50MP ಕ್ಯಾಮೆರಾ, ಫಾಸ್ಟ್ ಚಾರ್ಜರ್: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z9 5G ಫೋನ್ ಬಿಡುಗಡೆ

|

Updated on: Mar 12, 2024 | 1:26 PM

iQOO Z9 5G Launched in India: ಐಕ್ಯೂ Z9 5G ಫೋನಿನ 8GB/128GB ಮಾದರಿಗೆ ರೂ. 19,999 ಇದೆ. ಅಂತೆಯೆ 8GB/256B ಆವೃತ್ತಿಗೆ ರೂ. 21,999 ನಿಗದಿ ಮಾಡಲಾಗಿದೆ. ಖರೀದಿದಾರರು ಐಸಿಐಸಿಐ ಬ್ಯಾಂಕ್ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ರೂ. 2,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು.

50MP ಕ್ಯಾಮೆರಾ, ಫಾಸ್ಟ್ ಚಾರ್ಜರ್: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z9 5G ಫೋನ್ ಬಿಡುಗಡೆ
iQOO Z9 5G
Follow us on

ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಭಾರೀ ರೋಚಕತೆ ಸೃಷ್ಟಿಸಿದ್ದ ವಿವೋ ಒಡೆನದ ಸಬ್​ಬ್ರ್ಯಾಂಡ್ ಐಕ್ಯೂವಿನ ಹೊಸ ಸ್ಮಾರ್ಟ್​ಫೋನ್ ಕೊನೆಗೂ ಬಿಡುಗಡೆ ಆಗಿದೆ. ಇಂದು ದೇಶದಲ್ಲಿ ಹೊಸ ಐಕ್ಯೂ Z9 5G (iQOO Z9 5G) ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ. ಹೊಸ ಮಧ್ಯ ಶ್ರೇಣಿಯ ಈ ಫೋನ್ ಐಕ್ಯೂ Z7 5G ಗೆ ಉತ್ತರಾಧಿಕಾರಿಯಾಗಿ ಬಂದಿದೆ. ಇದರಲ್ಲಿ ಡೈಮೆನ್ಸಿಟಿ 7200 SoC, 50MP ಪ್ರಾಥಮಿಕ ಕ್ಯಾಮೆರಾ ಮತ್ತು 44W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ. ಐಕ್ಯೂ Z9 5G ಯ ಭಾರತದ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಐಕ್ಯೂ Z9 5G ಬೆಲೆ, ಮಾರಾಟ ದಿನಾಂಕ:

ಐಕ್ಯೂ Z9 5G ಫೋನಿನ 8GB/128GB ಮಾದರಿಗೆ ರೂ. 19,999 ಇದೆ. ಅಂತೆಯೆ 8GB/256B ಆವೃತ್ತಿಗೆ ರೂ. 21,999 ನಿಗದಿ ಮಾಡಲಾಗಿದೆ. ಖರೀದಿದಾರರು ಐಸಿಐಸಿಐ ಬ್ಯಾಂಕ್ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ರೂ. 2,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು, ಈ ಮೂಲಕ ಬೆಲೆಯನ್ನು ಕ್ರಮವಾಗಿ ರೂ. 17,999 ಮತ್ತು ರೂ. 19,999ಕ್ಕೆ ಇಳಿಸಬಹುದು.

ನೀವು ಸಹ ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಇಡುತ್ತೀರಾ?: ಅಪಾಯ ಕಟ್ಟಿಟ್ಟ ಬುತ್ತಿ

ಐಕ್ಯೂ Z9 5G ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಮತ್ತು ಎಲ್ಲರಿಗೂ ಮಾರ್ಚ್ 14 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ. ಈ ಸ್ಮಾರ್ಟ್​ಫೋನ್ ಬ್ರಷ್ಡ್ ಗ್ರೀನ್ ಮತ್ತು ಗ್ರ್ಯಾಫೀನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಐಕ್ಯೂ Z9 5G ಫೀಚರ್ಸ್:

ಐಕ್ಯೂ Z9 5G ಸ್ಮಾರ್ಟ್​ಫೋನ್ 6.67-ಇಂಚಿನ FHD+ AMOLED ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1,800 nits ಪೀಕ್ ಬ್ರೈಟ್‌ನೆಸ್, 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ನಿಂದ ARM Mali-G610 ನೊಂದಿಗೆ ಜೋಡಿಸಲ್ಪಟ್ಟಿದೆ. 8GB LPDDR4x RAM ಮತ್ತು 128GB/256GB UFS 2.2 ಸಂಗ್ರಹಣೆ ಇದೆ, ಇದು ಮೆಮೊರಿ ವಿಸ್ತರಣೆಗಾಗಿ ಮೈಕ್ರೊ SD ಕಾರ್ಡ್ ನೀಡಲಾಗಿದೆ. ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 14-ಆಧಾರಿತ Funtouch 14 ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತದೆ.

ಗ್ಯಾಲಕ್ಸಿ A55 5G, ಗ್ಯಾಲಕ್ಸಿ A35 5G: ಒಂದೇ ದಿನ 2 ​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್

ಕ್ಯಾಮೆರಾಗಳ ವಿಷಯದಲ್ಲಿ, ಐಕ್ಯೂ Z9 OIS, LED ಫ್ಲ್ಯಾಷ್, f/1.79 ಮತ್ತು 2MP ಬೊಕೆ ಕ್ಯಾಮೆರಾದೊಂದಿಗೆ 50MP ಸೋನಿ IMX882 ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ. ಈ ಫೋನ್ 5,000mAh ಬ್ಯಾಟರಿಯನ್ನು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ.

ಐಕ್ಯೂ Z9 5G ಫಿಂಗರ್‌ಪ್ರಿಂಟ್ ಸಂವೇದಕ, IP54 ರೇಟಿಂಗ್, ಡ್ಯುಯಲ್-ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ