ಒನ್​ಪ್ಲಸ್​ನ ಬಹುನಿರೀಕ್ಷಿತ ಏಸ್ 2 ಪ್ರೊ ​ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ

OnePlus Ace 2 Pro Launched: ಒನ್​ಪ್ಲಸ್ ಏಸ್ 2 ಪ್ರೊ ಸ್ಮಾರ್ಟ್​ಫೋನ್ ಸದ್ಯಕ್ಕೆ ಚೀನಾದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್‌ಕಾಮ್‌ನ ಟಾಪ್-ಆಫ್-ದಿ-ಲೈನ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ 24GB RAM ಮತ್ತು 1TB ವರೆಗೆ ಸಂಗ್ರಹಣೆ ಆಯ್ಕೆ ನೀಡಲಾಗಿದೆ.

ಒನ್​ಪ್ಲಸ್​ನ ಬಹುನಿರೀಕ್ಷಿತ ಏಸ್ 2 ಪ್ರೊ ​ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ
OnePlus Ace 2 Pro
Follow us
Vinay Bhat
|

Updated on: Aug 17, 2023 | 10:19 AM

ಒನ್​ಪ್ಲಸ್ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಈಗೀಗ ತಿಂಗಳಿಗೆ ಒಂದರಿಂದ ಎರಡು ಮೊಬೈಲ್​ಗಳನ್ನು ಅನಾವರಣ ಮಾಡುತ್ತಿರುವ ಒನ್​ಪ್ಲಸ್ ಇದೀಗ ತನ್ನ ಹೊಸ ಏಸ್ 2 ಪ್ರೊ (OnePlus Ace 2 Pro) ಫೋನನ್ನು ರಿಲೀಸ್ ಮಾಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್‌ಕಾಮ್‌ನ ಟಾಪ್-ಆಫ್-ದಿ-ಲೈನ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ 24GB RAM ಮತ್ತು 1TB ವರೆಗೆ ಸಂಗ್ರಹಣೆ ಆಯ್ಕೆ ನೀಡಲಾಗಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಒನ್​ಪ್ಲಸ್ ಏಸ್ 2 ಪ್ರೊ ಬೆಲೆ, ಲಭ್ಯತೆ:

ಒನ್​ಪ್ಲಸ್ ಏಸ್ 2 ಪ್ರೊ ಸ್ಮಾರ್ಟ್​ಫೋನ್ ಸದ್ಯಕ್ಕೆ ಚೀನಾದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 12GB RAM ಮತ್ತು 256GB ಸಂಗ್ರಹಣೆಗೆ CNY 2,999, ಭಾರತದಲ್ಲಿ ಇದರ ಬೆಲೆ ಸುಮಾರು 34,600 ರೂ. ಅಂತೆಯೆ 16GB + 512GB ಮತ್ತು 24GB + 1TB RAMಗೆ ಕ್ರಮವಾಗಿ CNY 3,399 (ಸರಿಸುಮಾರು ರೂ. 39,200) ಮತ್ತು CNY 3,999 (ಸುಮಾರು ರೂ. 46,100) ಬೆಲೆ ನಿಗದಿ ಮಾಡಲಾಗಿದೆ. ಇದು ಔರಾ ಗ್ರೀನ್ ಮತ್ತು ಟೈಟಾನಿಯಂ ಆ್ಯಶ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಆಗಸ್ಟ್ 23 ರಿಂದ ಒನ್​ಪ್ಲಸ್​ನ ಆನ್‌ಲೈನ್ ಸ್ಟೋರ್ ಮೂಲಕ ಚೀನಾದಲ್ಲಿ ಖರೀದಿಸಬಹುದು.

Google Pixel 7 Pro: ಪ್ರೊ ಕ್ಯಾಮೆರಾ ರೇಂಜ್​ನ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ನೀವು ಪವರ್ ಬ್ಯಾಂಕ್ ಮೂಲಕ ಮೊಬೈಲ್ ಚಾರ್ಜ್ ಮಾಡ್ತೀರಾ?: ಹಾಗಿದ್ರೆ ಒಮ್ಮೆ ಇಲ್ಲಿ ಗಮನಿಸಿ
Image
ಮಾರುಕಟ್ಟೆಗೆ ಎಂಟ್ರಿಕೊಟ್ಟ ರೆಡ್ಮಿ K60 ಆಲ್ಟ್ರಾ ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?
Image
ಶವೋಮಿಯ ಹೊಸ ಫೋಲ್ಡೆಬಲ್ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಕೇಳಿ ದಂಗಾದ ಜನರು
Image
ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ: ಏರ್ಟೆಲ್ ಆಫರ್​ಗೆ ದಂಗಾದ ಜಿಯೋ

ಒನ್​ಪ್ಲಸ್ ಏಸ್ 2 ಪ್ರೊ ಫೀಚರ್ಸ್:

ಹೊಸ ಒನ್​ಪ್ಲಸ್ ಏಸ್ 2 ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13 ನ ColorOS 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ. 120Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ ಪೂರ್ಣ-HD+ (1,240×2,772 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಮತ್ತು 450ppi ಪಿಕ್ಸೆಲ್ ಸಾಂದ್ರತೆ ಇದೆ. ಈ ಫೋನ್ ರೈನ್ ವಾಟರ್ ಟಚ್ ತಂತ್ರಜ್ಞಾನದ ಜೊತೆ ಇನ್-ಹೌಸ್ ಟಚ್ ಅಲ್ಗಾರಿದಮ್ ಮತ್ತು ಫುಲ್-ಲಿಂಕ್ ಟಚ್ ಆಪ್ಟಿಮೈಸೇಶನ್‌ಗಳ ಮೇಲೆ ಅವಲಂಬಿತವಾಗಿದೆ. ಈ ಫೋನಿನ ಮೇಲೆ ಮಳೆ ನೀರು ಬಿದ್ದಾಗಲೂ ಕೆಲಸ ಮಾಡಲು ಅನುಮತಿಸುತ್ತದೆ. ಇದು 4nm ಸ್ನಾಪ್‌ಡ್ರಾಗನ್ 8 Gen 2 SoC ಮೂಲಕ 24GB ವರೆಗಿನ LPDDR5X RAM ನೊಂದಿಗೆ ಜೋಡಿಸಲ್ಪಟ್ಟಿದೆ.

ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಈ ಫೋನ್ ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾ ಸೋನಿ IMX890 ಸಂವೇದಕ ಮತ್ತು f/1.8 ದ್ಯುತಿರಂಧ್ರದೊಂದಿಗೆ 50-ಮೆಗಾಪಿಕ್ಸೆಲ್​ನದ್ದಾಗಿದೆ. f/2.2 ಅಪರ್ಚರ್ ಹೊಂದಿರುವ IMX355 ಸಂವೇದಕದೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ, ಮತ್ತು 2 f/2.4 ದ್ಯುತಿರಂಧ್ರದೊಂದಿಗೆ -ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗ 16-ಮೆಗಾಪಿಕ್ಸೆಲ್​ನ ಸ್ಯಾಮ್​ಸಂಗ್ S5K3P9 ಸಂವೇದಕದೊಂದಿಗೆ f/2.4 ದ್ಯುತಿರಂಧ್ರದ ಕ್ಯಾಮೆರಾವನ್ನು ನೀಡಲಾಗಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, ಡ್ಯುಯಲ್ ಬ್ಯಾಂಡ್ GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದು 150W SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಆವೃತ್ತವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ