ಆ್ಯಪಲ್​ನಿಂದ ಐಫೋನ್ ಬಳಕೆದಾರರಿಗೆ ಎಚ್ಚರಿಕೆ: ಮಲಗುವಾಗ ತಪ್ಪಿಯೂ ಹೀಗೆ ಮಾಡಬೇಡಿ

Apple iPhone: ಐಫೋನ್ ಅನ್ನು ಚಾರ್ಜ್​ಗೆ ಹಾಕಿ ಅದರ ಪಕ್ಕದಲ್ಲಿ ಮಲಗಿದರೆ ಅಥವಾ ನೀವು ಮಲಗುವ ಹತ್ತಿರವೇ ಐಫೋನ್ ಚಾರ್ಜ್​ಗೆ ಹಾಕಿದರೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ವಿದ್ಯುತ್ ಅವಘಡ ಸಂಭವಿಸಬಹುದು, ಅನೇಕ ಹಾನಿಯಾಗುವ ಸಾಧ್ಯತೆ ಇದೆ ಎಂದು ಆ್ಯಪಲ್ ಹೇಳಿದೆ.

ಆ್ಯಪಲ್​ನಿಂದ ಐಫೋನ್ ಬಳಕೆದಾರರಿಗೆ ಎಚ್ಚರಿಕೆ: ಮಲಗುವಾಗ ತಪ್ಪಿಯೂ ಹೀಗೆ ಮಾಡಬೇಡಿ
iPhone
Follow us
Vinay Bhat
|

Updated on: Aug 17, 2023 | 11:03 AM

ಪ್ರಸಿದ್ಧ ಆ್ಯಪಲ್ ಕಂಪನಿ ತನ್ನ ಐಫೋನ್ (iPhone) ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಐಫೋನ್ ಅನ್ನು ಚಾರ್ಜ್​ಗೆ ಹಾಕಿ ಅದರ ಪಕ್ಕದಲ್ಲಿ ಮಲಗಿದರೆ ಅಪಾಯ ಸಂಭವಿಸುತ್ತದೆ, ಇದರಿಂದ ಎಚ್ಚರ ವಹಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆ್ಯಪಲ್ ಕಂಪನಿಯ ಅಧಿಕೃತ ಚಾರ್ಜರ್ ಅನ್ನೇ ಬಳಸಿ, ಯಾವುದೇ ಥರ್ಡ್ ಪಾರ್ಟಿ ಚಾರ್ಜರ್ ಮೊರೆ ಹೋಗಬೇಡಿ. ಮತ್ತು ಚಾರ್ಜಿಂಗ್ ಕೇಬಲ್‌ಗೆ ಸಂಪರ್ಕಗೊಂಡಿರುವ ಸಾಧನದ ಜೊತೆಗೆ ಮಲಗುವುದರಿಂದ ಅಪಾಯ ಉಂಟಾಗುತ್ತದೆ ಎಂದು ಹೇಳಿದೆ.

ಐಫೋನ್ ಅನ್ನು ಚಾರ್ಜ್​ಗೆ ಹಾಕಿ ಅದರ ಪಕ್ಕದಲ್ಲಿ ಮಲಗಿದರೆ ಅಥವಾ ನೀವು ಮಲಗುವ ಹತ್ತಿರವೇ ಐಫೋನ್ ಚಾರ್ಜ್​ಗೆ ಹಾಕಿದರೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ವಿದ್ಯುತ್ ಅವಘಡ ಸಂಭವಿಸಬಹುದು, ಅನೇಕ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಅಪಾಯಗಳನ್ನು ತಪ್ಪಿಸಲು, ಉತ್ತಮವಾಗಿ ಗಾಳಿ ಇರುವ ಪ್ರದೇಶದಲ್ಲಿ ಫೋನನ್ನು ಚಾರ್ಜ್ ಮಾಡಿ ಎಂದು ಆ್ಯಪಲ್ ತನ್ನ ಬಳಕೆದಾರರಿಗೆ ಸಲಹೆ ನೀಡಿದೆ.

ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ: ಏರ್ಟೆಲ್ ಆಫರ್​ಗೆ ದಂಗಾದ ಜಿಯೋ

ಇದನ್ನೂ ಓದಿ
Image
ಒನ್​ಪ್ಲಸ್​ನ ಬಹುನಿರೀಕ್ಷಿತ ಏಸ್ 2 ಪ್ರೊ ​ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ
Image
ನೀವು ಪವರ್ ಬ್ಯಾಂಕ್ ಮೂಲಕ ಮೊಬೈಲ್ ಚಾರ್ಜ್ ಮಾಡ್ತೀರಾ?: ಹಾಗಿದ್ರೆ ಒಮ್ಮೆ ಇಲ್ಲಿ ಗಮನಿಸಿ
Image
ಮಾರುಕಟ್ಟೆಗೆ ಎಂಟ್ರಿಕೊಟ್ಟ ರೆಡ್ಮಿ K60 ಆಲ್ಟ್ರಾ ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?
Image
ಶವೋಮಿಯ ಹೊಸ ಫೋಲ್ಡೆಬಲ್ ಸ್ಮಾರ್ಟ್​ಫೋನ್ ಬಿಡುಗಡೆ: ಫೀಚರ್ಸ್ ಕೇಳಿ ದಂಗಾದ ಜನರು

“ಚಾಪೆ ಅಥವಾ ದಿಂಬಿನ ಕೆಳಗೆ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ಫೋನ್ ಹೆಚ್ಚು ಬಿಸಿಯಾಗುತ್ತದೆ. ಪವರ್ ಅಡಾಪ್ಟರ್ ಅಥವಾ ವೈರ್‌ಲೆಸ್ ಚಾರ್ಜರ್‌ ಹತ್ತಿರ ಇಟ್ಟು ಮಲಗಬೇಡಿ ಮತ್ತು ವಿದ್ಯುತ್​ಗೆ ಸಂಪರ್ಕಗೊಂಡಿರುವಾಗ ಅವುಗಳನ್ನು ಕಂಬಳಿ, ದಿಂಬು ಅಥವಾ ನಿಮ್ಮ ಪಕ್ಕದಲ್ಲಿ ಇರಿಸುವುದನ್ನು ತಪ್ಪಿಸಿ,” ಎಂದು ಆ್ಯಪ್ ಹೇಳಿದೆ. ಥರ್ಡ್-ಪಾರ್ಟಿ ಚಾರ್ಜರ್‌ಗಳನ್ನು ಬಳಸುವುದರಿಂದ ಸಾಕಷ್ಟು ಅಪಾಯವಿದೆ ಎಂದು ಆ್ಯಪಲ್ ಒತ್ತಿ ಹೇಳಿದೆ.

ಅಂತೆಯೆ ನೀರಿನ ಬಳಿ ಫೋನ್‌ಗಳನ್ನು ಚಾರ್ಜ್ ಮಾಡುವುದನ್ನು ತಪ್ಪಿಸಿ ಎಂದು ಹೇಳಿದೆ. ದುರ್ಬಲಗೊಂಡ ಕೇಬಲ್‌ಗಳು ಅಥವಾ ಚಾರ್ಜರ್‌ಗಳನ್ನು ಬಳಸುವುದು ಅಥವಾ ಬಿಸಿ ಇರುವಂತಹ ಪ್ರದೇಶದಲ್ಲಿ ಐಫೋನ್ ಚಾರ್ಜ್ ಮಾಡದಂತೆ ಹೇಳಿದೆ. ಈ ಶಿಫಾರಸುಗಳನ್ನು ಅನುಸರಿಸುವ ಮೂಲಕ, ಬಳಕೆದಾರರು ತಮ್ಮನ್ನು, ತಮ್ಮ ಫೋನ್‌ಗಳಿಂದ ಆಗುವ ಅಪಾಯವನ್ನು ತಪ್ಪಿಸಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ