Whatsapp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನು ಯಾರು ಬ್ಲಾಕ್​ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ?

ಗೌಪ್ಯತೆಗೆ ಒತ್ತು ನೀಡುವ ವಾಟ್ಸ್​ಆ್ಯಪ್ ಬ್ಲಾಕ್​ ಮಾಡಿದ ಸೂಚನೆಯನ್ನು ನೀಡುವುದಿಲ್ಲ. ಹೀಗಾಗಿ ಯಾರಾದರೂ ಬ್ಲಾಕ್​ ಮಾಡಿದ್ದಾರಾ ಎಂದು ತಿಳಿಯುವುದು ಅಷ್ಟು ಸುಲಭವಿಲ್ಲ. ಹೀಗಿದ್ದರೂ ಕೆಲವು ಸುಳಿವುಗಳ ಮೂಲಕ ನಿಮ್ಮ ನಂಬರ್​ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೋ, ಇಲ್ಲವೋ ಎಂದು ತಿಳಿಯುವುದು ಸಾಧ್ಯವಿದೆ.

Whatsapp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನು ಯಾರು ಬ್ಲಾಕ್​ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ?
ವಾಟ್ಸ್​ಆ್ಯಪ್ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on:Jul 12, 2021 | 1:50 PM

ಮೆಸೇಜಿಂಗ್ ಅಪ್ಲಿಕೇಶನ್​ಗಳ ಪೈಕಿ ವಿಶ್ವದಲ್ಲೇ ಮುಂಚೂಣಿ ಸ್ಥಾನದಲ್ಲಿರುವ ವಾಟ್ಸ್​ಆ್ಯಪ್ (Whatsapp) ತನ್ನ ಬಳಕೆದಾರರಿಗಾಗಿ ವಿನೂತನ ಸೌಲಭ್ಯಗಳನ್ನು (Features) ಪರಿಚಯಿಸುತ್ತಲೇ ಇರುತ್ತದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಜಾಗತಿಕ ಸಮುದಾಯವನ್ನು ತನ್ನ ತೆಕ್ಕೆಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡಿರುವ ವಾಟ್ಸ್​ಆ್ಯಪ್ ಆಧುನಿಕ ಸೌಲಭ್ಯಗಳನ್ನು ಪರಿಚಯಿಸುವ ಜತೆಗೆ ತನ್ನ ಬಳಕೆದಾರರ ಗೌಪತ್ಯೆ ಕಾಪಾಡಿಕೊಳ್ಳುವುದಕ್ಕೂ ಹೆಚ್ಚಿನ ಮಹತ್ವ ನೀಡುವುದಾಗಿ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ. ಪ್ರಸ್ತುತ ಫೇಸ್​ಬುಕ್​ ಒಡೆತನದಲ್ಲಿರುವ ಈ ಸಂಸ್ಥೆ ಕೆಲವೇ ದಿನಗಳಲ್ಲಿ ಲಾಗೌಟ್ ಸೌಲಭ್ಯ ಪರಿಚಯಿಸುವುದಾಗಿ ತಿಳಿಸಿದೆ. ವಾಟ್ಸ್​ಆ್ಯಪ್ ಮುಂಚಿನಿಂದಲೂ ನೀಡುತ್ತಾ ಬಂದ ಪ್ರಮುಖ ಸೌಲಭ್ಯಗಳಲ್ಲಿ ಒಂದು ಬ್ಲಾಕ್​ (Block) ಮಾಡುವ ಅವಕಾಶ. ಯಾರಾದರೂ ಅನಗತ್ಯ ಮೆಸೇಜುಗಳನ್ನು ಕಳುಹಿಸುತ್ತಿದ್ದರೆ, ಕಿರಿಕಿರಿ ಮಾಡುತ್ತಿದ್ದರೆ ಅವರ ಮೆಸೇಜು ನಮಗೆ ತಲುಪದಂತೆ ಬ್ಲಾಕ್ ಮಾಡಬಹುದು ಅಥವಾ ಅವರ ನಂಬರ್ ರಿಪೋರ್ಟ್ (Report)​ ಮಾಡಬಹುದು. ಆದರೆ, ಇದರಲ್ಲೂ ಗೌಪ್ಯತೆಗೆ (Privacy) ಒತ್ತು ನೀಡುವ ವಾಟ್ಸ್​ಆ್ಯಪ್ ಬ್ಲಾಕ್​ ಮಾಡಿದ ಸೂಚನೆಯನ್ನು ನೀಡುವುದಿಲ್ಲ. ಹೀಗಾಗಿ ಯಾರಾದರೂ ಬ್ಲಾಕ್​ ಮಾಡಿದ್ದಾರಾ ಎಂದು ತಿಳಿಯುವುದು ಅಷ್ಟು ಸುಲಭವಿಲ್ಲ. ಹೀಗಿದ್ದರೂ ಕೆಲವು ಸುಳಿವುಗಳ ಮೂಲಕ ನಿಮ್ಮ ನಂಬರ್​ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೋ, ಇಲ್ಲವೋ ಎಂದು ತಿಳಿಯುವುದು ಸಾಧ್ಯವಿದೆ.

ಸಾಧಾರಣವಾಗಿ ಯಾರಾದರೂ ನಿಮ್ಮನ್ನು ಬ್ಲಾಕ್​ ಮಾಡಿದ್ದರೆ ನಿಮಗೆ ಅವರ ಫೋಟೋ, ಸ್ಟೇಟಸ್ ಏನೂ ಕಾಣುವುದಿಲ್ಲ. ಹಾಗಂತ ಫೋಟೋ ಕಂಡಿಲ್ಲವೆಂದ ಮಾತ್ರಕ್ಕೆ, ಸ್ಟೇಟಸ್​ ತೋರಿಲ್ಲವೆಂದ ಮಾತ್ರಕ್ಕೆ ಬ್ಲಾಕ್ ಆಗಿದ್ದೀರೆಂದು ಭಾವಿಸಲಾಗುವುದಿಲ್ಲ, ಏಕೆಂದರೆ, ಎಷ್ಟೋ ಜನ ವಾಟ್ಸ್​ಆ್ಯಪ್​ನಲ್ಲಿ ತಮ್ಮ ಫೋಟೋ ಡಿಲೀಟ್ ಮಾಡಿರುತ್ತಾರೆ, ಸ್ಟೇಟಸ್ ಹಾಕುವ ಆಯ್ಕೆಯನ್ನು ಬಳಸುವುದೇ ಇಲ್ಲ.

ಇದಲ್ಲದೇ ಯಾರಿಗಾದರೂ ಮೆಸೇಜ್​ ಕಳುಹಿಸಿದಾಗ ಅವರ ಫೋಟೋ ಕಾಣಿಸದೇ, ಆನ್​ಲೈನ್​ ಅಥವಾ ಲಾಸ್ಟ್​ ಸೀನ್​ ವಿವರ ತೋರಿಸದೇ ಸಿಂಗಲ್​ ಟಿಕ್ ಬಂದರೆ ಆಗಲೂ ಬ್ಲಾಕ್​ ಮಾಡಿದ್ದಾರೆಂದು ಭಾವಿಸಲಾಗುತ್ತದೆ. ವಾಟ್ಸ್​ಆ್ಯಪ್​ನಲ್ಲಿ ಡಬಲ್​ ಟಿಕ್​ ಬಂದರೆ ಮಾತ್ರ ಮೆಸೇಜ್​ ತಲುಪಿದೆ ಎಂದು ಅರ್ಥವಾದ್ದರಿಂದ ಬ್ಲಾಕ್ ಮಾಡಿದ್ದಾಗ ಡಬಲ್ ಟಿಕ್ ಬರುವುದಿಲ್ಲ. ಆದರೆ, ಎಷ್ಟೋ ಸಂದರ್ಭಗಳಲ್ಲಿ ಕೆಲವರು ಅನೇಕ ದಿನ ಆನ್​ಲೈನ್​ಗೆ ಬಾರದೇ ಇರುವುದರಿಂದ ಬ್ಲಾಕ್ ಮಾಡಿದ್ದರೆ ಎಂದು ಅಂದುಕೊಳ್ಳುವುದು ಗೊಂದಲಕ್ಕೆ ಕಾರಣವಾಗಿಬಿಡುತ್ತದೆ.

ಆದರೆ, ಈ ಎಲ್ಲಾ ಸೂಚನೆಗಳ ಜತೆಗೆ ಇನ್ನೊಂದು ವಿಚಾರವನ್ನೂ ಗಮನಿಸಿದರೆ ನಿಮ್ಮ ನಂಬರ್ ಬ್ಲಾಕ್​ ಆಗಿದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗುತ್ತದೆ. ಯಾರು ನಿಮ್ಮನ್ನು ಬ್ಲಾಕ್​ ಮಾಡಿದ್ದಾರೆ ಎಂಬ ಅನುಮಾನವಿರುತ್ತದೋ ಅವರಿಗೆ ವಿಡಿಯೋ ಅಥವಾ ವಾಯ್ಸ್ ಕಾಲ್ ಮಾಡಲು ಪ್ರಯತ್ನಿಸಿದಾಗ ಅದು ಕನೆಕ್ಟ್ ಆಗಿಲ್ಲವೆಂದಾದರೆ ನಿಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದೇ ಅರ್ಥ. ಆದರೆ, ಅದ್ಯ ಈ ಸೌಲಭ್ಯ ಕೆಲವೆಡೆ ಮಾತ್ರ ಲಭ್ಯವಿದೆ. ಹೀಗಾಗಿ ಈ ಹಿಂದಿನ ವರ್ಷನ್​ನಲ್ಲಿ ಇರುವವರು ಬ್ಲಾಕ್​ ಆದ ನಂಬರ್​ಗೆ ಕಾಲ್ ಮಾಡಿದರೂ ಅದು ಮೊದಲಿನಂತೆಯೇ ರಿಂಗ್​ ಆಗುತ್ತದೆ. ಒಂದುವೇಳೆ, ಪ್ರೊಫೈಲ್ ಪಿಕ್ಚರ್ ಕಾಣಲಿಲ್ಲ, ಆನ್​ಲೈನ್ ಅಥವಾ ಲಾಸ್ಟ್ ಸೀನ್ ಕಾಣುವುದಿಲ್ಲ, ಸಿಂಗಲ್ ಟಿಕ್ ಬರುತ್ತದೆ ಜತೆಗೆ, ಕಾಲ್​ ಕೂಡಾ ಕನೆಕ್ಟ್ ಆಗುವುದಿಲ್ಲ ಎಂದಾದಲ್ಲಿ ನಿಮ್ಮ ನಂಬರ್ ಬ್ಲಾಕ್ ಆಗಿದೆ ಎಂದೇ ಅರ್ಥ. ಅಂದಹಾಗೆ, ಇದು ಬ್ಲಾಕ್​ ಆಗಿರುವುದನ್ನು ಕಂಡುಕೊಳ್ಳಲು ಮಾರ್ಗವೇ ವಿನಃ ಯಾವ ಕಾರಣಕ್ಕೂ ವಾಟ್ಸ್​ಆ್ಯಪ್ ಸಂಸ್ಥೆ ಬ್ಲಾಕ್​ ಮಾಡಿದ ಬಗ್ಗೆ ಮಾಹಿತಿಯನ್ನಾಗಲೀ, ನೇರ ಸೂಚನೆಯನ್ನಾಗಲೀ ನೀಡುವುದಿಲ್ಲ.

ಇದನ್ನೂ ಓದಿ: ಭಾರತವು ‘ಪ್ರತಿಯೊಬ್ಬ ನಾಗರಿಕನ ಗೌಪ್ಯತೆ ಹಕ್ಕನ್ನು’ ಗೌರವಿಸುತ್ತದೆ, ಅದನ್ನು ಉಲ್ಲಂಘಿಸುವ ಉದ್ದೇಶವಿಲ್ಲ: ವಾಟ್ಸ್‌ಆ್ಯಪ್ ಸಂಸ್ಥೆಗೆ ಕೇಂದ್ರ ಪ್ರತಿಕ್ರಿಯೆ 

Whatsapp ​ನಲ್ಲಿ ಡಿಲೀಟ್ ಆದ ಮೆಸೆಜ್ ನೋಡುವುದು ಮತ್ತಷ್ಟು ಸುಲಭ: ಈ ಟ್ರಿಕ್ ಬಳಸಿ

Published On - 1:49 pm, Mon, 12 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ