹೊಸ ಫೋನ್ ಯಾವುದು ನೋಡಿ
Image
ಆ್ಯಪಲ್​ನಿಂದ ಐಫೋನ್ ಬಳಕೆದಾರರಿಗೆ ಎಚ್ಚರಿಕೆ: ಮಲಗುವಾಗ ತಪ್ಪಿಯೂ ಹೀಗೆ ಮಾಡಬೇಡಿ

ರಿಯಲ್ ಮಿ ಜಿಟಿ 5 ನಲ್ಲಿ ಅಳವಡಿಸಲಾಗಿರುವ ಸ್ನಾಪ್​ಡ್ರಾಗನ್ 8 Gen 2 ಚಿಪ್‌ಸೆಟ್ ಅನ್ನು ನಿನ್ನೆಯಷ್ಟೆ ಬಿಡುಗಡೆ ಆದ ಒನ್​ಪ್ಲಸ್ ಏಸ್ 2 ಪ್ರೊ ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಆಲ್ಟ್ರಾ ಫೋನ್​ಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್​ಫೋನ್ LPDDR5x RAM ಮತ್ತು UFS 4.0 ಸಂಗ್ರಹಣೆಯನ್ನು ಹೊಂದಿದೆ. ಇದರಲ್ಲಿ ಬಲಿಷ್ಠ ಪ್ರೊಸೆಸರ್ ಜೊತೆಗೆ 240W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆಯಂತೆ. ಇದು ಪ್ರಸ್ತುತ ರಿಯಲ್ ಮಿ ಜಿಟಿ 3 ಯಲ್ಲಿ ಕಂಡುಬರುತ್ತದೆ (ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ).

ಇನ್ನೊಂದು ವರದಿಯ ಪ್ರಕಾರ, ರಿಯಲ್ ಮಿ ಜಿಟಿ 5 ಎರಡು ವೇಗದ ಚಾರ್ಜಿಂಗ್ ರೂಪಾಂತರಗಳಲ್ಲಿ ಬರಬಹುದು ಎಂದು ಹೇಳಲಾಗಿದೆ. ಇದು 5,200mAh ಬ್ಯಾಟರಿ – 150W ಚಾರ್ಜಿಂಗ್ ಮತ್ತು 4,600mAh ಬ್ಯಾಟರಿ – 240W ವೇಗದ ಚಾರ್ಜಿಂಗ್ ಜೊತೆಗೆ ಅನಾವರಣಗೊಳ್ಳಲಿದೆಯಂತೆ.

ರಿಯಲ್ ಮಿ ಜಿಟಿ 5 ಫೀಚರ್ಸ್ ಏನಿರಬಹುದು?:

  • ಡಿಸ್ ಪ್ಲೇ: ರಿಯಲ್ ಮಿ ಜಿಟಿ 5 ಫೋನ್ 6.74-ಇಂಚಿನ 1.5K OLED ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ದರ ಹೊಂದಿರಬಹುದು.
  • ಪ್ರೊಸೆಸರ್: Adreno GPU ನೊಂದಿಗೆ ಜೋಡಿಸಲಾದ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ನೀಡಲಾಗಿದೆ.
  • RAM ಮತ್ತು ಸಂಗ್ರಹಣೆ : 24GB ವರೆಗೆ LPDDR5x RAM ಮತ್ತು 1TB UFS 4.0 ಸಂಗ್ರಹಣೆ.
  • OS : ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್.
  • ಕ್ಯಾಮೆರಾಗಳು : 50MP ಸೋನಿ IMX890 OIS ಜೊತೆಗೆ ಪ್ರಾಥಮಿಕ ಸೆನ್ಸಾರ್, 8MP ಸೆಕೆಂಡರಿ ಲೆನ್ಸ್ ಮತ್ತು 2MP ಮೂರನೇ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇರಬಹುದು.
  • ಬ್ಯಾಟರಿ : 240W ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿ ಮತ್ತು 150W ಚಾರ್ಜಿಂಗ್‌ನೊಂದಿಗೆ 5,200mAh ಬ್ಯಾಟರಿ ನಿರೀಕ್ಷಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ