ಪ್ರಸಿದ್ಧ ಐಕ್ಯೂ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ತನ್ನ ಫೋನುಗಳ ಬಿಡುಗಡೆ ಸಂಖ್ಯೆಯನ್ನು ಕೂಡ ಹೆಚ್ಚಿಸುತ್ತಿದೆ. ಇದೀಗ ದೇಶದಲ್ಲಿ ಇಂದು ಹೊಸ ಐಕ್ಯೂ Z7 ಪ್ರೊ 5G (iQOO Z7 Pro 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೊಂದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಬಲಿಷ್ಠ ಪ್ರೊಸೆಸರ್, ಬೊಂಬಾಟ್ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಗೆ 23,999 ರೂ. ಇದೆ. ಅಂತೆಯೆ ಇದರ 8GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 24,999 ರೂ. ಇದೆ. ಈ ಫೋನ್ ಸೆಪ್ಟೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಇಂಡಿಯಾ ಮತ್ತು ಐಕ್ಯೂ ಆನ್‌ಲೈನ್ ಸ್ಟೋರ್‌ನಿಂದ ಖರೀದಿಸಬಹುದು.
108MP ಕ್ಯಾಮೆರಾದ ಸ್ಮಾರ್ಟ್‌ಫೋನ್ ಬೇಕೇ?: ಇದೀಗ ಸೇಲ್ ಕಾಣುತ್ತಿದೆ ರಿಯಲ್ ಮಿ 11 5G
ಐಕ್ಯೂ Z7 ಪ್ರೊ 5G ಸ್ಮಾರ್ಟ್ಫೋನ್ನ ಮೊದಲ ಸೇಲ್ ಪ್ರಯುಕ್ತ ಎಸ್‌ಬಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ಫ್ಲಾಟ್ 2,000 ರೂ. ರಿಯಾಯಿತಿ ಮತ್ತು ಎಕ್ಸ್‌ಚೇಂಜ್‌ನಲ್ಲಿ ಹೆಚ್ಚುವರಿ 2,000 ರೂ. ಗಳ ರಿಯಾಯಿತಿಯನ್ನು ಒಳಗೊಂಡಿರುವ ವಿಶೇಷ ಬಿಡುಗಡೆ ಕೂಡ ಘೋಷಿಸಲಾಗಿದೆ.
ಡಿಸ್‌ಪ್ಲೇ: ಐಕ್ಯೂ Z7 ಪ್ರೊ 5G ಫೋನ್ 6.78-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 1300nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ.
ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 7200 5G ಚಿಪ್‌ಸೆಟ್ ಮೂಲಕ ರನ್ ಆಗಲಿದ್ದು, ARM Mali-G610 GPU ಜೋಡಿಸಲಾಗಿದೆ.
RAM ಮತ್ತು ಸಂಗ್ರಹಣೆ: ಈ ಸ್ಮಾರ್ಟ್‌ಫೋನ್ 8GB RAM + 128GB ಮತ್ತು 8GB RAM + 256GB ಯ ಎರಡು ರೂಪಾಂತರಗಳಲ್ಲಿ ಬರುತ್ತದೆ.
ಕ್ಯಾಮೆರಾಗಳು: ಇದು 64MP ಪ್ರಾಥಮಿಕ ಸಂವೇದಕ ಮತ್ತು ಹಿಂಭಾಗದಲ್ಲಿ 2MP ಬೊಕೆ ಲೆನ್ಸ್ ಮತ್ತು 16MP ಮುಂಭಾಗದ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಬ್ಯಾಟರಿ, ಚಾರ್ಜಿಂಗ್: ಐಕ್ಯೂ Z7 ಪ್ರೊ 5G ಸ್ಮಾರ್ಟ್ಫೋನ್ನಲ್ಲಿ 66W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,600mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
ಸಾಫ್ಟ್‌ವೇರ್: ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಧಾರಿತ Funtouch OS 13 ಮೂಲಕ ರನ್ ಆಗುತ್ತದೆ.
ಬಣ್ಣಗಳು: ನೀವು ಐಕ್ಯೂ Z7 ಪ್ರೊ 5G ಅನ್ನು ಗ್ರ್ಯಾಫೈಟ್ ಮ್ಯಾಟ್ ಮತ್ತು ಬ್ಲೂ ಲಗೂನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಇತರ ವೈಶಿಷ್ಟ್ಯಗಳು: ಈ ಫೋನ್ ವೈ-ಫೈ 6, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ52 ರೇಟಿಂಗ್‌ನೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Thu, 31 August 23