AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GB WhatsApp: ಜಿಬಿ ವಾಟ್ಸಾಪ್ ಎಂದರೇನು? ಇದನ್ನು ಬಳಸುವುದು ಅಪಾಯಕಾರಿ ಏಕೆ? ಇಲ್ಲಿದೆ ವಿವರ

ಹಲವು ತಂತ್ರಜ್ಞಾನಗಳನ್ನು ಬಳಕೆ ಮಾಡುವಾಗಲೂ ಇಂತಹ ಎಚ್ಚರಿಕೆ ಅಗತ್ಯವಾಗಿ ಬೇಕಿರುತ್ತದೆ. ಜಿಬಿ ವಾಟ್ಸಾಪ್ ಬಳಕೆಯಲ್ಲಿ ಇರಬೇಕಾದ ಎಚ್ಚರಿಕೆಗಳು ಏನು ಎಂದು ಇಲ್ಲಿ ತಿಳಿದುಕೊಳ್ಳೋಣ.

GB WhatsApp: ಜಿಬಿ ವಾಟ್ಸಾಪ್ ಎಂದರೇನು? ಇದನ್ನು ಬಳಸುವುದು ಅಪಾಯಕಾರಿ ಏಕೆ? ಇಲ್ಲಿದೆ ವಿವರ
ವಾಟ್ಸಾಪ್ ಜಿಬಿ- ವಾಟ್ಸಾಪ್
Follow us
TV9 Web
| Updated By: ganapathi bhat

Updated on: Jun 29, 2021 | 7:19 PM

ವಾಟ್ಸಾಪ್ ಎಂಬುದು ಜನಸಾಮಾನ್ಯರ ಅತಿ ಅವಶ್ಯಕ ಅಪ್ಲಿಕೇಷನ್ ಆಗಿದೆ. ಸ್ಮಾರ್ಟ್​ಫೋನ್ ಬಳಕೆ ಮಾಡುವ ಯಾವೊಬ್ಬನೂ ವಾಟ್ಸಾಪ್ ಇಲ್ಲ ಎನ್ನಲಾರ. ಡಿಜಿಟಲ್, ತಂತ್ರಜ್ಞಾನ ಯುಗದ ಅವಿಭಾಜ್ಯ ಅಂಗದಂತೆ ವಾಟ್ಸಾಪ್ ಕಾಣುತ್ತದೆ. ವಾಟ್ಸಾಪ್​ನ ಸಮಾನ ವರ್ಷನ್​ಗಳು ಕೂಡ ಬಿಡುಗಡೆಯಾಗುತ್ತಿರುತ್ತದೆ. ಅದರಲ್ಲಿ ಸದ್ಯ ಸುದ್ದಿಯಲ್ಲಿ ಇರುವುದು ಜಿಬಿ ವಾಟ್ಸಾಪ್ (GB WhatsApp). ಹಲವರು ಇದನ್ನು ವಾಟ್ಸಾಪ್​ನ ಹೊಸ ಅಪ್​ಡೇಟ್ ಎಂದುಕೊಂಡಿದ್ದಾರೆ. ಆದರೆ, ನಿಜವಾಗೂ ಇದು ವಾಟ್ಸಾಪ್​ನ ಅಪ್ಡೇಟ್ ಅಲ್ಲ. ಬದಲಾಗಿ ಸಂಪೂರ್ಣ ಬೇರೆಯದೇ ಅಪ್ಲಿಕೇಷನ್. ಇದನ್ನು ಬಳಕೆ ಮಾಡುವಾಗ ಕೆಲವು ಎಚ್ಚರಿಕೆ ಅನಿವಾರ್ಯ.

ಹಲವು ತಂತ್ರಜ್ಞಾನಗಳನ್ನು ಬಳಕೆ ಮಾಡುವಾಗಲೂ ಇಂತಹ ಎಚ್ಚರಿಕೆ ಅಗತ್ಯವಾಗಿ ಬೇಕಿರುತ್ತದೆ. ಜಿಬಿ ವಾಟ್ಸಾಪ್ ಬಳಕೆಯಲ್ಲಿ ಇರಬೇಕಾದ ಎಚ್ಚರಿಕೆಗಳು ಏನು ಎಂದು ಇಲ್ಲಿ ತಿಳಿದುಕೊಳ್ಳೋಣ.

ಜಿಬಿ ವಾಟ್ಸಾಪ್ ಬಹುತೇಕ ವಾಟ್ಸಾಪ್ ಅಪ್ಲಿಕೇಷನ್​ನಂತೆಯೇ ಬಳಕೆಯಾಗುತ್ತದೆ. ಇದೊಂದು ಫೋರ್ಕ್ಡ್ ವರ್ಷನ್ ಆಗಿದೆ. ಜಿಬಿ ವಾಟ್ಸಾಪ್ ಕೂಡ ಮೆಸೇಜಿಂಗ್ ಸೌಲಭ್ಯ, ವಿಡಿಯೋ ಕಾಲಿಂಗ್, ಆಡಿಯೋ ಕಾಲಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ, ಇಲ್ಲಿ ವಿಶೇಷ ಎಂದರೆ ಜಿಬಿ ವಾಟ್ಸಾಪ್​ನ್ನು ಬಳಕೆದಾರ ತನ್ನ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ರೂಪಿಸಿಕೊಳ್ಳಬಹುದು. ಜೊತೆಗೆ ಮತ್ತೊಂದಿಷ್ಟು ಹೆಚ್ಚುವರಿ ಆಯ್ಕೆಗಳು ಸಿಗಲಿದೆ.

ಜಿಬಿ ವಾಟ್ಸಾಪ್​ನ ಹೆಚ್ಚುವರಿ ಸೌಲಭ್ಯಗಳಿಂದ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ಇದರಿಂದ ತೊಂದರೆಯೂ ಬಹಳಷ್ಟಿದೆ. ಬಳಕೆದಾರ ಜಾಗ್ರತೆಯಿಂದ ಇಲ್ಲವಾದಲ್ಲಿ ಕೆಲವು ಸಮಸ್ಯೆಯೂ ಇಲ್ಲಿ ಎದುರಾಗಬಹುದು. ಜಿಬಿ ವಾಟ್ಸಾಪ್ ಸ್ಮಾರ್ಟ್​ಫೋನ್​ನಲ್ಲಿ ಇರುವ ಬಳಕೆದಾರರ ಅಗತ್ಯ ಮಾಹಿತಿಗಳನ್ನು ಕದಿಯಬಹುದು. ಒರಿಜಿನಲ್ ವಾಟ್ಸಾಪ್ ಅಕೌಂಟ್​ನಿಂದ ಬ್ಲಾಕ್ ಕೂಡ ಆಗಬಹುದು.

ಜಿಬಿ ವಾಟ್ಸಾಪ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿಲ್ಲ. ಇದನ್ನು ಅಧಿಕೃತ ವೆಬ್​ಸೈಟ್ ಮೂಲಕ ಎಪಿಕೆ ಫೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಈ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಆಪಲ್ ಬಳಕೆದಾರರಿಗೆ ಕೂಡ ಲಭ್ಯವಿದೆ. ಒರಿಜಿನಲ್ ವಾಟ್ಸಾಪ್ ನೀಡದ ಕೆಲವು ಆಯ್ಕೆಗಳನ್ನು ಈ ಅಪ್ಲಿಕೇಷನ್ ನೀಡಿದೆ ಎಂಬ ಒಂದೇ ಕಾರಣಕ್ಕೆ ಇದನ್ನು ಬಳಸಿಕೊಳ್ಳಬಹುದಷ್ಟೆ.

ಅಷ್ಟಾಗಿಯೂ ಇಂತಹ ಅಪ್ಲಿಕೇಷನ್ ಬಳಸುವರಾದರೆ ಕೆಲವು ವಿಚಾರಗಳನ್ನು ಗಮನಿಸಬೇಕು. ಜಿಬಿ ವಾಟ್ಸಾಪ್, ವಾಟ್ಸಾಪ್ ಆ್ಯಪ್​ನಂತೆ ಎಂಡ್ ಟು ಎಂಡ್ ಎನ್​ಕ್ರಿಪ್ಟೆಡ್ ಅಲ್ಲ. ಅಂದರೆ ನಿಮ್ಮ ಸಂದೇಶಗಳು ಗೌಪ್ಯವಾಗಿ ಉಳಿದಿರಬೇಕು ಎಂದಿಲ್ಲ. ವಾಟ್ಸಾಪ್ ಎಂಬ ಹೆಸರಿನಲ್ಲಿ ಬಳಕೆಯಾಗಿ ಸಮಸ್ಯೆ ತಂದೊಡ್ಡಬಹುದು. ವೈರಸ್, ಮಾಲ್ವೇರ್ ಅಟ್ಯಾಕ್ ಕೂಡ ಆಗಬಹುದು.

ಇದನ್ನೂ ಓದಿ: WhatsApp Pay: ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಮನೇಶ್ ಮಹಾತ್ಮೆ ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ ಆಗಿ ನೇಮಕ

Fact check: ವಾಟ್ಸಾಪ್ ಚಾಟ್, ಕರೆಗಳ ಮೇಲೆ ಸರ್ಕಾರದ ಕಣ್ಣಿರುವುದು ನಿಜವೇ? ಇಲ್ಲಿದೆ ಸತ್ಯ ಸಂಗತಿ

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್