ಭಾರತದಲ್ಲಿ ಲೆನೊವೊ ಐಡಿಯಾಪ್ಯಾಡ್ ಡ್ಯುಯೆಟ್ 3 ಮತ್ತು ಯೋಗ ಡ್ಯುಯೆಟ್ 7i ಬಿಡುಗಡೆ: ಬೆಲೆ ಎಷ್ಟು?
ಲೆನೊವೊ ಇದೀಗ ತನ್ನ ಯೋಗ ಮತ್ತು ಐಡಿಯಾಪ್ಯಾಡ್ ಸರಣಿಯಲ್ಲಿ ಮತ್ತೆ ಯೋಗ ಡ್ಯುಯೆಟ್ 7i ಮತ್ತು ಐಡಿಯಾಪ್ಯಾಡ್ ಡ್ಯುಯೆಟ್ 3 ಎಂಬ ಎರಡು ಹೊಸ ಡಿವೈಸ್‌ಗಳನ್ನು ಪರಿಚಯಿಸಿದೆ.
ಚೀನಾ ಮೂಲದ ಜನಪ್ರಿಯ ಎಲೆಕ್ಟ್ರಾನಿಕ್ಸ್ ತಯಾರಕ ಕಂಪೆನಿ ಲೆನೊವೊ ಹಲವು ವರ್ಷಗಳಿಂದ ಟೆಕ್ ವಲಯದಲ್ಲಿ ಉತ್ತಮ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಕಂಪೆನಿ ಆಗಿ ಪ್ರಸಿದ್ಧಿ ಪಡೆದಿರುವ ಲೆನೊವೊ ಇದೀಗ ತನ್ನ ಯೋಗ ಮತ್ತು ಐಡಿಯಾಪ್ಯಾಡ್ ಸರಣಿಯಲ್ಲಿ ಮತ್ತೆ ಎರಡು ಹೊಸ ಡಿವೈಸ್‌ಗಳನ್ನು ಪರಿಚಯಿಸಿದೆ. ಲೆನೊವೊ ಕಂಪೆನಿ ತನ್ನ ಹೊಸ ಯೋಗ ಡ್ಯುಯೆಟ್ 7i ಮತ್ತು ಐಡಿಯಾಪ್ಯಾಡ್ ಡ್ಯುಯೆಟ್ 3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಯೋಗ ಡ್ಯುಯೆಟ್ 7i ಕೇವಲ 1.16 ಕೆ.ಜಿ.ಯಷ್ಟು ತೂಕವಿದ್ದು, ಡಿಟಾಚೇಬಲ್ ಬ್ಲೂಟೂತ್ ಕೀಬೋರ್ಡ್‌ಗಳನ್ನು ಹೊಂದಿರುವ ಮೊದಲ ಡಿವೈಸ್ ಆಗಿದೆ. ಈ ಮೂಲಕ ತುಂಬಾನೇ ಸುಲಭವಾಗಿ ಇದನ್ನು ಬಳಸಬಹುದಾಗಿದೆ. ಇದರಲ್ಲಿ ಲೆನೊವಾ ವಾಯ್ಸ್ ಅಸಿಸ್ಟೆಂಟ್, ಇನ್ಫ್ರಾರೆಡ್ ಕ್ಯಾಮೆರಾ ಮೂಲಕ ಸೆಕ್ಯೂರ್ ಫೇಸ್ ಲಾಗಿನ್, ವಿನೂತನ ಮಾದರಿಯ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸಲಾಗಿದೆ.
ಇದು 11ನೇ ತಲೆಮಾರಿನ Intel Core i5 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿರುವ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಮತ್ತು Dolby Audio – Dolby Vision ಬಳಕೆದಾರರಿಗೆ ಮತ್ತಷ್ಟು ಖುಷಿ ನೀಡುತ್ತದೆ. ಲೆನೊವೊ ಯೋಗ ಡ್ಯುಯೆಟ್ 7i ಲ್ಯಾಪ್‌ಟಾಪ್ 2160×1350 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 13 ಇಂಚಿನ 2K ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. 10.8 ಗಂಟೆಗಳ ದೀರ್ಘ ಬಾಳಿಕೆಯ ಬ್ಯಾಟರಿ ಪವರ್ ಕೂಡ ನೀಡಲಾಗಿದ್ದು, ಕೂಲಿಂಗ್ ಫೀಚರ್ ಇರುವುದು ಮತ್ತೊಂದು ವಿಶೇಷತೆ.
ಇನ್ನು ಐಡಿಯಾಪ್ಯಾಡ್ ಡ್ಯುಯೆಟ್ 3 ಕೂಡ ಡಿಟಾಚೇಬಲ್ ಬ್ಲೂಟೂತ್ (5.0) ಕೀಬೋರ್ಡ್‌ಗಳನ್ನು ಹೊಂದಿದೆ. 1920×1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 10.3-ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇಯನ್ನು ನೀಡಲಾಗಿದ್ದು, Intel Celeron ಪ್ರೊಸೆಸರ್ ಮತ್ತು Intel UHD ಗ್ರಾಫಿಕ್ಸ್ ಅಳವಡಿಸಲಾಗಿದೆ. 4GB RAMನೊಂದಿಗೆ ಇದು ಖರೀದಿಗೆ ಸಿಗುತ್ತದೆ. ಇನ್ನು ಈ ಟ್ಯಾಬ್ಲೆಟ್ ವಿಡಿಯೋ ಪ್ಲೇ ಬ್ಯಾಕ್ ಸೇರಿದಂತೆ ಒಟ್ಟು ಏಳು ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.
ಬೆಲೆ ಎಷ್ಟು?: ಲೆನೊವೊ ಯೋಗ ಡ್ಯುಯೆಟ್ 7i ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಲೆನೆವೊ.ಕಾಮ್ ವೆಬ್ ಸೈಟ್ನಲ್ಲಿ ಮಾರಾಟವಾಗಲಿದೆ. ಇದರ ಬೆಲೆ 79,999 ರೂ. ಆಗಿದೆ. ಲೆನೊವೊ ಐಡಿಯಾಪ್ಯಾಡ್ ಡ್ಯುಯೆಟ್ 3 ಕೇವಲ 29,999 ರೂ.ಗೆ ಸಿಗಲಿದೆ. ಜುಲೈ 12 ರಂದು ಮಧ್ಯಾಹ್ನ 12 ಗಂಟೆಯಿಂದ ಇವೆರಡೂ ಮಾರಾಟ ಕಾಣಲಿದೆ.
ಇದನ್ನೂ ಓದಿ: How To: ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು
(Lenovo IdeaPad Duet 3 and Yoga Duet 7i detachable PCs launched in India. Price, features specifications are explained here)