iPhone 14 Pro Max | ಆ್ಯಪಲ್ ಹೊಸ ಐಫೋನ್​​ 14 ಪ್ರೊ ಮ್ಯಾಕ್ಸ್ ತಯಾರಿಸಲು ಎಷ್ಟು ವೆಚ್ಚವಾಗುತ್ತದೆ?

|

Updated on: Feb 14, 2023 | 7:08 PM

ಆ್ಯಪಲ್, ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಐಫೋನ್ 14 ಸರಣಿಯನ್ನು ಭಾರತ ಮತ್ತು ಜಾಗತಿಕ ಟೆಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

iPhone 14 Pro Max | ಆ್ಯಪಲ್ ಹೊಸ ಐಫೋನ್​​ 14 ಪ್ರೊ ಮ್ಯಾಕ್ಸ್ ತಯಾರಿಸಲು ಎಷ್ಟು ವೆಚ್ಚವಾಗುತ್ತದೆ?
ಆ್ಯಪಲ್ ಹೊಸ ಐಫೋನ್​​ 14 ಪ್ರೊ ಮ್ಯಾಕ್ಸ್ ತಯಾರಿಸಲು ಎಷ್ಟು ವೆಚ್ಚವಾಗುತ್ತದೆ?
Follow us on

ಆ್ಯಪಲ್ ಐಫೋನ್ (Apple iPhone) ಎಂದರೆ ಹಲವರಿಗೆ ಅದೇನೋ ಕ್ರೇಜ್.. ಇನ್ನು ದುಬಾರಿ ಬೆಲೆಯ ಐಫೋನ್ ಬೇಡ ಎನ್ನುವವರು ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಖರೀದಿಸಿ, ಆ್ಯಪಲ್​ಗಿಂತ ಏನೂ ಕಡಿಮೆಯಿಲ್ಲ ಎನ್ನುತ್ತಾರೆ. ಜತೆಗೆ, ಆ್ಯಪಲ್ ಐಫೋನ್ ಬೆಲೆಯನ್ನು ಗಮನಿಸಿದರೆ, ಕೇವಲ ಒಂದು ಸ್ಮಾರ್ಟ್​ಫೋನ್​ಗೆ ಅಷ್ಟೊಂದು ವ್ಯಯಿಸಬೇಕೇ ಎಂದು ಕೇಳುವವರು ಇರುತ್ತಾರೆ. ಆದರೆ, ಐಫೋನ್ ತಯಾರಿಕೆಯ ವೆಚ್ಚ ಗಮನಿಸಿದರೆ, ಅದರ ಮಾರಾಟ ಬೆಲೆ ದುಬಾರಿ ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿ, ಕೌಂಟರ್​ಪಾಯಿಂಟ್ ಬಿಡುಗಡೆ ಮಾಡಿರುವ ವರದಿಯಲ್ಲಿ, ಹೊಸ ಐಫೋನ್ 14 ಪ್ರೊ ಮ್ಯಾಕ್ಸ್ (iPhone 14 Pro Max) ಆರಂಭಿಕ ಆವೃತ್ತಿ ತಯಾರಿಕೆಗೆ $464 (ಅಂದಾಜು ₹38,400) ವೆಚ್ಚವಾಗುತ್ತದೆ ಎಂದು ಹೇಳಿದೆ.

ಈ ಮೊತ್ತ, 2021ರಲ್ಲಿ ಬಿಡುಗಡೆಯಾಗಿದ್ದ ಐಫೋನ್ 13 ಪ್ರೊ ಮ್ಯಾಕ್ಸ್ ಮಾದರಿಗೆ ಹೋಲಿಸಿದರೆ, ಸ್ವಲ್ಪ ಹೆಚ್ಚು ಎಂದು ವರದಿ ತಿಳಿಸಿದೆ. ಹೊಸ ಮಾದರಿಯ ಐಫೋನ್ 14 ಪ್ರೊ ಮ್ಯಾಕ್ಸ್​ನಲ್ಲಿ ಆಲ್ವೇಸ್ ಆನ್ ಡಿಸ್​ಪ್ಲೇ, 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ನೂತನ ಪ್ರೊಸೆಸರ್ ಚಿಪ್ ಅಳವಡಿಸಲಾಗಿದೆ. ಹೀಗಾಗಿ, ತಯಾರಿಕೆ ವೆಚ್ಚ ಸ್ವಲ್ಪ ಹೆಚ್ಚಾಗಿದೆ ಎಂದು ಕೌಂಟರ್​ಪಾಯಿಂಟ್ ತಿಳಿಸಿದೆ.

ಐಫೋನ್ 14 ಪ್ರೊ ಮ್ಯಾಕ್ಸ್ 128 ಜಿಬಿ ಮಾದರಿಯ ತಯಾರಿಕೆಗೆ ಬಳಸಿರುವ ಎಲ್ಲ ಉಪಕರಣಗಳ ಒಟ್ಟು ವೆಚ್ಚವನ್ನು ಗಮನಿಸಿದರೆ, ಅದು $464 (ಅಂದಾಜು ₹38,400) ಆಗುತ್ತದೆ. ಈ ದರವು, ಐಫೋನ್ 13 ಪ್ರೊ ಮ್ಯಾಕ್ಸ್ 128 ಜಿಬಿ ಆವೃತ್ತಿಗೆ ಹೋಲಿಸಿದರೆ, $447.44 (ಅಂದಾಜು ₹37,000) ಎಂದು ಕೌಂಟರ್​ಪಾಯಿಂಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಇದು ಉತ್ಪಾದನಾ ವೆಚ್ಚ ಮಾತ್ರವಾಗಿದೆ. ಅದರ ಬಳಿಕ, ಮಾರುಕಟ್ಟೆ, ಜಾಹೀರಾತು, ತೆರಿಗೆ ಮತ್ತು ಸಾಗಾಟ ವೆಚ್ಚವನ್ನು ಸೇರಿಸಿದರೆ, ಮಾರಾಟ ದರ ದುಬಾರಿಯಾಗುತ್ತದೆ ಎಂದು ವರದಿ ತಿಳಿಸಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಆ್ಯಪಲ್ ಐಫೋನ್ 14 ಪ್ರೊ ಮ್ಯಾಕ್ಸ್ 128 ಜಿಬಿ ಮಾದರಿಗೆ $1,099 (ಅಂದಾಜು ₹90,900) ಇದ್ದರೆ, ಭಾರತದಲ್ಲಿ ₹1,39,900 ಇದೆ.