AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಸೇಲ್ ಕಾಣುತ್ತಿದೆ ಅತಿ ಕಡಿಮೆ ಬೆಲೆಯ ಆಕರ್ಷಕ ಫೀಚರ್ಸ್​ನ ಈ ಸ್ಮಾರ್ಟ್​ಫೋನುಗಳು!

ಅತಿ ಕಡಿಮೆ ಬೆಲೆಗೆ ಲಭ್ಯವಿರುವ 5G ಸ್ಮಾರ್ಟ್​ ಫೋನುಗಳು ಪೈಕಿ ಐಕ್ಯೂ Z3 ಕೂಡ ಒಂದಾಗಿದೆ. ಇದು 6.58 ಇಂಚಿನ ಹೆಚ್​ಡಿ ಡಿಸ್ ಪ್ಲೇ ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 768G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ.

ಭರ್ಜರಿ ಸೇಲ್ ಕಾಣುತ್ತಿದೆ ಅತಿ ಕಡಿಮೆ ಬೆಲೆಯ ಆಕರ್ಷಕ ಫೀಚರ್ಸ್​ನ ಈ ಸ್ಮಾರ್ಟ್​ಫೋನುಗಳು!
Smartphones
TV9 Web
| Edited By: |

Updated on: Jul 11, 2021 | 3:48 PM

Share

ಭಾರತೀಯ ಮಾರುಕಟ್ಟೆಯಲ್ಲಿ ಈಗ ಸ್ಮಾರ್ಟ್​ಫೋನುಗಳಿಗೆ ಎಲ್ಲಿಲ್ಲದ ಬೇಡಿಕೆ. ಶವೋಮಿ, ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋದಂತಹ ವಿದೇಶಿ ಕಂಪೆನಿಗಳಿಗೆ ಭಾರತವೇ ಸ್ಮಾರ್ಟ್​ಫೋನ್​ನ ನೆಚ್ಚಿನ ತಾಣವಾಗಿದೆ. ಇದಕ್ಕಾಗಿಯೆ ದೇಶದಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಸ್ಮಾರ್ಟ್​ಫೋನುಗಳು ಲಗ್ಗೆಯಿಡುತ್ತಿವೆ. ಅದರಲ್ಲೂ ಭರ್ಜರಿ ಬ್ಯಾಟರಿ, ಆಕರ್ಷಕ ಕ್ಯಾಮೆರಾವುಳ್ಳ ಕಡಿಮೆ ಬೆಲೆಯ ಫೋನುಗಳು ಅತಿ ಹೆಚ್ಚು ಸೇಲ್ ಕಾಣುತ್ತವೆ. ಅಂತೆಯೆ ಸದ್ಯ ಟ್ರೆಂಡಿಂಗ್​ನಲ್ಲಿದ್ದು ಭರ್ಜರಿ ಸೇಲ್ ಆಗುತ್ತಿರುವ ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ.

ರೆಡ್ಮಿ ನೋಟ್ 10 ಪ್ರೊ: ಕೆಲವು ತಿಂಗಳ ಹಿಂದೆ ಬಿಡುಗಡೆ ಆದ ಶವೋಮಿ ಕಂಪೆನಿಯ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್​ಫೋನ್ ಸದ್ಯ ಹೆಚ್ಚಾಗಿ ಮಾರಾಟವಾಗುತ್ತಿದೆ. ಇದು 6.67 ಇಂಚಿನ ಫುಲ್ ಹೆಚ್​ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್​ ಪ್ಲೇ ಅನ್ನು ಹೊಂದಿದೆ. ಆಕ್ಟಾಕೋರ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 732G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. 5,020mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕ್​ಅಪ್ ನೀಡಲಾಗಿದೆ. ಇದರ ಬೆಲೆ ಕೇವಲ 17,999 ರೂ. ಆಗಿದೆ.

ರೆಡ್ಮಿ ನೋಟ್ 10: ರೆಡ್ಮಿ ನೋಟ್ 10 ಪ್ರೊ ಜೊತೆಗೆ ಬಿಡುಗಡೆ ಆದ ನೋಟ್ 10 ಸ್ಮಾರ್ಟ್‌ಫೋನ್‌ 6.43-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 678 SoC ಪ್ರೊಸೆಸರ್‌ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12 ರೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 582 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಬೆಂಬಲ ಪಡದುಕೊಂಡಿದೆ. ಇದರ ಬೆಲೆ 15,499 ರೂ. ಆಗಿದೆ.

ಪೊಕೊ X3 ಪ್ರೊ: ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಭಾರತದಲ್ಲಿ ಭರ್ಜರಿ ಸೇಲ್ ಕಾಣುತ್ತಿದೆ. ಇದು 6.67 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 860 SoC ಪ್ರೊಸೆಸರ್‌ ಅನ್ನು ಹೊಂದಿದ್ದು, 6GB RAM, 8GB RAM ಮತ್ತು 128GB, 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಖರೀದಿಗೆ ಲಭ್ಯವಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 582 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. 5160mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದರ ಬೆಲೆ 18,999 ರೂ. ಆಗಿದೆ.

ಐಕ್ಯೂ Z3 5G: ಅತಿ ಕಡಿಮೆ ಬೆಲೆಗೆ ಲಭ್ಯವಿರುವ 5G ಸ್ಮಾರ್ಟ್​ ಫೋನುಗಳು ಪೈಕಿ ಐಕ್ಯೂ Z3 ಕೂಡ ಒಂದಾಗಿದೆ. ಇದು 6.58 ಇಂಚಿನ ಹೆಚ್​ಡಿ ಡಿಸ್ ಪ್ಲೇ ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 768G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ವರ್ಧಿತ ಗೇಮಿಂಗ್ ಕಾರ್ಯಕ್ಷಮತೆಗೆ ಹೊಂದುವಂತೆ ಮಾಡಲಾಗಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ನೈಟ್ ಮೋಡ್, ಎಐ ಪೋಲಾರ್ ನೈಟ್ ಸೆಲ್ಫಿಗಳು ಮತ್ತು 10x ಡಿಜಿಟಲ್ ಜೂಮ್ ಬೆಂಬಲವನ್ನು ನೀಡುತ್ತದೆ. 4,400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದುಕೊಂಡಿದ್ದು, 55W ಪ್ಲ್ಯಾಶ್ ಚಾರ್ಜ್ ಟೆಕ್ನಾನಜಿಯನ್ನು ಬೆಂಬಲಿಸುತ್ತದೆ. ಇದರ ಬೆಲೆ 19,990 ರೂ. ಆಗಿದೆ.

ನೀವು Whatsapp, Facebook ಬಳಸುತ್ತಿದ್ದರೆ ಈ ಕೆಲಸ ತಪ್ಪದೇ ಮಾಡಿ!

ರಿಯಲ್​ ಮಿಯಿಂದ ಕೇವಲ 6,990 ರೂ. ಗೆ ಆಕರ್ಷಕ ಹೊಸ ಸ್ಮಾರ್ಟ್​​ಫೋನ್ ರಿಲೀಸ್

Follow Us
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಸಂಪರ್ಕ ಕ್ರಾಂತಿ ರೈಲಿನಲ್ಲಿ ಗಾಂಜಾ ಸೇವನೆ: ಯುವಕರ ದರ್ಬಾರ್ ವಿಡಿಯೋ ವೈರಲ್!
ಸಂಪರ್ಕ ಕ್ರಾಂತಿ ರೈಲಿನಲ್ಲಿ ಗಾಂಜಾ ಸೇವನೆ: ಯುವಕರ ದರ್ಬಾರ್ ವಿಡಿಯೋ ವೈರಲ್!
ತವರಿನಿಂದ ಹೊರಗೆ RCBಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?
ತವರಿನಿಂದ ಹೊರಗೆ RCBಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?
ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?
ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?