Sign In

By signing in or creating an account, you agree with Associated Broadcasting Company's Terms & Conditions and Privacy Policy.

Lava Blaze 2: ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ನೀಡುತ್ತಿದೆ ಹೊಸ ಲಾವಾ ಫೋನ್

Lava Blaze 2: ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ನೀಡುತ್ತಿದೆ ಹೊಸ ಲಾವಾ ಫೋನ್

ಕಿರಣ್​ ಐಜಿ
|

Updated on: Apr 13, 2023 | 9:09 AM

ಭಾರತದಲ್ಲಿ ಅತ್ಯಂತ ಸ್ಪರ್ಧಾತ್ಮಕ ದರದ ಸ್ಮಾರ್ಟ್​ಫೋನ್ ಮಾರುಕಟ್ಟೆ ಇದ್ದು, ಬಜೆಟ್ ದರದ ಫೋನ್ ಮಾರುಕಟ್ಟೆ ಅತ್ಯಂತ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಲಾವಾ ಕಂಪನಿ, ಈಗಾಗಲೇ ಬಜೆಟ್ ದರಕ್ಕೆ ಉತ್ತಮ ಫೋನ್ ಅನ್ನು ನೀಡುತ್ತಿದೆ.

ಬಜೆಟ್ ದರಕ್ಕೆ ಬೆಸ್ಟ್ ಫೋನ್ ನೀಡುವುದು ಎಂದರೆ ಸವಾಲೇ ಸರಿ. ಕಡಿಮೆ ದರಕ್ಕೆ ಹೆಚ್ಚಿನ ಫೀಚರ್ಸ್ ಬಯಸುವ ಜನರಿಗೆ, ಇಷ್ಟವಾಗುವ ರೀತಿಯಲ್ಲಿ ವಿನ್ಯಾಸವನ್ನು ರೂಪಿಸಬೇಕಾಗುತ್ತದೆ. ಭಾರತದಲ್ಲಿ ಅತ್ಯಂತ ಸ್ಪರ್ಧಾತ್ಮಕ ದರದ ಸ್ಮಾರ್ಟ್​ಫೋನ್ ಮಾರುಕಟ್ಟೆ ಇದ್ದು, ಬಜೆಟ್ ದರದ ಫೋನ್ ಮಾರುಕಟ್ಟೆ ಅತ್ಯಂತ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಲಾವಾ ಕಂಪನಿ, ಈಗಾಗಲೇ ಬಜೆಟ್ ದರಕ್ಕೆ ಉತ್ತಮ ಫೋನ್ ಅನ್ನು ನೀಡುತ್ತಿದೆ. ಈ ಬಾರಿ ಲಾವಾ, ಬ್ಲೇಜ್ ಸರಣಿಯಲ್ಲಿ ಹೊಸ ಲಾವಾ ಬ್ಲೇಜ್ 2 ಫೋನ್ ಬಿಡುಗಡೆ ಮಾಡಿದೆ. ನೂತನ ಫೋನ್ ವೈಶಿಷ್ಟ್ಯಗಳು, ದರ ವಿವರ ಇಲ್ಲಿದೆ. ಲಾವಾ ಬ್ಲೇಜ್ 2 ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 6.5 ಇಂಚಿನ IPS LCD ಡಿಸ್​ಪ್ಲೇ ಹೊಂದಿದೆ. ಲಾವಾ ಬ್ಲೇಜ್ 2 ಫೋನ್ 5,000mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲವಿದ್ದು, 128GB ಸ್ಟೋರೇಜ್ ಮತ್ತು 6GB RAM ಆವೃತ್ತಿಯಲ್ಲಿ ಲಭ್ಯವಿದೆ. ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಆರೆಂಜ್ ಬಣ್ಣದಲ್ಲಿ ದೊರೆಯಲಿದ್ದು, 128GB ಸ್ಟೋರೇಜ್ ಮತ್ತು 6GB RAM ಆವೃತ್ತಿಗೆ ₹8,999 ದರವಿದೆ. ಏಪ್ರಿಲ್ 18ರಿಂದ ಅಮೆಜಾನ್ ಮತ್ತು ಇತರ ರಿಟೇಲ್ ಸ್ಟೋರ್ ಮೂಲಕ ಲಭ್ಯವಿದ್ದು, ಒಕ್ಟಾ ಕೋರ್ Unisoc T616 ಪ್ರೊಸೆಸರ್ ಸಹಿತ ಬರುತ್ತಿದೆ. ಲಾವಾ ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಕ್ಯಾಮೆರಾ+ 8 MP ಸೆಲ್ಫಿ ಕ್ಯಾಮೆರಾ ಇದೆ.