AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರು ತಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡುವುದು ಸೂಕ್ತ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಗುರುವಾರ ಸಕಾರಾತ್ಮಕ ನಿರೀಕ್ಷೆ, ಅಪೂರ್ಣ ಪ್ರೇಮ, ಚಿಕಿತ್ಸೆಯಿಂದ ಕಷ್ಟ, ಒತ್ತಡದಿಂದ ಕಾರ್ಯ ನಾಶ, ಸ್ಪರ್ಧಾತ್ಮಕತೆಗೆ ನಿರುತ್ಸಾಹ, ಅಲ್ಪ ಆದಾಯ, ಕಾನೂನು ಸಮರ ಇವು ದಿ‌ನ ವಿಶೇಷ.

Astrology: ಈ ರಾಶಿಯವರು ತಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡುವುದು ಸೂಕ್ತ
Horoscope
ಗಂಗಾಧರ​ ಬ. ಸಾಬೋಜಿ
|

Updated on: Sep 04, 2025 | 5:06 AM

Share

ಬೆಂಗಳೂರು, ಸೆಪ್ಟೆಂಬರ್​ 03, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಗುರುವಾರ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ವಿಷ್ಕಂಭ, ಕರಣ : ಬವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:04 – 15:36, ಗುಳಿಕ ಕಾಲ 09:27 – 10:59, ಯಮಗಂಡ ಕಾಲ 06:22 – 08:54.

ತುಲಾ ರಾಶಿ: ಗೌರವ ಸಿಗಲಿಲ್ಲ ಎನ್ನುವ ಕಾರಣಕ್ಕೆ ಇರುವ ಸ್ಥಳದಿಂದ ದೂರ ಬರುವಿರಿ. ನಿಮಗೆ ಒಳ್ಳೆಯ ಭೂಮಿಯ ಲಾಭವಾಗುವುದು. ಆದರೆ ಅದನ್ನು ಖರೀದಿಸುವ ಶಕ್ತಿ ನಿಮಗೆ ಸಿಗದೇ ಕೈಬಿಡಬೇಕಾದೀತು. ಇಂದು ನಿಮ್ಮ ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ರಕ್ಷಣಾ ವಲಯದಲ್ಲಿ ನಿಮ್ಮ ಕಾರ್ಯ ಪ್ರತಲಿತಕ್ಕೆ ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ಇಂದು ಕುಟುಂಬದ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ಇಷ್ಟವಿಲ್ಲದಿದ್ದರೂ ಸಂಗಾತಿಯ ಮಾತನ್ನು ಅನುಸರಿಸಿ. ಮಕ್ಕಳನ್ನು ವಿದ್ಯಾಭಾಸಕ್ಕೆ ನೀವು ಪ್ರೇರೇಪಿಸುವಿರಿ. ನಿಮ್ಮ ಲಾಭಾಂಶವನ್ನು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ಹಗುರಾಗಿ ಕಾಣಬಹುದು. ಯಾವ ಪ್ರಯೋಜನವೂ ಇರದೇ ನೀವು ಏನನ್ನೂ ಮಾಡಲಾರಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ.

ವೃಶ್ಚಿಕ ರಾಶಿ: ಹಸ್ತಾಕ್ಷರ ದುರುಪಯೋಗವಾಗುವ ಸಾಧ್ಯತೆ ಇದೆ. ಪೋರ್ಜರಿಯನ್ನು ಕುಶಲತೆಯಿಂದ ತಿಳಿಯುವಿರಿ. ಬಹಳ ಒತ್ತಡವಿರುವ ಕಾರಣ ಬರುವ ಕಾರ್ಯವನ್ನು ಬಹಳ ಚಾಚಕ್ಯತೆಯಿಂದ ಮಾಡಬೇಕಾಗುವುದು. ಇಂದು ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ಹಣವಂತರಿಗೆ ವಿದ್ಯಾವಂತರ ನಡುವೆ ಏನೂ ಕೆಲಸವಿಲ್ಲದೇ ಇರಬೇಕಾದೀತು. ನಿಮ್ಮ ಬಳಿ ಬಂದ ಕಾರ್ಯವನ್ನು ನೀವು ಬಿಟ್ಟುಕೊಡಲಾರಿರಿ. ಸಾರ್ವಜನಿಕವಾಗಿ ನೀವು ಹೆಚ್ಚು ಪ್ರಭಾವ ಉಳ್ಳವರಾಗಿದ್ದು ನಿಮಗೆ ಗೌರವವೂ ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡ ಕೊಡುವ ಪ್ರಯತ್ನ ಮಾಡಬಹುದು. ಲೆಕ್ಕಪತ್ರಗಳ ದಾಖಲೆಗಳು ಕಾಣೆಯಾಗಿದ್ದು ನಿಮಗೆ ಆತಂಕ ಉಂಟಾಗಬಹುದು. ಒಂದನ್ನು ಮಾಡಲು ಹೋಗಿ ಮತ್ತೊಂದು ಆದರೆ ಅದಕ್ಕೆ ಹೊಣೆ ಯಾರು? ಹೊಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ. ಮಕ್ಕಳಿಗೆ ಸಮಯವನ್ನು ಕೊಡುವಿರಿ. ಸಣ್ಣ ವಿವಾದಗಳು ಆಗಬಹುದು.‌ ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.

ಧನು ರಾಶಿ: ಪಿರ್ತಾರ್ಜಿತವಾಗಿ ಬಂದ ಭೂಮಿಯನ್ನು ಹಣದಾಸೆಗೆ ನಿವೇಶನ ಮಾಡಿ ಮಾರುವ ಸಲಹೆ ಸಿಗಲಿದೆ. ಮಾನಸಿಕವಾಗಿ ನಿಮಗೆ ಇಂದು ಏರಿಳಿತಗಳು ಹೆಚ್ಚಾಗುವುದು. ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸೃಜನಾತ್ಮಕ ಕಾರ್ಯಗಳಿಗೆ ತಡೆಯಾಗಲಿದೆ. ಯಾವುದನ್ನು ಮಾಡಲು ಬುದ್ಧಿ ಸೂಚಿಸದು. ಉದ್ಯೋಗದಿಂದ ಹೊರಗುಳಿಯುವ ಸಂದರ್ಭ ಎದುರಾಗಬಹುದು. ದೊಡ್ಡ ಕೆಲಸಕ್ಕೆ ಸೇರಲು ಯೋಚಿಸಬಹುದು. ನಿಮ್ಮ ಸರ್ಕಾರಿ‌ ಸಂಬದ್ಧವಾದ ಕೆಲಸವು ಅಂತಿಮ ಘಟ್ಟವನ್ನು ತಲುಪಿದ್ದು ಪೂರ್ಣವಾಗಲು ಸಮಯವನ್ನು ತೆಗೆದುಕೊಳ್ಳಬಹುದು. ಮಾತಿನ‌ ಮೇಲೆ ಯಾರನ್ನೂ ಅಳೆಯಬೇಡಿ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಸ್ತ್ರೀಯರಿಗೆ ಅಪನಿಂದೆಯಾಗುವ ಸಾಧ್ಯತೆ ಇದೆ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು.

ಮಕರ ರಾಶಿ: ಪಡೆದ ಹಣವನ್ನು ಕೊಟ್ಟವರು ಕೇಳುವ ಮೊದಲೇ ಹಿಂದಿರುಗಿಸಿ. ಆಸ್ತಿ ಹಂಚಿಕೆಯ ಬಗ್ಗೆ ನಿಮಗೆ ಸಮಾಧಾನ ಸಿಗದು. ಯಾವ ಸೋಲಿಗೂ ಹತಾಶರಾಗುವುದು ಬೇಡ. ಮನೆಯಲ್ಲಿ ಮಾಡದೇ ಉಳಿದ ಕೆಲಸಕ್ಕೆ ಚಾಲನೆ ಸಿಗಲಿದೆ. ದುಃಖವನ್ನು ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು.‌ ಅಲಂಕಾರಿಕಕ್ಕೆ ಹೆಚ್ಚು ಒತ್ತನ್ನು ನೀಡುವಿರಿ. ನಿಮ್ಮೆದರೇ ಮತ್ತಾರನ್ನಾದರೂ ಪ್ರಶಂಸಿಸಿಯಾರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ಸಂಘಟನೆ ಇದ್ದರೆ ಮಾತ್ರ ನಿಮ್ಮ ಕಾರ್ಯ ಸಿದ್ಧಿಸುವುದು. ತಾಯಿಯ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ಹೆಚ್ಚಿನ‌ ಸಮಯವನ್ನು ಮಾತುಕತೆಯಲ್ಲಿ ಕಳೆಯುವಿರಿ. ಯಾರದೋ ಕಾರ್ಯಕ್ಕೆ ನಿಮಗೆ ಲಾಭವಾಗುವುದು. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳುವಿರಿ.

ಕುಂಭ ರಾಶಿ: ಹಳೆಯ ಹೂಡಿಕೆಯನ್ನು ತೆಗದು ಮತ್ತೊಂದುಕಡೆ ಹಾಕಬಹುದು. ನಿಮ್ಮ ಹಿಡಿತದಿಂದ ಜವಾಬ್ದಾರಿ ತಪ್ಪಿಹೋಗಬಹುದು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಕಾರ್ಯದಲ್ಲಿ ವಿಳಂಬಗತಿಯಾಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಅಪ್ರಾಮಾಣಿಕ ಪ್ರಯತ್ನವು ನಿಮಗೆ ಯಶಸ್ಸು ಕೊಡದು. ಹಾಗೆಂದು ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಹಣವನ್ನು ಹೊಂದಿಸುವ ವಿಚಾರದಲ್ಲಿ ಬಹಳ ತೊಂದರೆಪಡುವಿರಿ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ವಿದೇಶದ ಕಡೆಗೆ ನಿಮ್ಮ ಗಮನ ಅಧಿಕವಾಗಿರುವುದು. ಹಲವು ದಿನದ ಪ್ರಯಾಣಕ್ಕೆ ತಯಾರಿ ಆರಂಭವಾಗಲಿದೆ. ಸಂಗಾತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಬಯಸುವಿರಿ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ.

ಮೀನ ರಾಶಿ: ಒಂದಕ್ಕಿಂತ ಹೆಚ್ಚು ಹೊಣೆಗಾರಿಕೆ ನಿಮಗೆ ಆಗದು. ದೊಡ್ಡ ಉದ್ಯೋಗವನ್ನು ಪಡೆಯುವ ಆಸೆ ಇರುವುದು.‌ ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ನಿಮಗೆ ಹಣಕ್ಕಿಂತ ಪ್ರತಿಷ್ಠೆಯನ್ನು ತೋರುವ ಮಬಲವಿದೆ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಸಂಗಾತಿಯು ನಿಮ್ಮ ಒತ್ಯಡವನ್ನು ಕಡಿಮೆ ಮಾಡಬಹುದು. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯವನ್ನೂ ಮಾಡಬೇಕಾದೀತು. ಒಳ್ಳೆಯದರ ನಿರೀಕ್ಷೆಯಲ್ಲಿ ನೀವು ಇದ್ದು, ದಿನಾಂತ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಮಾಡಲು ಇಷ್ಟಪಡಬಹುದು. ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗಾವಕಾಶಗಳನ್ನು ಹುಡುಕುವಿರಿ. ಬಂಧುಗಳ ಭೇಟಿಯು ಖುಷಿ ಕೊಡಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.