ಮಾರುಕಟ್ಟೆಯಲ್ಲಿ ಅಪಪೂರಕ್ಕೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ವಿವೋ ಒಡೆತನದ ಪ್ರಸಿದ್ಧ ಐಕ್ಯೂ ಕಂಪನಿ ಇದೀಗ ನೂತನ ಫೋನ್ನೊಂದಿಗೆ ಬಂದಿದೆ. ಭಾರತದಲ್ಲಿ ಇದೇ ಆಗಸ್ಟ್ 31 ರಂದು ಐಕ್ಯೂ Z7 ಪ್ರೊ (iQOO Z7 Pro) ಸ್ಮಾರ್ಟ್ಫೋನ್ ಅನಾವರಣಗೊಳ್ಳಲಿದೆ. ಇದೊಂದು ಮಧ್ಯಮ ಶ್ರೇಣಿಯ 5G ಫೋನ್ ಆಗಿದ್ದು ಐಕ್ಯೂ Z6 ಪ್ರೊ ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿಯಾಗಿದೆ. ಹೊಸ ಐಕ್ಯೂ ಫೋನ್ ಮೀಡಿಯಾ ಟೆಕ್ ಚಿಪ್‌ಸೆಟ್, ಸ್ಲಿಮ್ಮರ್ ವಿನ್ಯಾಸ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಈ ಫೋನಿನ ಕೆಲ ಫೀಚರ್ಸ್ ಕೂಡ ಸೋರಿಕೆ ಆಗಿದೆ.
ಐಕ್ಯೂ Z7 ಪ್ರೊ ಭಾರತದಲ್ಲಿ 25,000 ರೂ. ಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆಯಂತೆ. ಭಾರತದಲ್ಲಿ ಇತ್ತೀಚೆಗೆ 26,999 ರೂ. ಗೆ ರಿಲೀಸ್ ಆದ ಒನ್ಪ್ಲಸ್ ನಾರ್ಡ್ CE 3 ನಂತಹ ಜನಪ್ರಿಯ ಫೋನ್‌ಗಳೊಂದಿಗೆ ಇದು ಸ್ಪರ್ಧಿಸಲಿದೆ. ಈ ಫೋನಿನ ನಿಖರವಾದ ಬೆಲೆ ಬಹಿರಂಗವಾಗಿಲ್ಲ. ಆದರೆ, ಇದು ಒನ್ಪ್ಲಸ್ ನಾರ್ಡ್ CE 3 ಗೆ ನೇರ ಪ್ರತಿಸ್ಪರ್ಧಿಯಾಗಿರುವುದರಿಂದ, ಐಕ್ಯೂ ಅದರ ಬೆಲೆಗಿಂತ ಕಡಿಮೆ ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಭಾರತದಲ್ಲೀಗ ಖರೀದಿಗೆ ಸಿಗುತ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು Z ಫ್ಲಿಪ್ 5: ಬೆಲೆ ಎಷ್ಟು?
ಇದಲ್ಲದೆ, ಐಕ್ಯೂ Z7 ಪ್ರೊ ಪಂಚ್-ಹೋಲ್ ಡಿಸ್ ಪ್ಲೇ ವಿನ್ಯಾಸದ ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಇದು ಐಕ್ಯೂನ ತೆಳ್ಳಗಿನ ಮತ್ತು ಅತ್ಯಂತ ಹಗುರವಾದ ಫೋನ್ ಆಗಿರಲಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಫೋನ್ ಮೇಲೆ ಎಲ್ಲರ ಕಣ್ಣಿದೆ. ಈ ಫೋನಿನ ಹಿಂಭಾಗ ಎರಡು ಅಥವಾ ಮೂರು ಕ್ಯಾಮೆರಾಗಳೂ ಇರುವ ಸಾಧ್ಯತೆ ಇದೆ. ಆದರೆ ಇದರ ನಿಖರವಾದ ಮಾಹಿತಿ ಇನ್ನೂ ತಿಳಿದಿಲ್ಲ. ಹೊಸ ಮೀಡಿಯಾಟೆಕ್ ಪ್ರೊಸೆಸರ್ ಅನ್ನು ಸಹ ಹೊಂದಿರುತ್ತದೆ.
ಐಕ್ಯೂ Z7 ಪ್ರೊ 7,28,000 Antutu ಸ್ಕೋರ್ ಅನ್ನು ತೋರಿಸುವ ಮೂಲಕ ಅತ್ಯಂತ ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿಯ CEO ನಿಪುನ್ ಮರಿಯಾ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಫೋನ್‌ನ ಹಿಂಭಾಗದಲ್ಲಿ, ಉತ್ತಮ ಛಾಯಾಗ್ರಹಣಕ್ಕಾಗಿ ಔರಾ ಲೈಟ್ ಕೂಡ ಇದೆ.
ಐಕ್ಯೂ Z7 ಪ್ರೊ 66W ವೇಗದ ಚಾರ್ಜಿಂಗ್, 64-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ, ಮೀಡಿಯಾ ಟೆಕ್ 7,200 SoC, 6.78-ಇಂಚಿನ ಡಿಸ್ ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 4,600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಈ ವಿವರಗಳನ್ನು ಕಂಪನಿಯು ಅಧಿಕೃತವಾಗಿ ದೃಢೀಕರಿಸಿಲ್ಲ. ಆಂಡ್ರಾಯ್ಡ್ 13 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ