ಹೊಸ ವರ್ಷ ಬಂದಾಗಿದೆ. ಆದರೆ, ಇದಕ್ಕೂ ಮುನ್ನ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳು (Telecom Company) ಗ್ರಾಹಕರಿಗೆ ಬೆಲೆ ಏರಿಕೆ (Price Hike) ಮಾಡಿ ಶಾಕ್ ನೀಡಿದ್ದವು. ಇದರ ನಡುವೆಯೆ ತನ್ನ ಬಳಕೆದಾರರಿಗೆ ಓಟಿಟಿ ಪ್ರಯೋಜನ ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಮತ್ತಷ್ಟು ಬಳಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಸದ್ಯ ಹೊಸ ವರ್ಷಕ್ಕೆ ವಾರ್ಷಿಕ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಅನೇಕರು ಈ ಒಂದು ವರ್ಷದ (365 days validity plan) ರಿಚಾರ್ಜ್ ಪ್ಲಾನಿನ ಮೊರೆ ಹೋಗುತ್ತಿದ್ದಾರೆ. ಪ್ರತಿ ತಿಂಗಳು ಮೊಬೈಲ್‌ಗಳ ರೀಚಾರ್ಜ್ ಮಾಡುವ ಬದಲು ವಾರ್ಷಿಕ ಯೋಜನೆಗಳ ಕಡೆ ವಾಲುತ್ತಿದ್ದಾರೆ. ವಾರ್ಷಿಕ ಯೋಜನೆಗಳನ್ನು ಆಯ್ದುಕೊಂಡರೆ ದುಬಾರಿಯೆನಿಸಿದರೂ, ಪ್ರತಿ ತಿಂಗಳು ರೀಚಾರ್ಜ್ ಮಾಡುವು ತಲೆ ನೋವು ಇರುವುದಿಲ್ಲ. ಜಿಯೋ (Jio), ವೊಡಾಫೋನ್ (ವಿ ಟೆಲಿಕಾಂ, Vodafone Idea) ಮತ್ತು ಏರ್ಟೆಲ್ (Airtel) ಟೆಲಿಕಾಂಗಳು ವಾರ್ಷಿಕ ಅವಧಿಯ ಕೆಲವು ಪ್ರಿಪೇಯ್ಡ್ ಯೋಜನೆಗಳ (Prepaid Plans) ಆಯ್ಕೆಯನ್ನು ಹೊಂದಿವೆ. ಆ ಪೈಕಿ ಕೆಲವು ಅಧಿಕ ಡೇಟಾ ಪ್ರಯೋಜನ ಪಡೆದಿದ್ದರೇ, ಇನ್ನು ಕೆಲವು ನಿಗದತ ಡೇಟಾ ಹೊಂದಿವೆ. ಜೊತೆಗೆ ಇನ್ನೂ ಅನೇಕ ಆಫರ್ಗಳಿಂದ ಕೂಡಿದೆ.
ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ, ಏರ್‌ಟೆಲ್ ಮತ್ತು ವಿಐ (ವೊಡಾಫೋನ್ ಐಡಿಯಾ) ಯ ವರ್ಷಪೂರ್ತಿ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಏರ್ಟೆಲ್:
ಏರ್ಟೆಲ್ನ 2999 ರೂ. ಪ್ರಿಪೇಯ್ಡ್ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರ ಜೊತೆಗೆ 1799 ರೂ. ವಿನ ಪ್ಲಾನ್ ಕೂಡ ಇದ್ದು, ಇದೂ 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 24 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.
ಜಿಯೋ:
ಜಿಯೋದ 2879 ರೂ. ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಂತೆಯೆ 2545 ರೂ. ಪ್ಲಾನ್ ಕೂಡ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.
ವೊಡಾಫೋನ್- ಐಡಿಯಾ:
ವಿ ಟೆಲಿಕಾಂನ 3099 ರೂ. ಪ್ಲಾನ್ನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ. 2899 ರೂ. ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.
WhatsApp Alert: ವಾಟ್ಸ್ಆ್ಯಪ್ ಬಳಕೆದಾರರು ಇಲ್ಲಿ ಗಮನಿಸಿ: ತಪ್ಪಿಯೂ ಈ ಲಿಂಕ್ ಓಪನ್ ಮಾಡಬೇಡಿ
Vivo Y21T: 5000mAh ಬ್ಯಾಟರಿಗೆ ಫಾಸ್ಟ್ ಚಾರ್ಜರ್: ಕಡಿಮೆ ಬೆಲೆಯ ವಿವೋ Y21T ಸ್ಮಾರ್ಟ್‌ಫೋನ್ ಬಿಡುಗಡೆ
(Jio Airtel and Vodafone Idea Vi New Year 2022 Prepaid Plan with one year 365 days validity)