JIO: ಆಗಸ್ಟ್ 15ಕ್ಕೆ ಜಿಯೋದಿಂದ 5G ಸೇವೆ: ಹೊಸ ಯೋಜನೆ ಬೆಲೆ ಎಷ್ಟು?, ಹೊಸ ಸಿಮ್ ಖರೀದಿಸಬೇಕೇ?

| Updated By: Vinay Bhat

Updated on: Aug 12, 2022 | 12:29 PM

Reliance JIO 5G: ಜಿಯೋ 5ಜಿ ಸುಮಾರು 1ಜಿಬಿಪಿಎಸ್​ಗೂ ಅಧಿಕ ವೇಗ ಪಡೆದುಕೊಳ್ಳಲಿದೆ ಎಂದು ಪ್ರಾಯೋಗಿಕ ಹಂತದಲ್ಲಿ ಸಾಬೀತಾಗಿದೆ. ಡೌನ್ ಲೋಡ್ ವೇಗ 420 ಎಂಬಿಪಿಎಸ್ ಹಾಗೂ ಅಪ್ ಲೋಡ್ 412 ಎಂಬಿಪಿಎಸ್ ಇರಲಿದೆ.

JIO: ಆಗಸ್ಟ್ 15ಕ್ಕೆ ಜಿಯೋದಿಂದ 5G ಸೇವೆ: ಹೊಸ ಯೋಜನೆ ಬೆಲೆ ಎಷ್ಟು?, ಹೊಸ ಸಿಮ್ ಖರೀದಿಸಬೇಕೇ?
Jio 5G services
Follow us on

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ (Independence Day) ಶುಭ ಸಂದರ್ಭದಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಲಿದೆ ಎಂದು ರಿಲಯನ್ಸ್ ಮಾಲೀಕತ್ವದ ಟೆಲಿಕಾಂ ದೈತ್ಯ ಜಿಯೋ (JIO) ಘೋಷಣೆ ಮಾಡಿದೆ. ಇತ್ತೀಚೆಗೆ ನಡೆದ 5G ತರಂಗಗುಚ್ಛ ಹರಾಜಿನಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್​ಟೆಲ್ (Airtel), ವೋಡಾಫೋನ್ಐಡಿಯಾ(ವಿ) ಅಲ್ಲದೆ ಅದಾನಿ ಸಮೂಹದ ಟೆಲಿಕಾಂ ಸಂಸ್ಥೆ ಅಂತಿಮವಾಗಿ ತಮ್ಮ ಆಯ್ಕೆಯ ಸ್ಪೆಕ್ಟ್ರಮ್ ಪಡೆದುಕೊಂಡಿವೆ. 88,078 ಕೋಟಿಗೂ ಹೆಚ್ಚು ಖರ್ಚು ಮಾಡಿದ ನಂತರ ಜಿಯೋ ಬ್ಯಾಂಡ್‌ಗಳಾದ್ಯಂತ 24,740 MHz ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ.

ಜಿಯೋ ಪ್ರೀಮಿಯಂ 700 MHzನಲ್ಲಿ ತರಂಗಾತರಗಳನ್ನು ಸ್ವಾಧೀನಪಡಿಸಿಕೊಂಡ ಏಕೈಕ ನಿರ್ವಾಹಕ ಎನಿಸಿದೆ. ಹೆಚ್ಚಿನ ಬೆಲೆಯಿಂದಾಗಿ ಸರ್ಕಾರಿ ಸ್ವಾಮ್ಯದ ಆಕಾಶವಾಣಿಯು ಹಿಂದೆ ಉಳಿಯಿತು. ಆದ್ದರಿಂದ ಈಗ ಜಿಯೋಗೆ ಗರಿಷ್ಠ ನೆಟ್‌ವರ್ಕ್ ಅನ್ನು ನಿಯೋಜಿಸಲಾಗಿದೆ. ಆಗಸ್ಟ್ 15 ರಂದು ಜಿಯೋ 5G ನೆಟ್‌ವರ್ಕ್‌ ಅನ್ನು ಹೊರತಂದರೆ, ಇದು ಬಹುಶಃ ಭಾರತದಾದ್ಯಂತ ಮೆಟ್ರೋ ನಗರಗಳಲ್ಲಿ ಪ್ರಾಯೋಗಿಕ ಪರೀಕ್ಷೆಯಾಗಿರಬಹುದು. ಅಂತಿಮ ನೆಟ್‌ ಸೇವೆ ಈ ವರ್ಷದ ಅಂತ್ಯದ ವೇಳೆಗೆ ಬರಲಿದೆ. ಈ ಪ್ರಕ್ರಿಯೆಯು ಅದಕ್ಕಿಂತ ಹೆಚ್ಚು ಸಮಯ ಪಡೆಯಬಹುದು ಎನ್ನಲಾಗಿದೆ.

ಆರಂಭದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಲಕ್ನೋ, ಹೈದರಾಬಾದ್, ಅಹಮದಾಬಾದ್ ಮತ್ತು ಜಾಮ್‌ನಗರ ಸೇರಿದಂತೆ ಒಂಬತ್ತು ಭಾರತೀಯ ನಗರಗಳಲ್ಲಿ 5G ನೆಟ್‌ವರ್ಕ್‌ ಅನ್ನು ಹೊರತರಲು ಜಿಯೋ ಯೋಜಿಸುತ್ತಿದೆ. ಅಲ್ಲದೆ ಗುರ್‌ ಗಾಂವ್, ನೋಯ್ಡಾ ಮತ್ತು ಇತರ ನಗರ ಸೇರಿದಂತೆ ಜಿಯೋ 1000 ಇತರ ಪ್ರದೇಶಗಳಲ್ಲಿ 5G ಅನ್ನು ಹೊರತರಲು ಮುಂದಾಗಿದೆ.

ಇದನ್ನೂ ಓದಿ
Motorola X30 Pro: ಮಾರುಕಟ್ಟೆಗೆ ಬಂದೇ ಬಿಡ್ತು ಬರೋಬ್ಬರಿ 200MP ಕ್ಯಾಮೆರಾ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?
OnePlus 10 Ace Pro: ವಿದೇಶದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ ಒನ್‌ಪ್ಲಸ್‌ ಏಸ್‌ ಪ್ರೊ ಸ್ಮಾರ್ಟ್​ಫೋನ್: ಏನಿದೆ ವಿಶೇಷತೆ?
HP ಪರಿಚಯಿಸುತ್ತಿದೆ ಆಲ್-ಇನ್-ಒನ್ ಪಿಸಿ: ಏನಿದರ ವಿಶೇಷತೆ?, ಬೆಲೆ ಎಷ್ಟು?
Moto G62 5G: ಭಾರತದಲ್ಲಿ ಮೋಟೋ G62 ಬಿಡುಗಡೆ: ಈ 5G ಫೋನಿನ ಬೆಲೆ ಕೇವಲ …

ಜಿಯೋ 5ಜಿ ಸುಮಾರು 1ಜಿಬಿಪಿಎಸ್​ಗೂ ಅಧಿಕ ವೇಗ ಪಡೆದುಕೊಳ್ಳಲಿದೆ ಎಂದು ಪ್ರಾಯೋಗಿಕ ಹಂತದಲ್ಲಿ ಸಾಬೀತಾಗಿದೆ. ಡೌನ್ ಲೋಡ್ ವೇಗ 420 ಎಂಬಿಪಿಎಸ್ ಹಾಗೂ ಅಪ್ ಲೋಡ್ 412 ಎಂಬಿಪಿಎಸ್ ಇರಲಿದೆ. 5ಜಿ ಬೆಲೆ ಬಗ್ಗೆ ಇನ್ನೂ ಯಾವುದೇ ಟೆಲಿಕಾಂ ಸಂಸ್ಥೆಗಳು ನಿಖರ ಮಾಹಿತಿ ನೀಡಿಲ್ಲ. ಪ್ರೀಮಿಯಂ ದರವನ್ನು ಹೊಂದುವ ನಿರೀಕ್ಷೆಯಿದೆ.

ಪ್ರಸ್ತುತ 4G ಸೇವೆಗೆ ಪಾವತಿಸುತ್ತಿರುವ ಬೆಲೆಗಳಿಗೆ ಹೆಚ್ಚುವರಿಯಾಗಿ ಶೇ.25 ರಷ್ಟು ಹಣವನ್ನು ಪಾವತಿ ಮಾಡಬೇಕಾಗಬಹುದು ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಒಂದು ಜಿಬಿ 4G ಡೇಟಾ ಬೆಲೆ ಹತ್ತು ರೂಪಾಯಿಗಳು ಎಂದುಕೊಂಡರೆ, ಒಂದು ಜಿಬಿ 5G ಡೇಟಾವನ್ನು 14 ರಿಂದ 15 ರೂಪಾಯಿಗಳ ಆಸುಪಾಸಿನಲ್ಲಿ ಒದಗಿಸಬಹುದು.

ಪ್ರಸ್ತುತ, 5G ಸೇವೆಗಳನ್ನು ಅನುಭವಿಸಲು ಬಳಕೆದಾರರಿಗೆ ಹೊಸ ಸಿಮ್ ಅಗತ್ಯವಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ.

Published On - 12:25 pm, Fri, 12 August 22