7000mAh ಬ್ಯಾಟರಿ, 64MP ಕ್ಯಾಮೆರಾ: 30,000 ರೂ. ನ ಈ ಫೋನನ್ನು ಕೇವಲ 4,700 ರೂ. ಗೆ ಖರೀದಿಸಿ

ಬರೋಬ್ಬರಿ 7000mAh ಬ್ಯಾಟರಿ, 64MP ಕ್ಯಾಮೆರಾ ಮಾತ್ರವಲ್ಲದೆ ಅತ್ಯುತ್ತಮ ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್​ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಆಫರ್​ನಲ್ಲಿ ಲಭ್ಯವಿದೆ.

7000mAh ಬ್ಯಾಟರಿ, 64MP ಕ್ಯಾಮೆರಾ: 30,000 ರೂ. ನ ಈ ಫೋನನ್ನು ಕೇವಲ 4,700 ರೂ. ಗೆ ಖರೀದಿಸಿ
Galaxy F62
Follow us
TV9 Web
| Updated By: Vinay Bhat

Updated on: Jul 10, 2021 | 5:24 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart) ಸದಾ ಒಂದಲ್ಲಾ ಒಂದು ಆಫರ್​ಗಳಲ್ಲಿ ವಸ್ತುಗಳನ್ನು ಖರೀದಿಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿರುತ್ತದೆ. ಸದ್ಯ ಫ್ಲಿಪ್​ಕಾರ್ಟ್ ಎಲೆಕ್ಟ್ರಾನಿಕ್ ಸೇಲ್ (Electronic Sale) ಹಮ್ಮಿಕೊಂಡಿದೆ. ಜುಲೈ 10 ಇಂದಿನಿಂದ ಈ ಮೇಳ ಆರಂಭವಾಗಿದ್ದು ಜುಲೈ 13ರ ವರೆಗೆ ಒಟ್ಟು 4 ದಿನಗಳ ಕಾಲ ನಡೆಯಲಿದೆ. ಈ ಸಂದರ್ಭ ಅನೇಕ ಸ್ಮಾರ್ಟ್ ಟಿವಿ, ಸ್ಮಾರ್ಟ್​ಫೋನ್​ಗಳು ಭರ್ಜರಿ ಡಿಸ್ಕೌಂಟ್​ನಲ್ಲಿ ಸಿಗುತ್ತಿದೆ. ಅದರಲ್ಲೂ ಪ್ರಮುಖವಾಗಿ ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ಕಂಪೆನಿಯ ಗ್ಯಾಲಕ್ಸಿ F62 (Samsung Galaxy F62) ಸ್ಮಾರ್ಟ್​ ಫೋನನ್ನು ಅತಿ ಕಡಿಮೆ ಬೆಲೆ ಖರೀದಿಸಬಹುದಾಗಿದೆ.

ಹೌದು, ಬರೋಬ್ಬರಿ 7000mAh ಬ್ಯಾಟರಿ, 64MP ಕ್ಯಾಮೆರಾ ಮಾತ್ರವಲ್ಲದೆ ಅತ್ಯುತ್ತಮ ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್​ಫೋನ್ ಭರ್ಜರಿ ಆಫರ್​ನಲ್ಲಿ ಲಭ್ಯವಿದೆ. ಮೊದಲಿಗೆ ಈ ಫೋನಿನ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ…

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62 ಸ್ಮಾರ್ಟ್‌ಫೋನ್‌ 1,080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಗೆ ಮಲ್ಟಿ ಟಚ್‌ ಸ್ಕ್ರೀನ್‌ ವ್ಯವಸ್ಥೆ ಅಳವಡಿಸಿರುವುದು ವಿಶೇಷ. ಇದು ಎಕ್ಸಿನೋಸ್‌ 9825 ಪ್ರೊಸೆಸರ್‌ ಅನ್ನು ಹೊಂದಿದ್ದು, ಒನ್​ಯುಐ ಆಧಾರಿತ ಆಂಡ್ರಾಯ್ಡ್‌ 11 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM+128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಅದ್ಭುತವಾಗಿರುವ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಈ ಸ್ಮಾರ್ಟ್​ಫೋನ್​ನಲ್ಲಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೆನ್ಸಾರ್‌, ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ಗ್ಯಾಲಕ್ಸಿ F62 ಸ್ಮಾರ್ಟ್‌ಫೋನ್​ನ ಪ್ರಮುಖ ಹೈಲೇಟ್ ಬರೋಬ್ಬರಿ 7000mAh ಸಾಮರ್ಥ್ಯದ ಬೃಹತ್ ಬ್ಯಾಟರಿ. ಇದರ ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62 ಸ್ಮಾರ್ಟ್‌ಫೋನ್​ನ ಮೂಲಬೆಲೆ 29,999 ರೂ. ಆಗಿದೆ. ಆದರೆ, ಸದ್ಯ ಎಲೆಕ್ಟ್ರಾನಿಕ್ ಸೇಲ್ ಪ್ರಯುಕ್ತ ಫ್ಲಿಪ್​ಕಾರ್ಟ್​ನಲ್ಲಿ ಇದು 10,000 ರೂ. ಡಿಸ್ಕೌಂಟ್​ನಲ್ಲಿ 19,999 ರೂ. ಗೆ ಲಭ್ಯವಾಗುತ್ತಿದೆ. ಇದಿಷ್ಟೆ ಅಲ್ಲದೆ ವಿಶೇಷವಾಗಿ ಈ ಮೊಬೈಲ್​ಗೆ ಎಕ್ಸ್​ಚೇಂಜ್ ಆಫರ್ ನೀಡಲಾಗಿದ್ದು, 15,300 ರೂ. ವರೆಗೆ ನಿಮ್ಮ ಹಳೇಯ ಸ್ಮಾರ್ಟ್​ ಫೋನನ್ನು ಮಾರಾಟ ಮಾಡಬಹುದಾಗಿದೆ. ಎಕ್ಸ್​ಚೇಂಜ್ ಆಫರ್​ನಲ್ಲಿ ಎಲ್ಲದಾರೂ ಅಷ್ಟೂ ಮೊತ್ತಕ್ಕೆ ನಿಮ್ಮ ಫೋನು ಮಾರಾಟವಾದರೆ ಗ್ಯಾಲಕ್ಸಿ F62 ಸ್ಮಾರ್ಟ್‌ಫೋನ್​ ಅನ್ನು ಕೇವಲ 4,699 ರೂ. ಗೆ ನಿಮ್ಮದಾಗಿಸಿಬಹುದು.

Jio-Airtel-Vi ಗ್ರಾಹಕರಿಗೆ ಬಂಪರ್ ಬೆನಿಫಿಟ್: ಪ್ರತಿದಿನ 2GB ಡೇಟಾ, ಬರೋಬ್ಬರಿ 56 ದಿನ ವ್ಯಾಲಿಡಿಟಿ

ಟ್ರಾಯ್ ವರದಿ: 4G ಡೌನ್‌ಲೋಡ್ ವೇಗದಲ್ಲಿ ಜೂನ್ ತಿಂಗಳಲ್ಲಿಯೂ ಪಾರಮ್ಯ ಮೆರೆದ ಜಿಯೋ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ