Sign In

By signing in or creating an account, you agree with Associated Broadcasting Company's Terms & Conditions and Privacy Policy.

Mi TV 4C: ಅತಿ ಕಡಿಮೆ ಬೆಲೆಯ ಎಂಐ 4ಸಿ ಸ್ಮಾರ್ಟ್​ಟಿವಿ ಲಾಂಚ್: ಆಫರ್​ನಲ್ಲಿ ಪಡೆಯಿರಿ ಮತ್ತಷ್ಟು ಡಿಸ್ಕೌಂಟ್

32 ಇಂಚಿನ ಹೊಸ Mi LED ಸ್ಮಾರ್ಟ್‌ ಟಿವಿ 4C ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ ಅತ್ಯುತ್ತಮ ಆಫರ್ ಕೂಡ ನೀಡಲಾಗಿದೆ.

Mi TV 4C: ಅತಿ ಕಡಿಮೆ ಬೆಲೆಯ ಎಂಐ 4ಸಿ ಸ್ಮಾರ್ಟ್​ಟಿವಿ ಲಾಂಚ್: ಆಫರ್​ನಲ್ಲಿ ಪಡೆಯಿರಿ ಮತ್ತಷ್ಟು ಡಿಸ್ಕೌಂಟ್
Mi LED TV 4C
Follow us
TV9 Web
| Updated By: Vinay Bhat

Updated on: Aug 10, 2021 | 1:51 PM

ಜಾಗತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಶವೋಮಿ ಕಂಪೆನಿ ಕೇವಲ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯದಲ್ಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ಶವೋಮಿ ಕಂಪೆನಿ ತನ್ನ ಹೊಸ ಎಂಐ ಎಲ್​ಇಡಿ ಟಿವಿ 4ಸಿ ಅನ್ನು ಲಾಂಚ್‌ ಮಾಡಿದೆ. ಇದು ಬಜೆಟ್ ಬೆಲೆ ಹೊಂದಿರುವುದು ವಿಶೇಷ.

32 ಇಂಚಿನ ಹೊಸ Mi LED ಸ್ಮಾರ್ಟ್‌ ಟಿವಿ 4C ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ ಅತ್ಯುತ್ತಮ ಆಫರ್ ಕೂಡ ನೀಡಲಾಗಿದೆ. ಈ ಸ್ಮಾರ್ಟ್​ ಟಿವಿಯ ಮೂಲಬೆಲೆ 19,999 ರೂ. ಆದರೆ, ಸದ್ಯ ಆಫರ್​ನಲ್ಲಿ ನೀವು 16,999 ರೂ. ಗೆ ಖರೀದಿಸಬಹುದು. ಇಷ್ಟೇ ಅಲ್ಲದೆ ಡೆಬಿಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಕೊಂಡುಕೊಂಡರೆ 750 ರೂ. ಡಿಸ್ಕೌಂಟ್, ಸಿಟಿ ಕ್ರೆಡಿಟ್ ಕಾರ್ಡ್ ಅವರಿಗೆ ಶೇ. 10 ರಷ್ಟು ಡಿಸ್ಕೌಂಟ್, ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್​ದಾರರಿಗೆ ಶೇ. 5 ರಷ್ಟು ಕ್ಯಾಶ್​ಬ್ಯಾಕ್ ಸೇರಿಂತೆ ಅನೇಕ ಆಫರ್​ಗಳನ್ನು ನೀಡಲಾಗಿದೆ.

Mi LED ಸ್ಮಾರ್ಟ್‌ ಟಿವಿ 4Cಯ ಆಡಿಯೋದ ಕಾರ್ಯಕ್ಷಮತೆಯಿಂದ ವಿಭಿನ್ನವಾಗಿದೆ. ಇದರಲ್ಲಿ ಎರಡು 10W ಶಕ್ತಿಶಾಲಿ ಸ್ಟಿರಿಯೋ ಸ್ಪೀಕರ್‌ಗಳನ್ನು ಅಳವಡಿಸಿದೆ. ಈ ಸ್ಪೀಕರ್‌ಗಳು ಅಸಾಧಾರಣ ಆಡಿಯೋ ಅನುಭವವನ್ನು ನೀಡಬಲ್ಲವು ಎಂದು ಕಂಪನಿ ಹೇಳಿಕೊಂಡಿದೆ.ಇನ್ನು, ಟಿವಿ ಸ್ಕ್ರೀನ್‌ 1366 x 768 ಪಿಕ್ಸೆಲ್‌ ಎಚ್‌ಡಿ ರೆಸಲ್ಯೂಶನ್ ಮತ್ತು ವೈವಿಡ್‌ ಪಿಕ್ಚರ್ ಎಂಜಿನ್ ಹೊಂದಿದೆ.

ಕ್ವಾಡ್‌ ಕೋರ್‌ 64-ಬಿಟ್ ಪ್ರೊಸೆಸರ್ ಹಾಗೂ 1GB RAM ಮತ್ತು 8GB ಸ್ಟೋರೇಜ್ ಸ್ಪೇಸ್‌ನೊಂದಿಗೆ ಹೊಸ ಟಿವಿ ಬಿಡುಗಡೆ ಆಗಿದ್ದು, ವೈಫೈ ಮತ್ತು ಬ್ಲೂಟೂತ್ ಸಂಪರ್ಕ ಬೆಂಬಲದೊಂದಿಗೆ ವಿವಿಧ ಪೋರ್ಟ್‌ಗಳನ್ನು ಹೊಂದಿದೆ. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜೀ5, ಆಲ್ಟ್‌ ಬಾಲಾಜಿ, ಸೋನಿ ಲೈವ್ ಮತ್ತು ಜಿಯೋ ಸಿನಿಮಾ ಸೇರಿ 25ಕ್ಕೂ ಹೆಚ್ಚು ಓಟಿಟಿ ವೇದಿಕೆಗಳಿಗೆ ಪ್ರವೇಶ ನೀಡುತ್ತದೆ.

ಇದಲ್ಲದೇ, Mi Quick Wake ಫೀಚರ್ ಬಳಕೆದಾರರು ತಾವು ನೋಡುತ್ತಿರುವ ಕಂಟೆಂಟ್ ಅನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ. ಅದು ಚಲನಚಿತ್ರವಾಗಿರಲಿ ಅಥವಾ ಶೋ ಆಗಿರಲಿ. ಗೂಗಲ್ ಅಸಿಸ್ಟೆಂಟ್ ಕೂಡ ಶಿಯೋಮಿ Mi LED ಸ್ಮಾರ್ಟ್ ಟಿವಿ 4Cಯಲ್ಲಿ ಇದ್ದು, ಬಳಕೆದಾರರು ತಮ್ಮ ಧ್ವನಿಯ ಮೂಲಕವೇ ಸ್ಮಾರ್ಟ್‌ ಟಿವಿಯನ್ನು ನಿಯಂತ್ರಿಸಬಹುದಾಗಿದೆ.

ಗೂಗಲ್ ಕ್ರೋಮ್ ಬಳಸುತ್ತಿದ್ದಲ್ಲಿ ತಕ್ಷಣವೇ ಅಪ್ಡೇಟ್ ಮಾಡಿ: CERT ಯಿಂದ ಶಾಕಿಂಗ್ ಮಾಹಿತಿ

OnePlus 5G: ಒನ್​ಪ್ಲಸ್ ಸೂಪರ್ ಸೇಲ್: ಅತೀ ಕಡಿಮೆ ಬೆಲೆಗೆ 12GB RAMನ 5G ಸ್ಮಾರ್ಟ್​ಫೋನ್

(Mi LED TV 4C Xiaomi launches 32-inch Mi LED TV 4C in India price starts from Rs just 16999)

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!