WhatsAppನಲ್ಲಿ ನೂತನ ಫೀಚರ್; ಬಳಕೆದಾರರು ಫುಲ್ ಖಷ್

ವಾಟ್ಸ್​ಆ್ಯಪ್  ಈಗಾಗಲೇ ಬಳಕೆದಾರರಿಗೆ ಅನುಕೂಲವಾಗುವಂತೆ ಸಾಕಷ್ಟು ಹೊಸ ಹೊಸ ಅಪ್​ಡೇಟ್​​ಗಳನ್ನು ನೀಡುತ್ತಾ ಬರುತ್ತಿದೆ. ಸದ್ಯ ಮತ್ತೊಂದು ಹೊಸ ಫೀಚರ್ ಅನ್ನು ಬಳಕೆದಾರರಿಗೆ ನೀಡಲು ವಾಟ್ಸ್​ಆ್ಯಪ್ ಮುಂದಾಗಿದೆ.

WhatsAppನಲ್ಲಿ ನೂತನ ಫೀಚರ್; ಬಳಕೆದಾರರು ಫುಲ್ ಖಷ್
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on: Jul 09, 2021 | 8:11 PM

ವಿಶ್ವದಲ್ಲಿ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ ಒಡೆತನದ ವಾಟ್ಸ್​ಆ್ಯಪ್  ಈಗಾಗಲೇ ಬಳಕೆದಾರರಿಗೆ ಅನುಕೂಲವಾಗುವಂತೆ ಸಾಕಷ್ಟು ಹೊಸ ಹೊಸ ಅಪ್​ಡೇಟ್​​ಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್ ಲಾಗೌಟ್ ಆಯ್ಕೆ ಪರೀಕ್ಷಿಸುತ್ತಿರುವುದಾಗಿ ತಿಳಿಸಿತ್ತು. ಇದರ ನಡುವೆ ಸದ್ಯ ಮತ್ತೊಂದು ಹೊಸ ಫೀಚರ್ ಅನ್ನು ಬಳಕೆದಾರರಿಗೆ ನೀಡಲು ವಿಶ್ವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಮುಂದಾಗಿದೆ.

ವಾಟ್ಸ್​ಆ್ಯಪ್ ತನ್ನ ಮುಂದಿನ ಅಪ್​ಡೇಟ್​​ನಲ್ಲಿ ಗ್ರಾಹಕರು ಅತ್ಯುತ್ತಮ ಗುಣಮಟ್ಟದಲ್ಲಿ ಫೋಟೋವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವ ಆಯ್ಕೆ ನೀಡುತ್ತಿದೆ. ಈ ಹೊಸ ಆಯ್ಕೆಯ ಹೆಸರು ಇಮೆಜ್ ಕ್ವಾಲಿಟಿ ಎಂದಾಗಿದ್ದು, ಮೂರು ಆಯ್ಕೆಯಲ್ಲಿ ಸಿಗಲಿದೆ. ಸಾಮಾನ್ಯವಾಗಿ ಬಳಕೆದಾರರು ಈಗ ವಾಟ್ಸ್​ಆ್ಯಪ್​ನಲ್ಲಿ ಉತ್ತಮ ಕ್ವಾಲಿಟಿ ಇರುವ ಫೋಟೋವನ್ನು ಯಾರೊಂದಿಗಾದರೂ ಹಂಚಿಕೊಂಡರೆ ಅವರು ಡೌನ್​ಲೋಡ್ ಮಾಡುವಾಗ ಆ ಫೋಟೋದ ನೈಜ ಗುಣಮಟ್ಟ ಕಡಿಮೆ ಆಗುತ್ತದೆ. ಈ ತೊಂದರೆಯನ್ನು ಹೋಗಲಾಡಿಸಲು ವಾಟ್ಸ್​ಆ್ಯಪ್ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ.

ಇಮೆಜ್ ಕ್ವಾಲಿಟಿ ಅಪ್​ಡೇಟ್​​ನಲ್ಲಿ ಆಟೋ, ಬೆಸ್ಟ್ ಕ್ವಾಲಿಟಿ ಮತ್ತು ಡೇಟಾ ಸೇವರ್ ಎಂಬ ಮೂರು ಆಯ್ಕೆ ನೀಡಲಾಗಿದೆ. ಆಟೋ ಆಯ್ಕೆಯಲ್ಲಿ ನೀವು ಫೋಟೋ ಹಂಚಿಕೊಂಡರೆ ಸಾಧಾರಣ ಗುಣಮಟ್ಟದ ಫೋಟೋ ಸೆಂಡ್ ಆಗುತ್ತದೆ. ನಿಮ್ಮಲ್ಲಿರುವ ಅತ್ಯುತ್ತಮ ಗುಣಮಟ್ಟದ ಫೋಟೋವನ್ನು ಬೆಸ್ಟ್ ಕ್ವಾಲಿಟಿ ಆಯ್ಕೆಯಲ್ಲಿ ಕಳುಹಿಸಿದರೆ ಅದೇ ಹೈ ಕ್ವಾಲಿಟಿಯಲ್ಲಿ ಅವರೂ ಡೌನ್​ಲೋಡ್ ಮಾಡಬಹುದಾಗಿದೆ. ವಾಟ್ಸ್​ಆ್ಯಪ್ ನಿಮ್ಮ ಫೋಟೋದ ಕ್ವಾಲಿಟಿಯನ್ನು ಕಡಿಮೆ ಮಾಡುವುದಿಲ್ಲ. ಇನ್ನು ಡೇಟಾ ಸೇವರ್ ಆಯ್ಕೆಯಲ್ಲಿ ನೀವು ಇಮೇಜ್ ಹಂಚಿಕೊಂಡರೆ ಹೆಚ್ಚಿನ ಡೇಟಾ ಖರ್ಚಾಗದಂತೆ ನೋಡಿಕೊಳ್ಳುತ್ತದೆ.

ಸದ್ಯಕ್ಕೆ ಈ ಹೊಸ ಅಪ್​ಡೇಟ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಮಾತ್ರ ನೀಡಲಾಗುತ್ತಿದೆ. ಐಒಎಸ್ ಬಳಕೆದಾರರಿಗೆ ಯಾವಾಗ ಇದು ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಇನ್ನು ಇದೇ ಇಮೆಜ್ ಕ್ವಾಲಿಟಿ ಅಪ್​ಡೇಟ್ ರೀತಿಯಲ್ಲಿ ವಿಡಿಯೋಗೂ ಮೂರು ಆಯ್ಕೆ ನೀಡುವ ಬಗ್ಗೆ ವಾಟ್ಸ್​ಆ್ಯಪ್ ಚಿಂತಿಸುತ್ತಿದೆಯಂತೆ.

ಇದನ್ನೂ ಓದಿ: GB WhatsApp: ಜಿಬಿ ವಾಟ್ಸಾಪ್ ಎಂದರೇನು? ಇದನ್ನು ಬಳಸುವುದು ಅಪಾಯಕಾರಿ ಏಕೆ? ಇಲ್ಲಿದೆ ವಿವರ

(Here is the Facebook owned messaging app WhatsApp latest update of features about image quality)

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ