AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು Whatsapp, Facebook ಬಳಸುತ್ತಿದ್ದರೆ ಈ ಕೆಲಸ ತಪ್ಪದೇ ಮಾಡಿ!

ನಾವು ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ ಅಥವಾ ಹೊಸ ಖಾತೆಯನ್ನು ತೆರೆಯುವ ಮುನ್ನ ನಮ್ಮ ಪ್ರೈವೆಸಿ ಸುರಕ್ಷತೆ ಎಂಬ ಮೊದಲ ಪಾಠವನ್ನು ತಿಳಿದರೆ ಒಳ್ಳೆಯದು.

ನೀವು Whatsapp, Facebook ಬಳಸುತ್ತಿದ್ದರೆ ಈ ಕೆಲಸ ತಪ್ಪದೇ ಮಾಡಿ!
ವಾಟ್ಸ್ಯಾಪ್ (ಪ್ರಾತಿನಿಧಿಕ ಚಿತ್ರ)
TV9 Web
| Updated By: Vinay Bhat|

Updated on: Jul 10, 2021 | 6:51 PM

Share

ಇಂದಿನ ಹೈ-ಫೈ ಜಗತ್ತಿನಲ್ಲಿ ಇಂಟರ್​ನೆಟ್ ಮೂಲೆಮೂಲೆಗೆ ತಲುಪಿದ್ದು ಸಾಮಾಜಿಕ ಜಾಲತಾಣ ಕೂಡ ಅಷ್ಟೇ ವೇಗದಲ್ಲಿ ಖ್ಯಾತಿ ಪಡೆಯುತ್ತಿದೆ. ಆದರೆ, ಸೋಷಿಯನ್ ಮೀಡಿಯಾಕ್ಕೆ  ಒಳಬರುವ ಮುನ್ನ ನಮ್ಮ ಖಾಸಾಗಿ ಮಾಹಿತಿಗಳು ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರು ತಿಳಿದಿರಬೇಕು. ಅದರಲ್ಲೂ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ ಫೇಸ್‌ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಹತ್ತು ಹಲವು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವವರು ಅವುಗಳ ಪೂರ್ವಪರ ಮಾಹಿತಿ ಇಲ್ಲದೇ ಖಾತೆ ತೆರೆದುಬಿಡುತ್ತಾರೆ.

ಈಗಾಗಲೇ ಹಲವು ಅಧ್ಯಯನಗಳ ಪ್ರಕಾರ, ಹೊಸದಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಮ್ಮ ಇಮೇಲ್‌, ಮನೆ ಅಥವಾ ಊರಿನ ವಿಳಾಸ, ಕುಟುಂಬ ಸದಸ್ಯರು, ಮೊಬೈಲ್‌ ಸಂಖ್ಯೆಗಳನ್ನು ಎಲ್ಲರಿಗೂ ತಿಳಿಯುವಂತೆ ಇಡುತ್ತಾರೆ. ಇದರಿಂದ ಆಗಬಹುದಾದ ಅನಾಹುತಗಳನ್ನು ಅವರು ಊಹಿಸಿರುವುದಿಲ್ಲ. ಇದು ಅವರಿಗೆ ತಿಳಿಯುವ ವೇಳೆಗೆ ಅನಾಹುತಗಳು ಜರುಗಬಹುದು ಎಂದು ಹೇಳಿವೆ.

ಹೀಗಾಗಿ ನಾವು ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ ಅಥವಾ ಹೊಸ ಖಾತೆಯನ್ನು ತೆರೆಯುವ ಮುನ್ನ ನಮ್ಮ ಪ್ರೈವೆಸಿ ಸುರಕ್ಷತೆ ಎಂಬ ಮೊದಲ ಪಾಠವನ್ನು ತಿಳಿದರೆ ಒಳ್ಳೆಯದು.

ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್​ನಲ್ಲಿ ನೀವು ಖಾತೆ ತೆರೆಯುವಾಗಲೇ ಕೆಲವು ಚೌಕಟ್ಟು ರೂಪಿಸಿಕೊಳ್ಳಬೇಕು. ಅಂದರೆ ಪಬ್ಲಿಕ್‌, ಫ್ರೆಂಡ್ಸ್, ಫ್ರೆಂಡ್ಸ್ ಆಫ್ ಫ್ರೆಂಡ್ಸ್, ಓನ್ಲಿ ಮಿ ಹೀಗೆ ಮೊದಲಾದ ಆಯ್ಕೆಗಳನ್ನು ಫೇಸ್​ಬುಕ್‌ ತನ್ನ ಬಳಕೆದಾರರಿಗೆ ಒದಗಿಸಿದೆ. ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಜೊತೆಗೆ ನಿಮ್ಮ ಪೇಸ್‌ಬುಕ್ ಪ್ರೊಫೈಲ್ ಚಿತ್ರ ಯಾರಿಗೆ (ಫ್ರೆಂಡ್ಸ್ ಅಥವಾ ಸಂಬಂಧಿಕರು ಮಾತ್ರ) ಯಾರಿಗೆ ಕಾಣಬೇಕು ಎಂಬುದನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇನ್ನೂ ವಾಟ್ಸ್ಆ್ಯಪ್ ಖಾತೆ ತೆರೆದಾಗ ನಿಮ್ಮ ಪ್ರೊಫೈಲ್‌ ಪಿಕ್ಚರ್ ನಿಮ್ಮಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಮಾತ್ರ ಕಾಣಿಸುವಂತಹ ಆಯ್ಕೆ ಇದೆ. ಸೆಟ್ಟಿಂಗ್ಸ್ – ಅಕೌಂಟ್- ಪ್ರೈವೆಸಿ ಇಲ್ಲಿ ನೀವು ಕೊನೆಯ ಬಾರಿ ವಾಟ್ಸ್ಆ್ಯಪ್ ಬಳಸಿದ ಸಮಯ ಯಾರಿಗೆಲ್ಲ ಕಾಣಬೇಕು ಎಂಬುದನ್ನೂ ಸಹ ನೀವೇ ನಿರ್ಧರಿಸಬಹುದಾಗಿದೆ. ಅಲ್ಲಿ ಎವರಿಒನ್, ಮೈ ಕಾಂಟ್ಯಾಕ್ಟ್ ಮತ್ತು ನೋಬಡಿ ಎಂಬ ಆಯ್ಕೆಗಳಿವೆ. ನೀವು ಅಪ್‌ಡೇಟ್‌ ಮಾಡುವ ಸ್ಟೇಟಸ್‌ ಯಾರಿಗೆ ಕಾಣಬೇಕು ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಅನ್ಯರಿಂದ ನೀವು ಸೇಫ್ ಆಗಿ ಇರಬಹುದು.

ಅಂತೆಯೆ ಟಿಕ್ ಟಾಕ್ ನಿಷೇಧವಾದ ಬಳಿಕ ಫೇಮಸ್ ಆಗಿರುವ ಫೇಸ್‌ಬುಕ್ ಮೂಲಕ ನೇರವಾಗಿ ಲಾಗಿನ್ ಆಗಬಹುದಾದ ಇನ್‌ಸ್ಟಾಗ್ರಾಮ್​ನಲ್ಲಿ ನೀವು ಖಾತೆ ತೆರೆಯುವಾಗ ಹೆಚ್ಚು ಎಚ್ಚರ ವಹಿಸುವ ಅಗತ್ಯ ಇದೆ. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆ ಪ್ರೈವೇಟ್‌ ಅಥವಾ ಪಬ್ಲಿಕ್‌ ಆಗಿರಬೇಕೇ ಎಂಬುದನ್ನು ನೀವಿಲ್ಲಿ ನಿರ್ಧರಿಸಬಹುದು. ಸೆಟ್ಟಿಂಗ್ಸ್ ತೆರೆದು ಪ್ರೈವೆಸಿ ಅಂಡ್ ಸೆಕ್ಯುರಿಟಿ ಆಯ್ಕೆ ಮಾಡಿದರೆ ನಿಮ್ಮ ಖಾತೆ ಪಬ್ಲಿಕ್‌ ಆಗಿರಬೇಕೇ ಎಂಬುದನ್ನು ನಿರ್ಧರಿಸಬಹುದು. ನೀವು ಅನುಮತಿ ಕೊಟ್ಟಿದ್ದರೆ ಮಾತ್ರ ಅಪರಿಚಿತರು ಸಂದೇಶ ಕಳುಹಿಸಲು ಸಾಧ್ಯ.

ಸಾಮಾನ್ಯವಾಗಿ ಹೆಚ್ಚಿನವರು ಹೊಸ ಖಾತೆ ತೆರೆಯುವ ಧಾವಂತದಲ್ಲಿ ಸುಲಭವಾದ ಪಾಸ್‌ವರ್ಡ್‌ಗಳ ಮೊರೆ ಹೊಗುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಹಾಗಾಗಿ, ನಿಮ್ಮ ಪ್ರತಿ ಖಾತೆಗೂ ಪ್ರತ್ಯೇಕ ಪಾಸ್‌ವರ್ಡ್‌ ನೀಡಲು ಮರೆಯದಿರಿ. ನೆನಪಿನಲ್ಲಿಟ್ಟುಕೊಳ್ಳಲು ಸುಲಭ ಎಂದು 123456 ರೀತಿಯ ಪಾಸ್‌ವರ್ಡ್‌ ಯಾವುದೇ ಕಾರಣಕ್ಕೂ ಬಳಸಲೇಬೇಡಿ.

ರಿಯಲ್​ ಮಿಯಿಂದ ಕೇವಲ 6,990 ರೂ. ಗೆ ಆಕರ್ಷಕ ಹೊಸ ಸ್ಮಾರ್ಟ್​​ಫೋನ್ ರಿಲೀಸ್

7000mAh ಬ್ಯಾಟರಿ, 64MP ಕ್ಯಾಮೆರಾ: 30,000 ರೂ. ನ ಈ ಫೋನನ್ನು ಕೇವಲ 4,700 ರೂ. ಗೆ ಖರೀದಿಸಿ

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ