AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಂಬಾಟ್ ಕ್ಯಾಮೆರಾ, ಭರ್ಜರಿ ಬ್ಯಾಟರಿ: ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್​ಫೋನ್ ಸರಣಿಯ ಮಾಹಿತಿ ಸೋರಿಕೆ

ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 6 ಸರಣಿಯ ಗೂಗಲ್‌ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಹೆಸರಿನ ಎರಡು ಮಾಡೆಲ್‌ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ.

ಬೊಂಬಾಟ್ ಕ್ಯಾಮೆರಾ, ಭರ್ಜರಿ ಬ್ಯಾಟರಿ: ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್​ಫೋನ್ ಸರಣಿಯ ಮಾಹಿತಿ ಸೋರಿಕೆ
ಗೂಗಲ್ ಪಿಕ್ಸೆಲ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jul 09, 2021 | 6:59 PM

Share

ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 6 ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ. ಗೂಗಲ್‌ ಪಿಕ್ಸಲ್ 6 ಫೋನ್‌ ಸರಣಿಯು ಗೂಗಲ್‌ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಹೆಸರಿನ ಎರಡು ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದ ಈ ಫೋನಿನ ಎಲ್ಲಾ ಮಾಹಿತಿಗಳು ಈಗ ಸೋರಿಕೆಯಾಗಿದೆ. ಇದರ ಫೀಚರ್ಸ್‌ ಗ್ರಾಹಕರನ್ನು ಅಚ್ಚರಿಗೊಳಿಸಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಹೊಸ ಗೂಗಲ್‌ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಫೋನ್‌ಗಳು ಆಕರ್ಷಕ ಕ್ಯಾಮೆರಾ ಸೆನ್ಸರ್‌ ಜೊತೆಗೆ ಬಲಿಷ್ಠ ಬ್ಯಾಟರಿ ಪವರ್ ಹೊಂದಿರಲಿದೆಯಂತೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಗೂಗಲ್‌ ಪಿಕ್ಸಲ್ 6 4,614 mAh ಸಾಮರ್ಥ್ಯದ ಬ್ಯಾಟರಿ ಮತ್ತು ಗೂಗಲ್‌ ಪಿಕ್ಸಲ್ 6 ಪ್ರೊ 5,000 mAh ಸಾಮರ್ಥ್ಯದ  ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಅಂತೆಯೇ ಪಿಕ್ಸಲ್ 6 ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಸೆನ್ಸರ್‌ ಇರಲಿದ್ದು, ಪಿಕ್ಸಲ್ 6 ಪ್ರೊ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆಯಂತೆ.

ಗೂಗಲ್‌ ಪಿಕ್ಸಲ್ 6: ಗೂಗಲ್‌ ಪಿಕ್ಸಲ್ 6 ಸ್ಮಾರ್ಟ್‌ಫೋನ್ 6.4 ಇಂಚಿನ AMOLED ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯು ಫ್ಲ್ಯಾಟ್‌ ಮಾದರಿಯಲ್ಲಿ ಇರಲಿದೆ. ಹಿಂಭಾಗದಲ್ಲಿ ಕೇವಲ ಎರಡು ಕ್ಯಾಮೆರಾ ಮಾತ್ರ ಅಳವಡಿಸಲಾಗಿದ್ದು, ಇದು 50 ಮೆಗಾಪಿಕ್ಸೆಲ್ ಮತ್ತು 12 ಮೆಗಾಪಿಕ್ಸೆಲ್​ನಿಂದ ಕೂಡಿದೆ. ಏಕೈಕ 8GB RAM ಆಯ್ಕೆಯೊಂದಿಗೆ ಬರಲಿದ್ದು, 128GB ಮತ್ತು 256GB ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆಯಂತೆ.

ಗೂಗಲ್ ಪಿಕ್ಸಲ್ 6 ಪ್ರೊ: ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್ ದೊಡ್ಡದಾದ 6.71 ಇಂಚಿನ ಫೂರ್ಣ ಎಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇ ಕರ್ವ್ ಮಾದರಿಯನ್ನು ಪಡೆದಿದೆ. ಡಿಸ್‌ಪ್ಲೇಯಲ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಹೊಂದಿರಲಿದೆ ಎಂಬ ಮಾತುಗಳಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ 12 ಮೆಗಾಫಿಕ್ಸೆಲ್ ನೀಡಲಾಗಿದ್ದು, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್​ನ ಪ್ರಮುಖ ಕ್ಯಾಮೆರಾ, 48 ಮೆಗಾಪಿಕ್ಸೆಲ್​ನ ಟೆಲಿಪೋಟೋ ಹಾಗೂ 12 ಮೆಗಾಪಿಕ್ಸೆಲ್​ನ ಆಲ್ಟ್ರಾವೈಡ್ ಕ್ಯಾಮೆರಾ ನೀಡಲಾಗಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದು 12 GB RAM ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಗೂಗಲ್‌ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್‌ 12 ಒಎಸ್‌ ಸಪೋರ್ಟ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಧಿಕ ಬ್ಯಾಟರಿ ಜೊತೆಗೆ ವಯರ್‌ಲೆಸ್‌ ಚಾರ್ಜಿಂಗ್ ಸಪೋರ್ಟ್‌ ಪಡೆಯುವ ನಿರೀಕ್ಷೆಗಳಿವೆ. ಬ್ಲೂಟೂತ್, ವೈಫೈ, ಯುಎಸ್‌ಬಿ-ಸಿ ಯಿಂದ ಯುಎಸ್‌ಬಿ-ಸಿ ಕೇಬಲ್, ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಇದನ್ನೂ ಓದಿ: Samsung One UI Watch: ಗೂಗಲ್ ಆಧಾರಿತವಾದ ಸ್ಮಾರ್ಟ್​ವಾಚ್​ ಸಾಫ್ಟ್​ವೇರ್ ಒನ್ UI ಸ್ಯಾಮ್ಸಂಗ್​ನಿಂದ ಘೋಷಣೆ

(Google Pixel 6 series mobile phone Google Pixel 6 pro and Pixel 6 full specifications surface online. Here is the more details)

Follow Us
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!