ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್: ಬಳಕೆದಾರರು ಫುಲ್ ಖುಷ್

WhatsApp email verification feature: ವಾಟ್ಸ್​ಆ್ಯಪ್ ಪ್ರಸ್ತುತ ಇ-ಮೇಲ್ ವಿಳಾಸವನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಕ್ಷಿಸಲು ಹೊಸ ಭದ್ರತಾ ವೈಶಿಷ್ಟ್ಯದ ರೂಪದಲ್ಲಿ ಈ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ನಿಮ್ಮ ಖಾತೆ ಮತ್ತಷ್ಟು ಭದ್ರತೆಯಿಂದ ಕೂಡಿರುತ್ತದೆ. ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಆಂಡ್ರಾಯ್ಡ್​ನ ಬೀಟಾ ಪರೀಕ್ಷಕರಿಗೆ ಲಭ್ಯವಿದೆ.

ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್: ಬಳಕೆದಾರರು ಫುಲ್ ಖುಷ್
WhatsApp
Follow us
Vinay Bhat
|

Updated on: Sep 01, 2023 | 2:19 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಬಹಳ ಉಪಯುಕ್ತವಾದ ಆಕರ್ಷಕ ಫೀಚರ್​ಗಳನ್ನು ನೀಡುವ ಕೆಲಸ ಮುಂದುವರೆಸಿದೆ. ಈಗಾಗಲೇ ವಾಟ್ಸ್​ಆ್ಯಪ್ ಬೀಟಾ ವರ್ಷನ್​ನಲ್ಲಿ ಸಾಲು-ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಒಂದೊಂದು ಆಯ್ಕೆ ಪರಿಚಯಿಸಲಿದೆ. ಇದರ ನಡುವೆ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಮತ್ತೊಂದು ನೂತನ ಅಪ್ಡೇಟ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಸದ್ಯದಲ್ಲೇ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್​ನ ಪ್ರಯೋಜನ ಪಡೆಯಲಿದ್ದಾರೆ.

WABetaInfo ವರದಿ ಮಾಡಿದಂತೆ, ವಾಟ್ಸ್​ಆ್ಯಪ್ ಪ್ರಸ್ತುತ ಇ-ಮೇಲ್ ವಿಳಾಸವನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಕ್ಷಿಸಲು ಹೊಸ ಭದ್ರತಾ ವೈಶಿಷ್ಟ್ಯದ ರೂಪದಲ್ಲಿ ಈ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ನಿಮ್ಮ ಖಾತೆ ಮತ್ತಷ್ಟು ಭದ್ರತೆಯಿಂದ ಕೂಡಿರುತ್ತದೆ. ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಆಂಡ್ರಾಯ್ಡ್​ನ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಈ ಫೀಚರ್ ಅನ್ನು ವಾಟ್ಸ್​ಆ್ಯಪ್ ಬೀಟಾ ಆವೃತ್ತಿ ಸಂಖ್ಯೆ 2.23.18.19 ರ ಮೂಲಕ ಪ್ರವೇಶಿಸಬಹುದು.

ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು

ಇದನ್ನೂ ಓದಿ
Image
ಬಹುನಿರೀಕ್ಷಿತ ಐಕ್ಯೂ Z8, ಐಕ್ಯೂ Z8x ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್
Image
ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ಮೋಟೋ G84 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
ನೀವು ಫೋಟೋಗ್ರಫಿ ಪ್ರಿಯರ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
ಬಲಿಷ್ಠ ಪ್ರೊಸೆಸರ್, ಬ್ಯಾಟರಿ, ಆಕರ್ಷಕ ಕ್ಯಾಮೆರಾ: ಭಾರತದಲ್ಲಿ ಐಕ್ಯೂ Z7 ಪ್ರೊ 5G ಫೋನ್ ಬಿಡುಗಡೆ: ಬೆಲೆ ಎಷ್ಟು?

ಬಳಕೆದಾರರ ಇಮೇಲ್ ವಿಳಾಸವನ್ನು ದೃಢೀಕರಿಸಿದ ನಂತರ ಅವರಿಗೆ ವಾಟ್ಸ್​ಆ್ಯಪ್ ಖಾತೆಯನ್ನುಪ್ರವೇಶಿಸಲು ಸುಲಭವಾಗುತ್ತದೆ ಎಂದು ವರದಿ ಹೇಲಿದೆ. ಗೌಪ್ಯತೆ ಕಾರಣದಿಂದ ಈ ಇಮೇಲ್ ವಿಳಾಸವು ನಿಮ್ಮ ಕಾಂಟೆಕ್ಟ್ ಲಿಸ್ಟ್​ನಲ್ಲಿರುವ ಯಾರಿಗೂ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಬೇಕಾದ ವಿಷಯ. ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಸಂಪೂರ್ಣ ವಿವರಗಳು ಲಭ್ಯವಿಲ್ಲದಿದ್ದರೂ, ಭವಿಷ್ಯದಲ್ಲಿ ಇದು ತುಂಬಾ ಉಪಯುಕ್ತವಾಗಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಇ-ಮೇಲ್ ವೆರಿಫಿಕೇಷನ್ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ.

ವಾಟ್ಸ್​ಆ್ಯಪ್​ನಲ್ಲಿ HD ವಿಡಿಯೋ ಫೀಚರ್:

ವಾಟ್ಸ್​ಆ್ಯಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಪರಿಚಯಿಸಿದೆ. ಈ ಹಿಂದೆ ಯಾರಿಗಾದರು ವಿಡಿಯೋ ಕಳುಹಿಸಿದಾಗ ಅದು ಕಂಪ್ರೆಸ್ ಆಗಿ ತನ್ನ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೀಗ ಹೆಚ್​ಡಿ ಕ್ವಾಲಿಟಿಯಲ್ಲಿ ವಿಡಿಯೋ ಕಳುಹಿಸಬಹುದು. ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ನೂತನ ಅಪ್‌ಡೇಟ್‌ನೊಂದಿಗೆ ಈ ಫೀಚರ್ ಬಿಡುಗಡೆ ಆಗಿದೆ. ವಾಟ್ಸ್​ಆ್ಯಪ್ ಕಾಂಟೆಕ್ಟ್ ಲಿಸ್ಟ್​ನಲ್ಲಿ ಇರುವವರಿಗೆ ಹಂಚಿಕೊಳ್ಳಲು ವಿಡಿಯೋವನ್ನು ಆಯ್ಕೆಮಾಡುವಾಗ ಪರದೆಯ ಮೇಲ್ಭಾಗದಲ್ಲಿ HD ಐಕಾನ್ ಕಾಣಿಸುತ್ತಿದೆ. ಇದನ್ನು ಒತ್ತಿದ ನಂತರ ವಾಟ್ಸ್​ಆ್ಯಪ್ ಸ್ಟ್ಯಾಂಡರ್ಡ್ ಮತ್ತು ಡೀಫಾಲ್ಟ್ ಆಗಿ ವಿಡಿಯೋ ಹಂಚಿಕೊಳ್ಳುಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ