ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ಮೋಟೋ G84 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

Moto G84 Launched in India: ಮೋಟೋ G84 5G ಸ್ಮಾರ್ಟ್​ಫೋನ್ ಸದ್ಯಕ್ಕೆ ಭಾರತದಲ್ಲಿ ಕೇವಲ ಒಂದು ಸಂಗ್ರಹಣೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಈ ಫೋನ್ G-ಸರಣಿ ಶ್ರೇಣಿಯಲ್ಲಿ Pantone ಬಣ್ಣದ ಆವೃತ್ತಿಯಲ್ಲಿ ರಿಲೀಸ್ ಆದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ಮೋಟೋ G84 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
moto g84 5g
Follow us
Vinay Bhat
|

Updated on: Sep 01, 2023 | 12:54 PM

ಮೋಟೋರೊಲಾ ಕಂಪನಿ ತನ್ನ ಬಜೆಟ್-ಕೇಂದ್ರಿತ ಮೋಟೋ G-ಸರಣಿಯ ಅಡಿಯಲ್ಲಿ ಹೊಸ ಮೋಟೋ ಜಿ84 5ಜಿ (Moto G84 5G) ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ನ ಬೆಲೆ 20,000ರೂ. ಗಿಂತ ಕಡಿಮೆ ಇದೆ. ಈ ಫೋನನ್ನು ಯುವ ಗ್ರಾಹಕರಿಗೆ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಫೋನ್​ ಆಕರ್ಷಕ ಕ್ಯಾಮೆರಾ, ವೇಗದ ಚಾರ್ಜಿಂಗ್ ಮತ್ತು ಟ್ರೆಂಡಿ ವಿನ್ಯಾಸವನ್ನು ಒಳಗೊಂಡಿವೆ. ಮೋಟೋ G84 ಫೋನ್ G-ಸರಣಿ ಶ್ರೇಣಿಯಲ್ಲಿ Pantone ಬಣ್ಣದ ಆವೃತ್ತಿಯಲ್ಲಿ ರಿಲೀಸ್ ಆದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮೋಟೋ G84 5G ಬೆಲೆ:

ಮೋಟೋ G84 5G ಸ್ಮಾರ್ಟ್​ಫೋನ್ ಸದ್ಯಕ್ಕೆ ಭಾರತದಲ್ಲಿ ಕೇವಲ ಒಂದು ಸಂಗ್ರಹಣೆಯಲ್ಲಿ ಮಾತ್ರ ಅನಾವರಣಗೊಂಡಿದೆ. ಇದರ 12GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 19,999 ರೂ. ನಿಗದಿ ಮಾಡಲಾಗಿದೆ. ಬ್ಯಾಂಕ್ ಅಥವಾ ವಿನಿಮಯ ಕೊಡುಗೆಗಳೊಂದಿಗೆ, ಗ್ರಾಹಕರು ಬೆಲೆಯನ್ನು 18,999 ರೂ. ಗೆ ಇಳಿಸಬಹುದು. ಈ ಫೋನಿನ ವಿವಾ ಮೆಜೆಂಟಾ ಮತ್ತು ಮಾರ್ಷ್‌ಮ್ಯಾಲೋ ಬ್ಲೂ ಆಯ್ಕೆಗಳು ಲೆದರ್ ಫಿನಿಶ್ ಹೊಂದಿದ್ದರೆ, ಮಿಡ್‌ನೈಟ್ ಬ್ಲೂ ರೂಪಾಂತರವು ಗಾಜಿನಂತಹ PMMA ವಸ್ತುವನ್ನು ಹೊಂದಿದೆ.

ಇದನ್ನೂ ಓದಿ
Image
ನೀವು ಫೋಟೋಗ್ರಫಿ ಪ್ರಿಯರ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
ಬಲಿಷ್ಠ ಪ್ರೊಸೆಸರ್, ಬ್ಯಾಟರಿ, ಆಕರ್ಷಕ ಕ್ಯಾಮೆರಾ: ಭಾರತದಲ್ಲಿ ಐಕ್ಯೂ Z7 ಪ್ರೊ 5G ಫೋನ್ ಬಿಡುಗಡೆ: ಬೆಲೆ ಎಷ್ಟು?
Image
ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು
Image
ಸೆಟಲೈಟ್ ಕಾಲ್ ಬೆಂಬಲ: ಸದ್ದಿಲ್ಲದೆ ಮಾರುಕಟ್ಟೆಗೆ ಅಪ್ಪಳಿಸಿದ ಹುವೈ ಮೇಟ್ 60 ಪ್ರೊ ಸ್ಮಾರ್ಟ್​ಫೋನ್: ಬೆಲೆ?

ಐಫೋನ್ 15 ಸರಣಿ ಬಿಡುಗಡೆ ದಿನಾಂಕ ಘೋಷಿಸಿದ ಆ್ಯಪಲ್: ಯಾವಾಗ?

ಮೋಟೋ G84 5G ಫೋನಿನ ಮೊದಲ ಮಾರಾಟವು ಸೆಪ್ಟೆಂಬರ್ 8 ರಂದು ನಡೆಯಲಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಐಸಿಐಸಿಐ ಬ್ಯಾಂಕ್ ಕೊಡುಗೆಯೊಂದಿಗೆ, ಫೋನ್ ಅನ್ನು 1,000 ರೂ. ರಿಯಾಯಿತಿ ದರದೊಂದಿಗೆ ಖರೀದಿಸಬಹುದು.

ಮೋಟೋ G84 5G ಫೀಚರ್ಸ್:

ಮೋಟೋ G84 ಸ್ಮಾರ್ಟ್​ಫೋನ್ 120Hz ರಿಫ್ರೆಶ್ ರೇಟ್ ಮತ್ತು 1300 nits ಗರಿಷ್ಠ ಬ್ರೈಟ್​ನೆಸ್ ಹೊಂದಿರುವ 10-ಬಿಟ್ 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ. ಭದ್ರತೆಗಾಗಿ, ಆನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಬಲಿಷ್ಠವಾದ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ. ಆಂಡ್ರಾಯ್ಡ್ 13 ನೊಂದಿಗೆ ರನ್ ಆಗುತ್ತದೆ. ಆದರೂ ಇದು ಆಂಡ್ರಾಯ್ಡ್ 14 ಅಪ್ಡೇಟ್ ಸ್ವೀಕರಿಸಲಿದೆಯಂತೆ. ಆದರೆ, ಇದು ಇತರೆ ಸ್ಮಾರ್ಟ್​ಫೋನ್​ಗಳಿಗೆ ಹೋಲಿಸಿದರೆ ಕೊಂಚ ತಡವಾಗಿ ಅಪ್ಡೇಟ್ ನೀಡಲಿದೆ.

ಮೋಟೋ G84 ಬಿಡುಗಡೆ ಕುರಿತು ಕಂಪನಿ ಹಂಚಿಕೊಂಡ ಟ್ವೀಟ್:

ಹಿಂಭಾಗವು ಎರಡು ಕ್ಯಾಮೆರಾಗಳನ್ನು ಒಳಗೊಂಡಿದೆ 50-ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗಿದೆ. ಹೆಚ್ಚುವರಿಯಾಗಿ ಮ್ಯಾಕ್ರೋ ಅಥವಾ ಡೆಪ್ತ್ ಕ್ಯಾಮೆರಾಗಳ ಆಯ್ಕೆ ನೀಡಲಾಗಿಲ್ಲ. ಬದಲಿಗೆ, ಸೆಕೆಂಡರಿ ಕ್ಯಾಮೆರಾದಲ್ಲಿ ಮ್ಯಾಕ್ರೋ ಫೋಟೋಗಳನ್ನು ತೆಗೆಯಬಹುದು. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.

ಮೋಟೋ G84 ಸ್ಮಾರ್ಟ್​ಫೋನ್ 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಫೋನ್ ಮೋಟೋ Spatial ಆಡಿಯೋ ಬೆಂಬಲದೊಂದಿಗೆ ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳನ್ನು ಹೊಂದಿದೆ. ಡ್ಯುಯಲ್ ಸಿಮ್, 5G, Wi-Fi 802.11ax, ಬ್ಲೂಟೂತ್ 5.1, GPS, NFC, USB ಟೈಪ್-C ಪೋರ್ಟ್, Dolby Atmos ಮತ್ತು Moto ಸ್ಪಾಟಿಯಲ್ ಸೌಂಡ್ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 3.5mm ಆಡಿಯೋದಂತಹ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ