Jio-Airtel-Vi ನಡುವೆ ಭರ್ಜರಿ ಪೈಪೋಟಿ: 28 ದಿನಗಳ ವ್ಯಾಲಿಡಿಟಿ ಪ್ಲಾನ್​ನಲ್ಲಿ ಬಂಪರ್ ಬೆನಿಫಿಟ್

| Updated By: Vinay Bhat

Updated on: Jul 11, 2021 | 6:40 PM

ಪ್ರಮುಖವಾಗಿ ಕಡಿಮೆ ಬೆಲೆಯ 150 ರೂ. ಒಳಗಿನ ಪ್ಲಾನ್ ಗಳು ಹೆಚ್ಚಿನ ಉಪಯೋಗಗಳನ್ನು ಹೊಂದಿವೆ. ನಿಗದಿತ ಡೇಟಾ ಪ್ರಯೋಜನ ಲಭ್ಯವಾಗುವ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ದೊರೆಯುತ್ತದೆ.

Jio-Airtel-Vi ನಡುವೆ ಭರ್ಜರಿ ಪೈಪೋಟಿ: 28 ದಿನಗಳ ವ್ಯಾಲಿಡಿಟಿ ಪ್ಲಾನ್​ನಲ್ಲಿ ಬಂಪರ್ ಬೆನಿಫಿಟ್
Jio Airtel Vi
Follow us on

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಓಟವನ್ನು ತಡೆಯಲು ಇತರೆ ಕಂಪೆನಿಗಳು ಹರಸಾಹಸ ಪಡುತ್ತಿದೆ. ಈ ಪೈಕಿ ಏರ್‌ಟೆಲ್‌ ಮುಂಚೂಣಿಯ ಹಾದಿಯಲ್ಲಿ ನಡೆಯುತ್ತಿವೆ. ಇವುಗಳಿಗೆ ಪೈಪೋಟಿ ನೀಡಲು ವೊಡಾಫೋನ್ – ಐಡಿಯಾ ಕೂಡ ಬಂಪರ್ ಆಫರ್ ಗಳನ್ನು ಘೋಷಿಸುತ್ತಿದೆ. ಹಾಗೆಯೇ ಭಿನ್ನ ಬೆಲೆಯಲ್ಲಿ ಹಲವು ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಯೋಜನೆಗಳನ್ನು ಪರಿಚಯಿಸಿವೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ವಿಶೇಷ ಪ್ರಯೋಜನಕರ ಪ್ಲಾನ್ ಬಿಡುಗಡೆ ಮಾಡುತ್ತಿವೆ.

ಪ್ರಮುಖವಾಗಿ ಕಡಿಮೆ ಬೆಲೆಯ 150 ರೂ. ಒಳಗಿನ ಪ್ಲಾನ್ ಗಳು ಹೆಚ್ಚಿನ ಉಪಯೋಗಗಳನ್ನು ಹೊಂದಿವೆ. ನಿಗದಿತ ಡೇಟಾ ಪ್ರಯೋಜನ ಲಭ್ಯವಾಗುವ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ದೊರೆಯುತ್ತದೆ. ಹಾಗಾದರೇ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಟೆಲಿಕಾಂಗಳ ಅಗ್ಗದ ಡೇಟಾ ರೀಚಾರ್ಜ್‌ ಪ್ಲಾನ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.

149 ರೂ. ಏರ್ಟೆಲ್ ಪ್ರಿಪೇಯ್ಡ್ ಪ್ಲಾನ್:

ನಂಬರ್ ಒನ್ ಸ್ಥಾನಕ್ಕೆ ಹೋರಾಡುತ್ತಿರುವ ಏರ್‌ಟೆಲ್‌ ಟೆಲಿಕಾಂನ 149 ರೂ. ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟಾರೆಯಾಗಿ 2GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಒಟ್ಟು 300 ಉಚಿತ ಎಸ್‌ಎಮ್ಎಸ್‌ಗಳು ಲಭ್ಯವಿದ್ದು. ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಸಿಗಲಿದೆ. ಅಲ್ಲದೆ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಸೇರಿದಂತೆ ಇನ್ನಷ್ಟು ಸೇವೆಗಳು ದೊರೆಯುತ್ತವೆ.

149 ರೂ. ವಿ ಟೆಲಿಕಾಂ ಪ್ರಿಪೇಯ್ಡ್ ಪ್ಲಾನ್:

ವಿ ಟೆಲಿಕಾಂ 149 ರೂ. ಈ ಪ್ರಿಪೇಯ್ಡ್‌ ಪ್ಲಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, 2GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಒಟ್ಟು 300 ಉಚಿತ ಎಸ್‌ಎಮ್ಎಸ್‌ಗಳು ಲಭ್ಯವಿದ್ದು. ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಸಿಗಲಿದೆ. ಅಲ್ಲದೆ ವಿ ಮೂವಿಸ್ ಹಾಗೂ ಟಿವಿ ಆಪ್‌ ಸೌಲಭ್ಯ ಸಿಗಲಿದೆ. ಹಾಗೆಯೇ ವೆಬ್‌ ಮೂಲಕ ಈ ಯೋಜನೆ ರೀಚಾರ್ಜ್ ಮಾಡಿದರೇ 1GB ಡೇಟಾ ಹೆಚ್ಚುವರಿಯಾಗಿ ಸಿಗುತ್ತದೆ.

149 ರೂ. ಜಿಯೋ ಪ್ರಿಪೇಯ್ಡ್ ಪ್ಲಾನ್:

ಇನ್ನೂ ಜಿಯೋದ 149 ರೂ. ಪ್ಲಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ ನಿಮಗೆ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳ ಪ್ರಯೋಜನ ಪಡೆಯಬಹುದು. ಜೊತೆಗೆ ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಿಗಲಿದೆ. ಪೂರ್ಣ ಅವಧಿಗೆ ಒಟ್ಟು ನಿಮಗೆ 24GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರಲ್ಲಿ ಯಾವುದೇ ಓಟಿಟಿ ಸೌಲಭ್ಯ ಇರುವುದಿಲ್ಲ.

Whatsapp ​ನಲ್ಲಿ ಡಿಲೀಟ್ ಆದ ಮೆಸೆಜ್ ನೋಡುವುದು ಮತ್ತಷ್ಟು ಸುಲಭ: ಈ ಟ್ರಿಕ್ ಬಳಸಿ

ಭರ್ಜರಿ ಸೇಲ್ ಕಾಣುತ್ತಿದೆ ಅತಿ ಕಡಿಮೆ ಬೆಲೆಯ ಆಕರ್ಷಕ ಫೀಚರ್ಸ್​ನ ಈ ಸ್ಮಾರ್ಟ್​ಫೋನುಗಳು!

Published On - 6:35 pm, Sun, 11 July 21