Jio-Airtel-Vi ಗ್ರಾಹಕರಿಗೆ ಬಂಪರ್ ಬೆನಿಫಿಟ್: ಪ್ರತಿದಿನ 2GB ಡೇಟಾ, ಬರೋಬ್ಬರಿ 56 ದಿನ ವ್ಯಾಲಿಡಿಟಿ
ವಿಶೇಷ ಎಂದರೆ ವೊಡಾಫೋನ್ ಐಡಿಯಾದ ಈ 449 ರೂ. ಗಳ ಪ್ಲಾನ್ನಲ್ಲಿ ಬರೋಬ್ಬರಿ 4GB ಡೇಟಾ ಪ್ರಯೋಜನ ಸಿಗುತ್ತದೆ. ಇದುಕೂಡ 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ ಜೊತೆಗೆ ದಿನಕ್ಕೆ 100 ಎಸ್ಎಮ್ಎಸ್ ಉಚಿತವಿದೆ.
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಇನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಕಡಿಮೆ ಬೆಲೆಗೆ ಅಧಿಕ ಡೇಟಾ, ಅನಿಯಮಿತ ಕರೆ ಹೀಗೆ ಅನೇಕ ಆಫರ್ಗಳನ್ನು ನೀಡುತ್ತಿದೆ. ಇತ್ತ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಭೀತಿಯ ಜೊತೆ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಹೋರಾಡುತ್ತಿರುವ ಏರ್ಟೆಲ್ ಕೂಡ ಜಿಯೋಕ್ಕೆ ಪೈಪೋಟಿ ನೀಡಲು ಮುಂದಾಗಿದೆ. ಇದರ ನಡುವೆ ಸದ್ದಿಲ್ಲದೆ ವೋಡಾಫೋನ್ ಐಡಿಯಾ ಕೂಡ ಗ್ರಾಹಕರನ್ನು ಸೆಳೆಯುತ್ತಿದೆ.
ಸದ್ಯ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಐಡಿಯಾದ 56 ದಿನಗಳ 2GB ಡೇಟಾ ಪ್ಲಾನ್ನಲ್ಲಿ ಕೆಲವು ಬದಲಾವಣೆಗಳಾಗಿವೆ. ಬಳಕೆದಾರರಿಗೆ ಮತ್ತಷ್ಟು ಪ್ರಯೋಜನ ಆಗುವ ರೀತಿಯಲ್ಲಿ ಆಫರ್ಗಳನ್ನ ನೀಡಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಜಿಯೋ 444 ರೂ. ಪ್ರಿಪೆಯ್ಡ್ ಪ್ಲಾನ್: ರಿಲಯನ್ಸ್ ಜಿಯೋದ 444 ರೂ. ಪ್ರಿಪೆಯ್ಡ್ ಪ್ಲಾನ್ನಲ್ಲಿ ಪ್ರತಿದಿನ ಗ್ರಾಹಕರು 2GB ಡೇಟಾ ಪ್ರಯೋಜನ ಪಡೆಯುತ್ತಾರೆ. 56 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ನಲ್ಲಿ ಪ್ರತಿದಿನ ಅನಿಯಮಿತ ಕರೆಯ ಸೌಲಭ್ಯ ನೀಡಲಾಗಿದೆ. ದಿನಕ್ಕೆ 100 ಎಸ್ಎಮ್ಎಸ್ ಉಚಿತ ಕೂಡ ಇದೆ. ಜೊತೆಗೆ ಜಿಯೋ ಆ್ಯಪ್ ಕೂಡ ಉಚಿತವಾಗಿ ಲಭ್ಯವಿದೆ.
ಏರ್ಟೆಲ್ 449 ರೂ. ಪ್ಲಾನ್: ಭಾರ್ತಿ ಏರ್ಟೆಲ್ನ 444 ರೂ. ರಿಚಾರ್ಜ್ ಪ್ಲಾನ್ನ ವ್ಯಾಲಿಡಿಟಿ 56 ದಿನಗಳ ಕಾಲ ಇರಲಿದೆ. ಪ್ರತಿದಿನ 2GB ಡೇಟಾ ಪ್ರಯೋಜನದ ಜೊತೆ ಅನಿಯಮಿತ ಕರೆ ಸೌಲಭ್ಯ ನೀಡಲಾಗಿದೆ. ದಿನಕ್ಕೆ 100 ಎಸ್ಎಮ್ಎಸ್ ಉಚಿತವಾಗಿ ಕಳುಹಿಸಬಹುದು. ಅಷ್ಟೇ ಅಲ್ಲದೆ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಏರ್ಟೆಲ್ ಎಕ್ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್ನ ಚಂದಾದಾರಿಕೆ ಪಡೆಯುತ್ತೀರಿ.
ವಿ 449 ರೂ. ಪ್ರಿಪೇಯ್ಡ್ ಪ್ಲಾನ್: ವಿಶೇಷ ಎಂದರೆ ವೊಡಾಫೋನ್ ಐಡಿಯಾದ ಈ 449 ರೂ. ಗಳ ಪ್ಲಾನ್ನಲ್ಲಿ ಬರೋಬ್ಬರಿ 4GB ಡೇಟಾ ಪ್ರಯೋಜನ ಸಿಗುತ್ತದೆ. ಇದುಕೂಡ 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ ಜೊತೆಗೆ ದಿನಕ್ಕೆ 100 ಎಸ್ಎಮ್ಎಸ್ ಉಚಿತವಿದೆ.
ಇನ್ನೂ ವೋಡಾಫೋನ್ ಐಡಿಯಾದ 699 ರೂ. ಗಳ ಪ್ಲಾನ್ ಕೂಡ ತುಂಬಾನೆ ಉಪಯುಕ್ತವಾಗಿದೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ 4GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಯ ಜೊತೆಗೆ 100 ಎಸ್ಎಮ್ಎಸ್ ಉಚಿತ ನೀಡಿಲಾಗಿದೆ.
ಇದೇ 698 ರೂ. ನಲ್ಲಿ ಏರ್ಟೆಲ್ ಪ್ಲಾನ್ ಕೂಡ ಇದ್ದು, ಇದು ದಿನಕ್ಕೆ 2GB ಡೇಟಾವನ್ನಷ್ಟೆ ನೀಡುತ್ತಿದೆ. ದಿನಕ್ಕೆ 100 ಎಸ್ಎಮ್ಎಸ್ ಉಚಿತವಿದ್ದರೆ, ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಏರ್ಟೆಲ್ ಎಕ್ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್ನ ಚಂದಾದಾರಿಕೆ ನೀಡಲಾಗಿದೆ.
ಟ್ರಾಯ್ ವರದಿ: 4G ಡೌನ್‌ಲೋಡ್ ವೇಗದಲ್ಲಿ ಜೂನ್ ತಿಂಗಳಲ್ಲಿಯೂ ಪಾರಮ್ಯ ಮೆರೆದ ಜಿಯೋ
How To: ಕೊರೊನಾ ಕಾಲದಲ್ಲಿ ಹೆಚ್ಚುತ್ತಿದೆ ಸೈಬರ್ ದಾಳಿ; ಸುರಕ್ಷಿತ ಆನ್ಲೈನ್ ಶಾಪಿಂಗ್ ಹೇಗೆ?