Tech Tips: ನೀವು ಸಹ ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಇಡುತ್ತೀರಾ?: ಅಪಾಯ ಕಟ್ಟಿಟ್ಟ ಬುತ್ತಿ

Refrigerator Tips in Kannada: ಅನೇಕರು ರೆಫ್ರಿಜರೇಟರ್ ಅನ್ನು ಗೋಡೆಯ ಹತ್ತಿರ ಇರಿಸಿರುತ್ತಾರೆ. ಆದರೆ, ಹೀಗೆ ಇಡುವುದರಿಂದ ರೆಫ್ರಿಜರೇಟರ್​ನ ಹಿಂದೆ ಗಾಳಿಯ ಚಲನೆ ಆಗುವುದಿಲ್ಲ. ರೆಫ್ರಿಜರೇಟರ್​ನ ಸುರುಳಿಯಿಂದ ಹೊರಬರುವ ಶಾಖವು ಹಿಮ್ಮುಖವಾಗುತ್ತದೆ.

Tech Tips: ನೀವು ಸಹ ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಇಡುತ್ತೀರಾ?: ಅಪಾಯ ಕಟ್ಟಿಟ್ಟ ಬುತ್ತಿ
Refrigerator
Follow us
Vinay Bhat
|

Updated on: Mar 12, 2024 | 12:41 PM

ಬೇಸಿಗೆ ಕಾಲ ಶುರುವಾಗಿದೆ. ಈ ಸಂದರ್ಭ ತಣ್ಣೀರು ಕುಡಿಯಲು ಮತ್ತು ಆಹಾರವನ್ನು ಕೆಡದಂತೆ ಉಳಿಸಲು ರೆಫ್ರಿಜರೇಟರ್ (Refrigerator) ಅನ್ನು ಬಳಸಲಾಗುತ್ತದೆ. ಈಗ ಫ್ರಿಡ್ಜ್ ಎಲ್ಲರ ಮನೆಗಳಲ್ಲಿ ಸಾಮಾನ್ಯವಾಗಿದೆ. ಜನರು ಇದನ್ನು ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಇದನ್ನು ಸುಲಭವಾಗಿ ಉಪಯೋಗಿಸಬಹುದು, ಬೇಗನೆ ಹಾಳಾಗುವುದಿಲ್ಲ ಎಂದು ಬಳಕೆದಾರರು ಅಸಡ್ಡೆಯಿಂದ ಏನನ್ನಾದರೂ ಮಾಡುತ್ತಾರೆ. ಆದರೆ, ಇದು ಭಾರಿ ನಷ್ಟವನ್ನು ಉಂಟುಮಾಡಬಹುದು. ನೀವು ದೊಡ್ಡ ಮೊತ್ತವನ್ನು ಫ್ರಿಡ್ಜ್​ಗೆ ಹಾಕುವದನ್ನು ತಪ್ಪಿಸಲು ನೀವು ಈ ಸುದ್ದಿಯನ್ನು ಓದಲೇಬೇಕು.

ಇಂದು ನಾವು ರೆಫ್ರಿಜರೇಟರ್‌ನಿಂದ ಉಂಟಾಗುವ ಕೆಲ ಅನಾನುಕೂಲಗಳ ಬಗ್ಗೆ ಹೇಳುತ್ತಿದ್ದೇವೆ. ಇದರಲ್ಲಿ ರೆಫ್ರಿಜರೇಟರ್ ಅನ್ನು ಗೋಡೆಯಿಂದ ಎಷ್ಟು ದೂರದಲ್ಲಿ ಇಡಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ. ಜತೆಗೆ ಇದರಿಂದ ಆಗುವ ಹಾನಿಯ ಬಗ್ಗೆಯೂ ವಿವರಿಸಲಾಗಿದೆ.

ಗ್ಯಾಲಕ್ಸಿ A55 5G, ಗ್ಯಾಲಕ್ಸಿ A35 5G: ಒಂದೇ ದಿನ 2 ​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್

ಅನೇಕರು ರೆಫ್ರಿಜರೇಟರ್ ಅನ್ನು ಗೋಡೆಯ ಹತ್ತಿರ ಇರಿಸಿರುತ್ತಾರೆ. ಆದರೆ, ಹೀಗೆ ಇಡುವುದರಿಂದ ರೆಫ್ರಿಜರೇಟರ್​ನ ಹಿಂದೆ ಗಾಳಿಯ ಚಲನೆ ಆಗುವುದಿಲ್ಲ. ರೆಫ್ರಿಜರೇಟರ್​ನ ಸುರುಳಿಯಿಂದ ಹೊರಬರುವ ಶಾಖವು ಹಿಮ್ಮುಖವಾಗುತ್ತದೆ. ಇದರಿಂದಾಗಿ ಫ್ರಿಡ್ಜ್ ಒಳಗಿನ ಉಷ್ಣತೆಯು ಹಲವು ಬಾರಿ ಹೆಚ್ಚಾಗುತ್ತದೆ ಮತ್ತು ಫ್ರಿಜ್ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ತಂಪಾಗುತ್ತದೆ.

ಫ್ರಿಡ್ಜ್‌ನ ಒಳಗಿನ ಉಷ್ಣತೆಯ ಹೆಚ್ಚಳದಿಂದಾಗಿ, ಕಂಪ್ರೆಸರ್ ಮೇಲಿನ ಹೊರೆ ಹೆಚ್ಚಾಗುತ್ತದೆ. ಇದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ. ರೆಫ್ರಿಜರೇಟರ್ ಅನ್ನು ಗೋಡೆಯ ಹತ್ತಿರ ಇರಿಸಿದರೆ, ಅದರಿಂದ ಹೊರಹೊಮ್ಮುವ ಶಾಖವು ಗೋಡೆಗೆ ಹಾನಿ ಮಾಡುತ್ತದೆ. ಈ ಶಾಖದಿಂದಾಗಿ ಕೋಣೆಯಲ್ಲಿನ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುವುದು ಅನೇಕ ಬಾರಿ ಕಂಡುಬಂದಿದೆ. ನೀವು ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಇಟ್ಟುಕೊಂಡಿದ್ದರೆ, ನೀವು ಇಂದೇ ಅವುಗಳ ನಡುವಿನ ಅಂತರವನ್ನು ಹೆಚ್ಚಿಸಬೇಕು.

ಭಾರತದಲ್ಲಿಂದು ಬಹುನಿರೀಕ್ಷಿತ ಐಕ್ಯೂ Z9 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ರೆಫ್ರಿಜರೇಟರ್ ಮತ್ತು ಗೋಡೆಯ ನಡುವಿನ ಅಂತರ ಎಷ್ಟು ಇರಬೇಕು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ತಂತ್ರಜ್ಞಾನ ತಜ್ಞರ ಪ್ರಕಾರ ರೆಫ್ರಿಜರೇಟರ್ ಮತ್ತು ಗೋಡೆಯ ನಡುವೆ ಕನಿಷ್ಠ 6 ಇಂಚು ಅಂತರ ಕಾಯ್ದುಕೊಳ್ಳಬೇಕು. ಇದರಿಂದ ಫ್ರಿಡ್ಜ್ ಕಾಯಿಲ್ ಅನ್ನು ತಂಪಾಗಿರಿಸಲು ಸಾಕಷ್ಟು ಗಾಳಿಯನ್ನು ಪಡೆಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್