50MP ಕ್ಯಾಮೆರಾ, ಫಾಸ್ಟ್ ಚಾರ್ಜರ್: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z9 5G ಫೋನ್ ಬಿಡುಗಡೆ
iQOO Z9 5G Launched in India: ಐಕ್ಯೂ Z9 5G ಫೋನಿನ 8GB/128GB ಮಾದರಿಗೆ ರೂ. 19,999 ಇದೆ. ಅಂತೆಯೆ 8GB/256B ಆವೃತ್ತಿಗೆ ರೂ. 21,999 ನಿಗದಿ ಮಾಡಲಾಗಿದೆ. ಖರೀದಿದಾರರು ಐಸಿಐಸಿಐ ಬ್ಯಾಂಕ್ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ರೂ. 2,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು.
ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಭಾರೀ ರೋಚಕತೆ ಸೃಷ್ಟಿಸಿದ್ದ ವಿವೋ ಒಡೆನದ ಸಬ್ಬ್ರ್ಯಾಂಡ್ ಐಕ್ಯೂವಿನ ಹೊಸ ಸ್ಮಾರ್ಟ್ಫೋನ್ ಕೊನೆಗೂ ಬಿಡುಗಡೆ ಆಗಿದೆ. ಇಂದು ದೇಶದಲ್ಲಿ ಹೊಸ ಐಕ್ಯೂ Z9 5G (iQOO Z9 5G) ಸ್ಮಾರ್ಟ್ಫೋನ್ ಅನಾವರಣಗೊಂಡಿದೆ. ಹೊಸ ಮಧ್ಯ ಶ್ರೇಣಿಯ ಈ ಫೋನ್ ಐಕ್ಯೂ Z7 5G ಗೆ ಉತ್ತರಾಧಿಕಾರಿಯಾಗಿ ಬಂದಿದೆ. ಇದರಲ್ಲಿ ಡೈಮೆನ್ಸಿಟಿ 7200 SoC, 50MP ಪ್ರಾಥಮಿಕ ಕ್ಯಾಮೆರಾ ಮತ್ತು 44W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ. ಐಕ್ಯೂ Z9 5G ಯ ಭಾರತದ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿ ಐಕ್ಯೂ Z9 5G ಬೆಲೆ, ಮಾರಾಟ ದಿನಾಂಕ:
ಐಕ್ಯೂ Z9 5G ಫೋನಿನ 8GB/128GB ಮಾದರಿಗೆ ರೂ. 19,999 ಇದೆ. ಅಂತೆಯೆ 8GB/256B ಆವೃತ್ತಿಗೆ ರೂ. 21,999 ನಿಗದಿ ಮಾಡಲಾಗಿದೆ. ಖರೀದಿದಾರರು ಐಸಿಐಸಿಐ ಬ್ಯಾಂಕ್ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ರೂ. 2,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು, ಈ ಮೂಲಕ ಬೆಲೆಯನ್ನು ಕ್ರಮವಾಗಿ ರೂ. 17,999 ಮತ್ತು ರೂ. 19,999ಕ್ಕೆ ಇಳಿಸಬಹುದು.
ನೀವು ಸಹ ಫ್ರಿಡ್ಜ್ ಅನ್ನು ಗೋಡೆಯ ಹತ್ತಿರ ಇಡುತ್ತೀರಾ?: ಅಪಾಯ ಕಟ್ಟಿಟ್ಟ ಬುತ್ತಿ
ಐಕ್ಯೂ Z9 5G ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಮತ್ತು ಎಲ್ಲರಿಗೂ ಮಾರ್ಚ್ 14 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ. ಈ ಸ್ಮಾರ್ಟ್ಫೋನ್ ಬ್ರಷ್ಡ್ ಗ್ರೀನ್ ಮತ್ತು ಗ್ರ್ಯಾಫೀನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಐಕ್ಯೂ Z9 5G ಫೀಚರ್ಸ್:
ಐಕ್ಯೂ Z9 5G ಸ್ಮಾರ್ಟ್ಫೋನ್ 6.67-ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1,800 nits ಪೀಕ್ ಬ್ರೈಟ್‌ನೆಸ್, 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ನಿಂದ ARM Mali-G610 ನೊಂದಿಗೆ ಜೋಡಿಸಲ್ಪಟ್ಟಿದೆ. 8GB LPDDR4x RAM ಮತ್ತು 128GB/256GB UFS 2.2 ಸಂಗ್ರಹಣೆ ಇದೆ, ಇದು ಮೆಮೊರಿ ವಿಸ್ತರಣೆಗಾಗಿ ಮೈಕ್ರೊ SD ಕಾರ್ಡ್ ನೀಡಲಾಗಿದೆ. ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 14-ಆಧಾರಿತ Funtouch 14 ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತದೆ.
ಗ್ಯಾಲಕ್ಸಿ A55 5G, ಗ್ಯಾಲಕ್ಸಿ A35 5G: ಒಂದೇ ದಿನ 2 ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ಕ್ಯಾಮೆರಾಗಳ ವಿಷಯದಲ್ಲಿ, ಐಕ್ಯೂ Z9 OIS, LED ಫ್ಲ್ಯಾಷ್, f/1.79 ಮತ್ತು 2MP ಬೊಕೆ ಕ್ಯಾಮೆರಾದೊಂದಿಗೆ 50MP ಸೋನಿ IMX882 ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ. ಈ ಫೋನ್ 5,000mAh ಬ್ಯಾಟರಿಯನ್ನು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ.
ಐಕ್ಯೂ Z9 5G ಫಿಂಗರ್‌ಪ್ರಿಂಟ್ ಸಂವೇದಕ, IP54 ರೇಟಿಂಗ್, ಡ್ಯುಯಲ್-ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ