HP ಪರಿಚಯಿಸುತ್ತಿದೆ ಆಲ್-ಇನ್-ಒನ್ ಪಿಸಿ: ಏನಿದರ ವಿಶೇಷತೆ?, ಬೆಲೆ ಎಷ್ಟು?
ಹೊಸ ಆಲ್-ಇನ್-ಒನ್ PC ಗಳಲ್ಲಿ HP ENVY 34-ಇಂಚು ಮತ್ತು ಪೆವಿಲಿಯನ್ 31.5-ಇಂಚಿನ ಮಾನಿಟರ್ ಹೊಂದಿದ್ದು, ಇಂಟೆಲ್ 11th Gen ಮತ್ತು 12th Gen ನ ಶಕ್ತಿಯುತ ಪ್ರೋಸೆಸರ್‌ಗಳನ್ನು ಒಳಗೊಂಡಿದೆ.
PC ಮತ್ತು TV ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್–ಇನ್–ಒನ್ PC ಗಳ ಹೊಸ ಶ್ರೇಣಿಯನ್ನು ಪ್ರಸಿದ್ಧ ಕಂಪನಿ HP ಪರಿಚಯಿಸಿದೆ. ಮುಖ್ಯವಾಗಿ ಹೈಬ್ರಿಡ್ ಉದ್ಯೋಗಿಗಳಿಗೆ ತಡೆರಹಿತ ಕೆಲಸ ಮತ್ತು ಮನರಂಜನಾ ಅನುಭವವನ್ನು ಇದು ಒದಗಿಸುತ್ತದೆ. ಹೊಸ ಆಲ್–ಇನ್–ಒನ್ PC ಗಳಲ್ಲಿ HP ENVY 34-ಇಂಚು ಮತ್ತು ಪೆವಿಲಿಯನ್ 31.5-ಇಂಚಿನ ಮಾನಿಟರ್ ಹೊಂದಿದ್ದು, ಇಂಟೆಲ್ 11th Gen ಮತ್ತು 12th Gen ನ ಶಕ್ತಿಯುತ ಪ್ರೋಸೆಸರ್‌ಗಳನ್ನು ಒಳಗೊಂಡಿದ್ದು, ಅದ್ಭುತ ಕಾರ್ಯಕ್ಷಮತೆ ಒದಗಿಸುತ್ತಿದೆ. ಕೆಲಸದ ನಡುವೆ ಗೇಮಿಂಗ್‌ಗೆ ಬದಲಾಯಿಸಲು ಅಥವಾ ಟಿವಿ ವೀಕ್ಷಿಸಲೂ ಆಯ್ಕೆಗಳನ್ನು ಹೊಂದಿರುವ ಈ PC ಯು ಹೈಬ್ರಿಡ್ ಪರಿಸರದಲ್ಲಿ ಹೆಚ್ಚಿದ ಉತ್ಪಾದಕತೆಗಾಗಿ AIO ಅನ್ನು ಎರಡನೇ ಪರದೆಯಾಗಿ ಬಳಸಲು ಅನುವು ಮಾಡಿಕೊಡುತ್ತದೆ.
31.5-ಇಂಚಿನ HP ಪೆವಿಲಿಯನ್ ಆಲ್–ಇನ್–ಒನ್ PC ಯನ್ನು ಸುವ್ಯವಸ್ಥಿತ ಕೆಲಸದ ವಾತಾವರಣ ಮತ್ತು ಗೊಂದಲವಿಲ್ಲದ ಮನರಂಜನಾ ಅನುಭವದ ನಡುವೆ ಸುಗಮವಾಗಿ ಟಾಗಲ್ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೇ ಜಾಗದಲ್ಲಿ, ಒಂದೇ ಸಾಧನದ ಮೂಲಕ ಕೆಲಸ, ಸೃಜನಶೀಲತೆ ಮತ್ತು ಮನರಂಜನೆಯ ಬಹು ಉದ್ದೇಶಗಳನ್ನು ಪೂರೈಸುವ ಈ PC ಹೈಬ್ರಿಡ್ ಜೀವನಶೈಲಿಗೆ ಸೂಕ್ತ ಮತ್ತು ಮಿತವ್ಯಯಕಾರಿ ಆಯ್ಕೆಯಾಗಿದೆ. ಸಮರ್ಥನೀಯ ಪ್ರಭಾವದ ಮೇಲೆ HP ನಿರಂತರವಾಗಿ ಗಮನ ಹರಿಸುತ್ತಿದೆ. 31.5-ಇಂಚಿನ HP ಪೆವಿಲಿಯನ್ ಆಲ್–ಇನ್–ಒನ್ ಬಿಡಿಭಾಗಗಳನ್ನು ಸಾಗರದಿಂದ ಸಂಗ್ರಹಿಸಿದ ಮತ್ತು ಗ್ರಾಹಕರು ಬಳಸಿರುವ ಮರುಬಳಕೆ ಪ್ಲಾಸ್ಚಿಕ್‌ನಂತಹ ವಸ್ತುಗಳಿಂದ ಸಮರ್ಥವಾಗಿ ವಿನ್ಯಾಸಗೊಳಿಸಲಾಗಿದೆ.
HP ಇಂಡಿಯಾದ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಅವರ ಪ್ರಕಾರ, “HP ಯು ಸದಾಕಾಲ ಗ್ರಾಹಕರ ಒಳನೋಟಗಳ ಆಧಾರದ ಮೇಲೆ ನವೀನ ಉತ್ಪನ್ನಗಳನ್ನು ರಚಿಸಲು ಶ್ರಮಿಸುತ್ತಿದೆ. ಜೀವನಶೈಲಿಯು ಹೈಬ್ರಿಡ್ ಆಗಿ ವಿಕಸನಗೊಂಡಂತೆ, ನಮ್ಮ ಗ್ರಾಹಕರ ಮನೆಯ ಪರಿಸರದೊಂದಿಗೆ ಉತ್ತಮವಾಗಿ ಬೆರೆಯಲು ಅಗತ್ಯವಿರುವ ಸಾಧನಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ.ನಮ್ಮ ಹೊಸ ಆಲ್–ಇನ್–ಒನ್ ಡೆಸ್ಕ್‌ಟಾಪ್‌ಗಳು ಇಂದಿನ ಆಧುನಿಕ ಸೃಜನಶೀಲರ ಅಗತ್ಯವನ್ನು ಪೂರೈಸುತ್ತವೆ. ಹಲವು ಸಾಧನಗಳ ಅಗತ್ಯವಿಲ್ಲದೆ ಕೆಲಸ, ಮನರಂಜನೆ ಮತ್ತು ಸೃಜನಶೀಲತೆ ಎಲ್ಲವೂ ಒಂದೇ ಸಾಧನದಲ್ಲಿ ಲಭ್ಯವಾಗುವುದು” ಎಂದು ಹೇಳಿದ್ದಾರೆ.
HP ENVY 34-ಇಂಚಿನ ಆಲ್–ಇನ್–ಒನ್
- ನೀಲಿ ಬೆಳಕನ್ನು ಕಡಿತಗೊಳಿಸುವ ಮತ್ತು ಹೊಂದಾಣಿಕೆ ಮಾಡಬಹುದಾದ ಫಿಲ್ಟರ್ ಜತೆಗೆ, TUVಪ್ರಮಾಣೀಕೃತ ಡಿಸ್‌ಪ್ಲೇ.
- 5K ಡಿಸ್‌ಪ್ಲೇ ಜತೆಗೆ 21:9 ಆಕಾರ ಅನುಪಾತವು ಸೃಜನಶೀಲ ಕೆಲಸಗಳಿಗೆ ಸೂಕ್ತವಾಗಿದೆ
- ಬಿಚ್ಚಬಹುದಾದ, ಮ್ಯಾಗ್ನೆಟಿಕ್ ಕ್ಯಾಮರಾ ಉತ್ತಮ ಕೋನಗಳಿಗಾಗಿ ಬೇರೆ ಬೇರೆ ಸ್ಥಾನಗಳಿಗೆ ಬದಲಾಯಿಸುವ ಸುಲಭ ಅವಕಾಶವನ್ನು ಹೊಂದಿದೆ.
- ಸುಧಾರಿತ ಕ್ಯಾಮೆರಾ ಸಂವೇದಕಗಳು ಮತ್ತು HP ವರ್ಧಿತ ಲೈಟಿಂಗ್ ವೀಡಿಯೊ ಚಾಟ್‌ಗಳನ್ನು ಆಹ್ಲಾದಕರಗೊಳಿಸುತ್ತವೆ.
- ಬೆಳಕಿನ ಪರಿಸ್ಥಿತಿ ಬದಲಾಗುತ್ತಿದ್ದರೂ ವೀಕ್ಷಣೆ ಅನುಭವ ಮತ್ತು ಸೌಕರ್ಯವನ್ನು ಸಕ್ರಿಯಗೊಳಿಸಲು ಆಂಟಿ–ರಿಫ್ಲೆಕ್ಷನ್ ಗ್ಲಾಸ್ ಹೊಂದಿದೆ.
- ಅತ್ಯಂತ ತೆಳುವಾದ 3-ಬದಿಯ ಮೈಕ್ರೋ ಎಡ್ಜ್ ಬೆಜೆಲ್ ಡಿಸ್‌ಪ್ಲೇ ಪರಿಣಾಮಕಾರಿ ವಿನ್ಯಾಸದೊಂದಿಗೆ ಸುಂದರವಾಗಿದೆ.
- 11th Gen 8-Core i9 ಪ್ರೊಸೆಸರ್ ಮತ್ತು NVIDIA® GeForce RTX 3060 ಬಳಕೆದಾರರಿಗೆ ಸೃಜನಶೀಲ ಅಗತ್ಯಗಳನ್ನು ನಿಭಾಯಿಸುವ ಶಕ್ತಿಯನ್ನು ನೀಡುತ್ತದೆ.
- 16 MP ಕ್ಯಾಮೆರಾ ಬಿನ್ನಿಂಗ್ ತಂತ್ರಜ್ಞಾನ ಮತ್ತು ದೊಡ್ಡ ಸಂವೇದಕದ ಜೊತೆಗೆ ಉತ್ತಮ ಕಾಂಟ್ರಾಸ್ಟ್ ಮತ್ತು ರೆಸಲ್ಯೂಶನ್ ಹೊಂದಿದೆ.
- HP ಕ್ವಿಕ್ ಡ್ರಾಪ್, ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್, HP ವರ್ಧಿತ ಲೈಟಿಂಗ್ ಮುಂತಾದವು ಸೃಜನಾತ್ಮಕ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
- ತಳಭಾಗದಲ್ಲಿ ಅಳವಡಿಸಲಾದ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಸ ಮಟ್ಟದ ಅನುಕೂಲವನ್ನು ಅನುಭವಕ್ಕೆ ತರುತ್ತದೆ.
HP ಪೆವಿಲಿಯನ್ 31.5-ಇಂಚಿನ ಆಲ್–ಇನ್–ಒನ್
- 31.5-ಇಂಚಿನ UHD ಡಿಸ್‌ಪ್ಲೇ, HDR 400, DCI-P3 98% ಮತ್ತು QHD/sRGB 99% ಹೊಂದಿರುವ ಡಿಸ್‌ಪ್ಲೇ ಇದರ ವೈಶಿಷ್ಟ್ಯವೆನಿಸಿದೆ.
- HP Eyesafe® ಪ್ರಮಾಣೀಕೃತವಿದ್ದು; ಫ್ಲಿಕರ್–ಫ್ರೀ TUV ಪ್ರಮಾಣೀಕೃತ; ಆಂಟಿ–ಗ್ಲೇರ್ ಪ್ಯಾನಲ್ ಹೊಂದಿದೆ.
- ENERGY STAR® ಪ್ರಮಾಣೀಕೃತವಾಗಿದೆ ಮತ್ತು EPEAT® ಸಿಲ್ವರ್‌ನಲ್ಲಿ ನೋಂಯಿಸಲಾಗಿದೆ.
- ತೆಳುವಾದ ವಿನ್ಯಾಸವು ಕಡಿಮೆ ಜಾಗದಲ್ಲಿ ಹೊಂದಿಕೊಳ್ಳುತ್ತದೆ. ವೈರ್‌ಲೆಸ್ ಮೌಸ್, ಕೀಬೋರ್ಡ್ ಮತ್ತು ಚಾರ್ಜಿಂಗ್ ಸೌಲಭ್ಯಗಳು ವೈರ್‌ಗಳ ಅಗತ್ಯ ಇಲ್ಲದಂತೆ ಮಾಡುತ್ತದೆ.
- 12th Gen Intel i5 ಮತ್ತು i7 ಪ್ರೊಸೆಸರ್‌ಗಳಿಂದ ಚಾಲಿತವಾಗಿದೆ.
- ಹಲವು HDMI ಪೋರ್ಟ್‌ಗಳ ಕಾರಣದಿಂದ ಎಲ್ಲ ಮನರಂಜನಾ ಅಗತ್ಯಗಳನ್ನು ಒಗ್ಗೂಡಿಸಬಹುದು ಮತ್ತು B&O ಮೂಲಕ ಆಡಿಯೋದಲ್ಲಿ ಹೆಚ್ಚು ತಲ್ಲೀನರಾಗಿಬಹುದು.
- ರಿಮೋಟ್‌ನ ಯುನಿವರ್ಸಲ್ ರಿಮೋಟ್ ಸ್ವಿಚ್ ಮೇಲೆ ಒಂದು ಸಲ ಕ್ಲಿಕ್ ಮಾಡಿದರೆ ಸಾಕು, ಕೆಲಸವನ್ನು ಪ್ಲೇ ಆಗಿ ಪರಿವರ್ತಿಸುವುದು.
ಬೆಲೆ ಮತ್ತು ಲಭ್ಯತೆ:
HP ENVY 34-ಇಂಚಿನ ಆಲ್–ಇನ್–ಒನ್ ಡೆಸ್ಕ್‌ಟಾಪ್ PC ಗಳು ಸೊಗಸಾದ ಟರ್ಬೊ ಸಿಲ್ವರ್ ಬಣ್ಣದ ರೂಪಾಂತರದಲ್ಲಿ ರೂ. 1,75,999/- ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯ. ಇನ್ನು HP ಪೆವಿಲಿಯನ್ 31.5-ಇಂಚಿನ ಆಲ್–ಇನ್–ಒನ್ ಡೆಸ್ಕ್‌ಟಾಪ್ PC ಗಳು ರೂ. 99,999/- ರ ಆರಂಭಿಕ ಬೆಲೆಯಲ್ಲಿ ಬೆರಗುಗೊಳಿಸುವ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಾಗಲಿದೆ.