ಭಾರತೀಯ ಮಾರುಕಟ್ಟೆಯಲ್ಲಿ ನೆಲೆಯೂರಲು ಹರಸಾಹಸ ಪಡುತ್ತಿರುವ ನೋಕಿಯಾ (Nokia) ಕಂಪೆನಿ ಹಲವು ಆಕರ್ಷಕ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದೆ. ಸದ್ಯ ಇದೀಗ ತನ್ನ ಹೊಸ ನೋಕಿಯಾ C20 ಪ್ಲಸ್ (Nokia C20 Plus) ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ, ಆಕ್ಟಾ-ಕೋರ್ SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿರುವ ಈ ಫೋನ್ ಅತಿ ಕಡಿಮೆ ಬೆಲೆಗೆ ಲಭ್ಯವಿದೆ.
ಒಟ್ಟು ಎರಡು ಆಯ್ಕೆಯಲ್ಲಿ ಬಿಡುಗಡೆ ಆಗಿರುವ ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್, 2GBRAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ 8,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 3GBRAM ಮತ್ತು 32GB ಸ್ಟೋರೇಜ್ ಆಯ್ಕೆಯ ಬೆಲೆ 9,999 ರೂ. ಆಗಿದೆ.
ಏನು ವಿಶೇಷತೆ?:
ನೋಕಿಯಾ C20 ಪ್ಲಸ್ ಸ್ಮಾರ್ಟ್‌ಫೋನ್ 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 81.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದು ಆಕ್ಟಾ-ಕೋರ್ ಯುನಿಸೋಕ್ SC9863a SoC ಪ್ರೊಸೆಸರ್ ಅನ್ನು ಪಡದುಕೊಂಡಿದ್ದು, ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆಟಪ್ ಹೊಂದಿದೆ.
ವಿಶೇಷವಾಗಿ ಈ ಸ್ಮಾರ್ಟ್‌ಫೋನ್ 4,950mAh ಬ್ಯಾಟರಿಯನ್ನು ಒದಗಿಸಿದ್ದು ಅದು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬಳಕೆಯನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v4.2, FM ರೇಡಿಯೋ ಸೇರಿದಂತೆ ಬೇಸಕ್ ಆಯ್ಕೆಗಳಿವೆ.
Mi TV 4C: ಅತಿ ಕಡಿಮೆ ಬೆಲೆಯ ಎಂಐ 4ಸಿ ಸ್ಮಾರ್ಟ್ಟಿವಿ ಲಾಂಚ್: ಆಫರ್ನಲ್ಲಿ ಪಡೆಯಿರಿ ಮತ್ತಷ್ಟು ಡಿಸ್ಕೌಂಟ್
ಗೂಗಲ್ ಕ್ರೋಮ್ ಬಳಸುತ್ತಿದ್ದಲ್ಲಿ ತಕ್ಷಣವೇ ಅಪ್ಡೇಟ್ ಮಾಡಿ: CERT ಯಿಂದ ಶಾಕಿಂಗ್ ಮಾಹಿತಿ
(Nokia C20 Plus 5000mAh Battery launched in India costs Rs 8999)