ಟ್ರಾಯ್ ವರದಿ: 4G ಡೌನ್‌ಲೋಡ್ ವೇಗದಲ್ಲಿ ಜೂನ್ ತಿಂಗಳಲ್ಲಿಯೂ ಪಾರಮ್ಯ ಮೆರೆದ ಜಿಯೋ

ಏರ್‌ಟೆಲ್ 4ಜಿಯ ವೇಗ ಕೊಂಚಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಅದು 5 ಎಂಬಿಪಿಎಸ್ ವೇಗದೊಂದಿಗೆ ಅತ್ಯಂತ ಕೆಳಗಿನ ಸ್ಥಾನದಲ್ಲಿಯೇ ಉಳಿದುಕೊಂಡಿದೆ ಎಂದು ಟ್ರಾಯ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಟ್ರಾಯ್ ವರದಿ: 4G ಡೌನ್‌ಲೋಡ್ ವೇಗದಲ್ಲಿ ಜೂನ್ ತಿಂಗಳಲ್ಲಿಯೂ ಪಾರಮ್ಯ ಮೆರೆದ ಜಿಯೋ
ಜಿಯೋ 399 ರೂ. ಪ್ಲ್ಯಾನ್: ಜಿಯೋ 399 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಸಹ ಪರಿಚಯಿಸಿದ್ದು, ಈ ಪ್ಲ್ಯಾನ್​​ನಲ್ಲೂ 1.5 ಜಿಬಿ ದೈನಂದಿನ ಡೇಟಾ ದೊರೆಯಲಿದೆ. ಅದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಜಿಯೋ ಆಪ್‌ಗಳ ಚಂದಾದಾರಿಕೆ ದೊರೆಯಲಿದೆ. ಈ ಪ್ಲ್ಯಾನ್​ನ ವಾಲಿಡಿಟಿ 56 ದಿನಗಳು.
Follow us
| Updated By: Vinay Bhat

Updated on: Jul 10, 2021 | 3:41 PM

ಸ್ಪೀಡ್ ವಿಚಾರದಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ಜೂನ್ ತಿಂಗಳಲ್ಲಿಯೂ ಮತ್ತೆ ನಂಬರ್ ಒನ್ ಎನಿಸಿದೆ. ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್ ಡೌನ್‌ಲೋಡ್ ವೇಗ ಕಾಯ್ದುಕೊಳ್ಳುವ ಮೂಲಕ 4ಜಿ ವಿಭಾಗದಲ್ಲಿ ಕಳೆದ ತಿಂಗಳು ಜಿಯೋ ತನ್ನ ಪಾರಮ್ಯ ಮೆರೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಲ್ಲಿ, 4ಜಿ ವಿಭಾಗದಲ್ಲಿ ಜಿಯೋ ತನ್ನ ನಾಯಕತ್ವವನ್ನು ಮುಂದುವರಿಸಿದೆ. ಇನ್ನು 6.2 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಪ್‌ಲೋಡ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗ ಅಲ್ಪಮಟ್ಟದಲ್ಲಿ ಹೆಚ್ಚಳ ಕಂಡಿದೆ. ಇದು ತನ್ನ ಅತಿ ಸಮೀಪದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ವೊಡಾಫೋನ್ ಐಡಿಯಾ ಜೂನ್ ತಿಂಗಳಲ್ಲಿ ಸರಾಸರಿ 6.5 ಎಂಬಿಪಿಎಸ್ ಡೌನ್‌ಲೋಡ್ ವೇಗ ಪ್ರದರ್ಶಿಸಿದೆ.

ಏರ್‌ಟೆಲ್ 4ಜಿಯ ವೇಗ ಕೊಂಚಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಅದು 5 ಎಂಬಿಪಿಎಸ್ ವೇಗದೊಂದಿಗೆ ಅತ್ಯಂತ ಕೆಳಗಿನ ಸ್ಥಾನದಲ್ಲಿಯೇ ಉಳಿದುಕೊಂಡಿದೆ ಎಂದು ಟ್ರಾಯ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.

ಟ್ರಾಯ್ ಪ್ರಕಾರ, ವೊಡಾಫೋನ್ ಐಡಿಯಾ 6.2 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿತ್ತು. 4.8 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ನಂತರದ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ 3.9 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನೂ ಸರ್ಕಾರಿ ಸ್ವಾಮ್ಯದ ದೂರಸಂರ್ಪಕ ಸಂಸ್ಥೆ ಬಿಎಸ್‌ಎನ್‌ಎಲ್, ಆಯ್ದ ಪ್ರದೇಶಗಳಲ್ಲಿ 4ಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ, ಅದರ ನೆಟ್‌ವರ್ಕ್ ವೇಗವನ್ನು ಟ್ರಾಯ್ ಚಾರ್ಟ್‌ನಲ್ಲಿ ನಮೂದಿಸಿಲ್ಲ.

ಇಂಟರ್ನೆಟ್​ನಲ್ಲಿ ಬ್ರೌಸ್ ಮಾಡಲು, ವಿಡಿಯೋ ವೀಕ್ಷಿಸಲು ಡೌನ್​ಲೋಡ್ ವೇಗ ಬಹಳ ಮುಖ್ಯ. ಹಾಗೆಯೇ, ಇಮೇಜ್, ವಿಡಿಯೋ ಅಥವಾ ಯಾವುದಾದರೂ ದಾಖಲೆಗಳನ್ನು ಇಂಟರ್ನೆಟ್​ನಲ್ಲಿ ಶೇರ್ ಮಾಡಲು ಅಪ್​ಲೋಡ್ ಸ್ಪೀಡ್ ಮುಖ್ಯವಾಗುತ್ತದೆ. ಇದು ಕೆಬಿ (ಕಿಲೋಬೈಟ್), ಎಂಬಿ (ಮೆಗಾಬೈಟ್) ಮಾದರಿಯಲ್ಲಿ ಇರುತ್ತದೆ. ಅತ್ಯಂತ ವೇಗವಾಗಿ ಅಪ್​ಲೋಡ್ ಅಥವಾ ಡೌನ್​ಲೋಡ್ ಆಗುವ ಫೈಲ್ ಹೆಚ್ಚಾಗಿ ಎಂಬಿಪಿಎಸ್ ಮಾದರಿಯಲ್ಲಿ ಆಗುತ್ತದೆ (ಅಂದರೆ ಮೆಗಾಬೈಟ್ ಪರ್ ಸೆಕೆಂಡ್). ಕೆಬಿಪಿಎಸ್ ನಲ್ಲಾದರೆ ಫೈಲ್​ಗಳು ನಿಧಾನಗತಿಯಲ್ಲಿ ಡೌನ್​ಲೋಡ್ ಅಥವಾ ಅಪ್​ಲೋಡ್ ಆಗುತ್ತದೆ.

ಹೀಗಿರುವ ಇಂಟರ್ನೆಟ್ ಸ್ಪೀಡನ್ನು ಪರೀಕ್ಷಿಸಲು ಹಲವು ಆನ್​ಲೈನ್ ಅಪ್ಲಿಕೇಶನ್​ಗಳು ಕೂಡ ಇವೆ. ಅವುಗಳಲ್ಲಿ ಮೈಸ್ಪೀಡ್ ಕೂಡ ಒಂದು. ಟ್ರಾಯ್ ಸಂಸ್ಥೆಯು ಇದೇ ಮೈಸ್ಪೀಡ್ ಆ್ಯಪ್ ಮೂಲಕ ಪ್ರತೀ ತಿಂಗಳು ಭಾರತೀಯ ಟೆಲಿಕಾಂ ಆಪರೇಟರ್​ಗಳ ಇಂಟರ್ನೆಟ್ ವೇಗವನ್ನು ಪರೀಕ್ಷಿಸಿ ವರದಿ ಪ್ರಕಟಿಸುತ್ತದೆ.

How To: ಕೊರೊನಾ ಕಾಲದಲ್ಲಿ ಹೆಚ್ಚುತ್ತಿದೆ ಸೈಬರ್ ದಾಳಿ; ಸುರಕ್ಷಿತ ಆನ್​ಲೈನ್ ಶಾಪಿಂಗ್ ಹೇಗೆ?

WhatsAppನಲ್ಲಿ ನೂತನ ಫೀಚರ್; ಬಳಕೆದಾರರು ಫುಲ್ ಖಷ್

ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು