ಫೇಸ್​ಬುಕ್ ಬಳಕೆದಾರರೇ ಎಚ್ಚರ: ನಿಮ್ಮ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ ಹ್ಯಾಕರುಗಳು

| Updated By: ಝಾಹಿರ್ ಯೂಸುಫ್

Updated on: Aug 11, 2021 | 7:09 PM

ಗೂಗಲ್ ಪ್ಲೇ ಸ್ಟೋರ್ ಮೂಲಕ ಫ್ಲೈಟ್ರಾಪ್ ಮಾಲ್ವೇರ್ ಅನ್ನು ವರ್ಗಾಯಿಸುತ್ತಿದ್ದ ಮೂರು ಅಪಾಯಕಾರಿ ಆ್ಯಪ್ ಗಳ ಬಗ್ಗೆ ಜಿಂಪೇರಿಯಮ್ ಸಂಶೋಧಕರು ಗೂಗಲ್​ಗೆ ಎಚ್ಚರಿಕೆ ನೀಡಿದೆ.

ಫೇಸ್​ಬುಕ್ ಬಳಕೆದಾರರೇ ಎಚ್ಚರ: ನಿಮ್ಮ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ ಹ್ಯಾಕರುಗಳು
Facebook Hackers
Follow us on

ಹ್ಯಾಕರುಗಳು ಸ್ಮಾರ್ಟ್​ಫೋನ್ ಹಾಗೂ ಕಂಪ್ಯೂಟರ್ ಬಳಕೆದಾರರ ಮಾಹಿತಿಗಳ ಮೇಲೆ ಕನ್ನ ಹಾಕಲು ಹೊಸ ತಂತ್ರಗಳತ್ತ ಮುಖ ಮಾಡುತ್ತಿದ್ದಾರೆ. ಇತ್ತ ಬಳಕೆದಾರರ ನಿರ್ಲಕ್ಷ್ಯ ಕೂಡ ಹ್ಯಾಕರುಗಳಿಗೆ ವರದಾನವಾಗುತ್ತಿದೆ. ಹೀಗೆ ನಾನಾ ರೀತಿಯಲ್ಲಿ ಬಳಕೆದಾರರ ಮೇಲೆ ಕಣ್ಣಿಡುವ ಹ್ಯಾಕರುಗಳ ಹೊಸ ಕುತಂತ್ರವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅ್ಯಂಡ್ರಾಯ್ಡ್ ಟ್ರೋಜನ್ ಫ್ಲೈಟ್ರಾಪ್ ಹೆಸರಿನ ಹೊಸ ಮಾಲ್ವೇರ್​ನ್ನು ಸಂಶೋಧಕರು ಗುರುತಿಸಿದ್ದು, ಈ ವೈರಸ್ ಮೂಲಕ 140 ಕ್ಕೂ ಹೆಚ್ಚು ದೇಶಗಳ ಫೇಸ್‌ಬುಕ್ ಬಳಕೆದಾರರ ಖಾತೆಗಳ ಮೇಲೆ ಹ್ಯಾಕರುಗಳು ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜಿಂಪೇರಿಯಮ್ zLabs (Zimperium zLabs) ಮೊಬೈಲ್ ಥ್ರೆಟ್ ರಿಸರ್ಚ್ ತಂಡದ ಪ್ರಕಾರ, ಮಾರ್ಚ್ 2021 ರಿಂದ ಗೂಗಲ್ ಪ್ಲೇ ಸ್ಟೋರ್, ಥರ್ಡ್-ಪಾರ್ಟಿ ಆ್ಯಪ್ ಸ್ಟೋರ್ಸ್ ಮತ್ತು ಸೈಡ್‌ಲೋಡ್ ಮಾಡಿದ ಆ್ಯಪ್‌ಗಳ ಮೂಲಕ ದುರುದ್ದೇಶಪೂರಿತ ಮಾಲ್ವೇರ್ ವೈರಸ್​ಗಳನ್ನು ಹರಡಲಾಗಿದೆ. ಈ ಮಾಲ್ವೇರ್ ಬಹಳ ಸರಳವಾದ ಟ್ರಿಕ್ ನಲ್ಲಿ ಕೆಲಸ ಮಾಡುತ್ತದೆ. ಹ್ಯಾಕರುಗಳು ಮೊದಲು ಬಳಕೆದಾರರು ಡೌನ್​​ಲೋಡ್ ಮಾಡಿದ ಆ್ಯಪ್​ಗಳ ಮೂಲಕವೇ ಫೇಸ್‌ಬುಕ್ ಲಾಗಿನ್ ಆಗಲು ಪ್ರೇರೇಪಿಸುತ್ತಾರೆ. ಆ ಬಳಿಕ ಮಾಲ್ವೇರ್ ಮೂಲಕ ಹಿಡಿತ ಸಾಧಿಸುವ ಹ್ಯಾಕರುಗಳು ಬಳಕೆದಾರರ ಡೇಟಾ ಮೇಲೆ ಕಣ್ಣಿಡುತ್ತಾರೆ.

ಸಂಶೋಧಕರ ಪ್ರಕಾರ, ಫ್ಲೈಟ್ರಾಪ್ ಹ್ಯಾಕರುಗಳು ನೆಟ್‌ಫ್ಲಿಕ್ಸ್ ಕೂಪನ್ ಕೋಡ್, ಗೂಗಲ್ ಆಡ್‌ವರ್ಲ್ಡ್ ಕೂಪನ್ ಕೋಡ್ ಮತ್ತು ಅತ್ಯುತ್ತಮ ಫುಟ್‌ಬಾಲ್ ತಂಡದ ಮತದಾನ ಹೀಗೆ ವಿವಿಧ ರೀತಿಯ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುತ್ತದೆ. ಈ ಆ್ಯಪ್ ಡೌನ್‌ಲೋಡ್ ಮಾಡಿದ ಬಳಿಕ ಬಳಕೆದಾರರಿಗೆ ಹಲವು ರೀತಿಯ ಪ್ರಶ್ನೆಗಳನ್ನು ಕೇಳುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ, ಬಳಕೆದಾರರನ್ನು ಫೇಸ್​ಬುಕ್​ಗೆ ಲಾಗಿನ್ ಆಗಲು ನಿರ್ದೇಶಿಸುತ್ತದೆ. ಇಂತಹ ಆ್ಯಪ್​ಗಳನ್ನು ಬಳಸುವ ಬಳಕೆದಾರರು ಕೂಡ ಲಾಗಿನ್ ಆಗುತ್ತಾರೆ.

ಇದೇ ವೇಳೆ ಕಾರ್ಯಪ್ರವೃತರಾಗುವ ಹ್ಯಾಕರುಗಳು, ಬಳಕೆದಾರರ ಫೇಸ್​ಬುಕ್ ಐಡಿ, ಸ್ಥಳಗಳು, ಇಮೇಲ್ ವಿಳಾಸಗಳು ಮತ್ತು ಐಪಿ ವಿಳಾಸಗಳಿಗೆ ಪ್ರವೇಶ ಪಡೆಯಲು ಮಾಲ್ವೇರ್ ಜಾವಾಸ್ಕ್ರಿಪ್ಟ್ ಅನ್ನು ಬಳಸುತ್ತದೆ. ಹೀಗೆ ಬಳಕೆದಾರರ ಮಾಹಿತಿಯನ್ನು ಕದ್ದು ನಂತರ ಫ್ಲೈಟ್ರಾಪ್ ನ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್ ಗಳಿಗೆ ವರ್ಗಾಯಿಸಲಾಗುತ್ತದೆ.

ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಮೂಲಕ ಫ್ಲೈಟ್ರಾಪ್ ಮಾಲ್ವೇರ್ ಅನ್ನು ವರ್ಗಾಯಿಸುತ್ತಿದ್ದ ಮೂರು ಅಪಾಯಕಾರಿ ಆ್ಯಪ್ ಗಳ ಬಗ್ಗೆ ಜಿಂಪೇರಿಯಮ್ ಸಂಶೋಧಕರು ಗೂಗಲ್​ಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಗೂಗಲ್ ಸಂಶೋಧಕರು ದುರುದ್ದೇಶಪೂರಿತ ಆ್ಯಪ್‌ಗಳನ್ನು ಪರಿಶೀಲಿಸಿ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಇದಾಗ್ಯೂ ಹಲವರ ಮೊಬೈಲ್​ನಲ್ಲಿ ಇಂತಹ ಆ್ಯಪ್​ಗಳಿದ್ದು, ಹಾಗೆಯೇ ಇಂತಹ ಆ್ಯಪ್​ಗಳ ಲಿಂಕ್​ಗಳನ್ನು ಅನೇಕರು ವಾಟ್ಸ್​ಆ್ಯಪ್​ ಸೇರಿದಂತೆ ಹಲವು ಮೆಸೇಜಿಂಗ್ ಆ್ಯಪ್​ಗಳ ಮೂಲಕ ಶೇರ್ ಮಾಡುತ್ತಿದ್ದಾರೆ. ಹೀಗೆ ಶೇರ್ ಮಾಡಲಾದ ಲಿಂಕ್​ಗಳ ಬಗ್ಗೆ ಕೂಡ ಎಚ್ಚರದಿಂದ ಇರುವಂತೆ ಜಿಂಪೇರಿಯಮ್ ಟೆಕ್ ಸಂಶೋಧಕರು ತಿಳಿಸಿದ್ದಾರೆ.

ಮಾಲ್ವೇರ್ ವೈರಲ್ ಹರಡಲಾಗುತ್ತಿರುವ ಆ್ಯಪ್​ಗಳ ಪಟ್ಟಿ ಹೀಗಿದೆ:
>> ಜಿಜಿ ವೋಚರ್ (com.luxcarad.cardid)
>> ವೋಟ್ ಯುರೋಪಿಯನ್ ಫುಟ್‌ಬಾಲ್ (com.gardenguides.plantingfree)
>> GG ಕೂಪನ್ ಜಾಹೀರಾತುಗಳು (com.free_coupon.gg_free_coupon)
>> GG ವೋಚರ್ ಜಾಹೀರಾತುಗಳು (com. m_application.app_moi_6)
>> GG ವೋಚರ್ (com.free.voucher)
>> Chatfuel (com.ynsuper.chatfuel)
>> ನೆಟ್ ಕೂಪನ್ (com.free_coupon.net_coupon)
>> ನೆಟ್ ಕೂಪನ್ (com.movie.net_coupon)
>> ಯುರೋ 2021 ಅಧಿಕೃತ (com.euro2021)

ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ

ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ

(Malicious Apps malware attack on facebook login steal)

Published On - 7:08 pm, Wed, 11 August 21