ಟೆಲಿಕಾಂ ಕಂಪೆನಿಗಳ ರಿಜಾರ್ಜ್ ದರಗಳು ದುಬಾರಿಯಾಗಿವೆ. ಈ ಹಿಂದಿನ ರಿಜಾರ್ಜ್ ಪ್ಲ್ಯಾನ್ಗಿಂತ ಈಗ 80 ರಿಂದ ನೂರು ಹೆಚ್ಚು ಪಾವತಿಸಬೇಕಾಗಿದೆ. ಹೀಗಾಗಿ ಗ್ರಾಹಕರು ಅತ್ಯುತ್ತಮ ಯೋಜನೆಗಳ ರಿಚಾರ್ಜ್ನ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಜಿಯೋ ಕಂಪೆನಿಯು 3 ತಿಂಗಳ (84 ದಿನಗಳು) ವಾಲಿಟಿಡಿ ಹೊಂದಿರುವ ಮೂರು ಪ್ಲ್ಯಾನ್ಗಳನ್ನು ಗ್ರಾಹಕರ ಮುಂದಿಟ್ಟಿದೆ.
ಈ ರಿಚಾರ್ಜ್ ಪ್ಲ್ಯಾನ್ಗಳಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಹಾಗೂ ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ಜಿಯೋ ಪ್ರಸ್ತುತ ಪಡಿಸಿರುವ 84 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆಯಲ್ಲಿ ಯಾವುದು ಉತ್ತಮ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಅದರಂತೆ ಪ್ಲ್ಯಾನ್ಗಳ ಸಂಪೂರ್ಣ ವಿವರ ಈ ಕೆಳಗಿನಂತಿವೆ.
1,199 ರೂ. ಪ್ಲ್ಯಾನ್: ಜಿಯೋ ಬಳಕೆದಾರರಿಗೆ ಈ ರಿಚಾರ್ಜ್ ಪ್ಲ್ಯಾನ್ ತುಸು ದುಬಾರಿ ಎನಿಸಬಹುದು. ಇದಾಗ್ಯೂ ಈ ಯೋಜನೆಯಲ್ಲಿ ಜಿಯೋ ಪ್ರತಿ ದಿನ 3GB ಡೇಟಾ ನೀಡುತ್ತಿದೆ. ಅದರಂತೆ ಒಟ್ಟು 252GB ಇಂಟರ್ನೆಟ್ ಡೇಟಾ ಜೊತೆ ಅನಿಯಮಿತ ಕರೆ, 100 ಉಚಿತ SMS ಹಾಗೂ ಎಲ್ಲಾ Jio ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ. 1199 ರೂ. ರೀಚಾರ್ಜ್ ಪ್ಲ್ಯಾನ್ನ ವಾಲಿಡಿಟಿ 84 ದಿನಗಳು.
719 ರೂ. ಪ್ಲ್ಯಾನ್: 84 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 168GB ಡೇಟಾವನ್ನು ನೀಡಲಾಗುತ್ತಿದೆ. ಅಂದರೆ ಪ್ರತಿದಿನ 2GB ಇಂಟರ್ನೆಟ್ ಡೇಟಾ ಬಳಸಬಹುದು. ಹಾಗೆಯೇ ಈ ಕೊಡುಗೆಯಲ್ಲಿ Jio-to-Jio ಅನಿಯಮಿತ ಕರೆ ಸೌಲಭ್ಯವಿದೆ. ಇನ್ನು ಪ್ರತಿದಿನ 100 ಉಚಿತ SMS ಹಾಗೂ Jio ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆ ಕೂಡ ಸಿಗಲಿದೆ.
666 ರೂ. ಪ್ಲ್ಯಾನ್: ಜಿಯೋ ಪ್ರಸ್ತುತ ಪಡಿಸಿರುವ 666 ರೂ. ಪ್ಲ್ಯಾನ್ನ ವಾಲಿಡಿಟಿ 84 ದಿನಗಳು. ಪ್ರತಿ ದಿನ 1.5GB ಕೂಡ ಈ ಯೋಜನೆಯ ಮೂಲಕ ಸಿಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ಜಿಯೋ-ಟು-ಜಿಯೋ ಕರೆ ಸೌಲಭ್ಯ ನೀಡಲಾಗುತ್ತಿದೆ. ಇದರೊಂದಿಗೆ ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ನೀಡುತ್ತಿದೆ.