ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರದ ಬಗ್ಗೆ ಸಚಿವ ಜಮೀರ್ ಸ್ಪಷ್ಟನೆ ಹೀಗಿದೆ
ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ವೇಳೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸಚಿವ ಜಮೀರ್ ಅಹಮ್ಮದ್ ಖಾನ್ಗೆ 2 ಕೋಟಿ ರೂ. ಸಾಲ ಕೊಟ್ಟಿರುವ ಬಗ್ಗೆ ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ವಿಚಾರಣೆ ನಡೆಸಿತ್ತು. ಇನ್ನು ಈ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮನೆ ತೆಗೆದುಕೊಳ್ಳುವಾಗ ರಾಧಿಕಾ ಕುಮಾರಸ್ವಾಮಿ ಅವರು ಎರಡು ಕೋಟಿ ಸಾಲ ಕೊಟ್ಟಿದ್ದಾರೆ.ಈ ಬಗ್ಗೆ ನಾನು ಆದಾಯ ತೆರಿಗೆಯಲ್ಲಿ ತೋರಿಸಿದ್ದೇನೆ. ನನ್ನ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಯಾಗಿತ್ತು. ಈ ಪ್ರಕರಣವನ್ನು ಇಡಿ ಅಧಿಕಾರಿಗಳು ಎಸಿಬಿಗೆ ಶಿಫಾರಸು ಮಾಡಿದ್ದರು. ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಕೇಸ್ ಹ್ಯಾಂಡಲ್ ಮಾಡುತ್ತಿದೆ. ಹೀಗಾಗಿ ರಾಧಿಕಾ ಕುಮಾರಸ್ವಾಮಿ ಹೇಳಿಕೆ ಪಡೆಯಲು ಕರೆದಿದ್ದರು. ಆದಾಯ ತೆರಿಗೆಯಲ್ಲಿ ನಾನೂ ತೋರಿಸಿದ್ದೇನೆ, ಅವರೂ ತೋರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 03): ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ವೇಳೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸಚಿವ ಜಮೀರ್ ಅಹಮ್ಮದ್ ಖಾನ್ಗೆ 2 ಕೋಟಿ ರೂ. ಸಾಲ ಕೊಟ್ಟಿರುವ ಬಗ್ಗೆ ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ವಿಚಾರಣೆ ನಡೆಸಿತ್ತು. ಇನ್ನು ಈ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮನೆ ತೆಗೆದುಕೊಳ್ಳುವಾಗ ರಾಧಿಕಾ ಕುಮಾರಸ್ವಾಮಿ ಅವರು ಎರಡು ಕೋಟಿ ಸಾಲ ಕೊಟ್ಟಿದ್ದಾರೆ.ಈ ಬಗ್ಗೆ ನಾನು ಆದಾಯ ತೆರಿಗೆಯಲ್ಲಿ ತೋರಿಸಿದ್ದೇನೆ. ನನ್ನ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಯಾಗಿತ್ತು. ಈ ಪ್ರಕರಣವನ್ನು ಇಡಿ ಅಧಿಕಾರಿಗಳು ಎಸಿಬಿಗೆ ಶಿಫಾರಸು ಮಾಡಿದ್ದರು. ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಕೇಸ್ ಹ್ಯಾಂಡಲ್ ಮಾಡುತ್ತಿದೆ. ಹೀಗಾಗಿ ರಾಧಿಕಾ ಕುಮಾರಸ್ವಾಮಿ ಹೇಳಿಕೆ ಪಡೆಯಲು ಕರೆದಿದ್ದರು. ಆದಾಯ ತೆರಿಗೆಯಲ್ಲಿ ನಾನೂ ತೋರಿಸಿದ್ದೇನೆ, ಅವರೂ ತೋರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

