ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
‘ಪ್ರಪಂಚದಲ್ಲಿ ನಡೆಯುವ ಎಲ್ಲವನ್ನೂ ಮಾಧ್ಯಮದವರು ತೋರಿಸುತ್ತಾರೆ. ಒಳ್ಳೆಯದು, ಕೆಟ್ಟದ್ದು ನಿರ್ಧಾರ ಮಾಡುವುದು ಜನರಿಗೆ ಬಿಟ್ಟಿದ್ದು’ ಎಂದು ನಿರ್ದೇಶಕ ಜೋಗಿ ಪ್ರೇಮ್ ಅವರು ಹೇಳಿದ್ದಾರೆ. ದರ್ಶನ್ ಜೈಲಿಗೆ ಹೋಗುವುದಕ್ಕೂ ಮುನ್ನ ಅವರನ್ನು ಪ್ರೇಮ್ ಭೇಟಿ ಮಾಡಿದ್ದರು. ಆ ಕುರಿತು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾರೆ. ಈ ಬಗ್ಗೆ ಪ್ರಸಾರ ಆಗುತ್ತಿರುವ ಸುದ್ದಿಗಳ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಮಾತನಾಡಿದ್ದಾರೆ. ‘ದರ್ಶನ್ ಸುದ್ದಿಯನ್ನು ಮಿಲಿಯನ್ಗಟ್ಟಲೆ ಜನರು ನೋಡುತ್ತಾರೆ. ದರ್ಶನ್ ಅವರಿಗೆ ನೋವಿದೆ. ಕೆಲವರದ್ದು ಸೇಡಿಸ್ಟ್ ಮನಸ್ಥಿತಿ. ದರ್ಶನ್ ಅವರ ನೋವು ನೋಡಿ ಕೆಲವರಿಗೆ ಖುಷಿ ಆಗುತ್ತದೆ. ಅಂಥವರ ಮನಸ್ಥಿತಿಯನ್ನು ದೇವರೇ ಬದಲಾಯಿಸಬೇಕು’ ಎಂದು ಜೋಗಿ ಪ್ರೇಮ್ (Jogi Prem) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

