ಜಮೀರ್ ಅಹಮ್ಮದ್ ಗೆ ಕೊಟ್ಟ ಸಾಲದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ KGF ಬಾಬು
ತುಂಬಾನೇ ಕಷ್ಟ ಕಂಡಿದ್ದ ಕೆಜಿಎಫ್ ಬಾಬು (KGF Babu) ಈಗ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಅವರ ಬಳಿ ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್ ಬಳಿಸಿದ್ದ ಕಾರುಗಳು ಇವೆ. ಇನ್ನು ಇವರು ಆಗಾಗ ಭಾರೀ ಟ್ರೆಂಡ್ ನಲ್ಲಿ ಇರುತ್ತಾರೆ. ಅದರಂತೆ ಇದೀಗ ಸಚಿವ ಜಮೀರ್ ಅಹ್ಮದ್ ಜೊತೆ ಹಣಕಾಸಿನ ವ್ಯವಹಾರ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದೇ ಹಣಕಾಸಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಕೆಜಿಎಫ್ ಬಾಬು ಅವರನ್ನ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 03): ತುಂಬಾನೇ ಕಷ್ಟ ಕಂಡಿದ್ದ ಕೆಜಿಎಫ್ ಬಾಬು (KGF Babu) ಈಗ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಅವರ ಬಳಿ ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್ ಬಳಿಸಿದ್ದ ಕಾರುಗಳು ಇವೆ. ಇನ್ನು ಇವರು ಆಗಾಗ ಭಾರೀ ಟ್ರೆಂಡ್ ನಲ್ಲಿ ಇರುತ್ತಾರೆ. ಅದರಂತೆ ಇದೀಗ ಸಚಿವ ಜಮೀರ್ ಅಹ್ಮದ್ ಜೊತೆ ಹಣಕಾಸಿನ ವ್ಯವಹಾರ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದೇ ಹಣಕಾಸಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಕೆಜಿಎಫ್ ಬಾಬು ಅವರನ್ನ ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಾಬು, 2013ರಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಮೂರೂವರೆ ಕೋಟಿ ರೂ. ಸಾಲ ಕೊಟ್ಟಿದ್ದೆ. ಹಾಗಾಗಿ ಇವತ್ತು ನನ್ನ ವಿಚಾರಣೆ ಮಾಡಿದ್ದಾರೆ. ಜಮೀರ್ ನ್ಯಾಷನಲ್ ಟ್ರಾವೆಲ್ ಬಸ್ ನಡೆಸುತ್ತಿದ್ದಾಗಿನಿಂದ ಗೊತ್ತು. ಅವರು ಶಿವಾಜಿನಗರದಲ್ಲಿ ಮನೆ ತೆಗೆದುಕೊಳ್ಳುವಾಗ ನನಗೆ ಸಹಾಯ ಮಾಡು ಅಂದಿದ್ರು. ಆಗ ಸಾಲ ಕೊಟ್ಟೆ, ಅದರಿಂದ ತೊಂದರೆ ಅನುಭವಿಸಿದೆ. ಅವರಿಗೋಸ್ಕರ ಏನೇ ತೊಂದರೆ ಆದರೂ ಎದುರಿಸುತ್ತೇನೆ ಎಂದರು.

