ಚೀನೀ ಕಂಪನಿ ಮೊನಿ ತನ್ನ ಮೊನಿ ಮಿಂಟ್ (mony mint) ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಈ ಮೊಬೈಲ್ ವಿಶ್ವದ ಅತ್ಯಂತ ಚಿಕ್ಕ 4G ಸ್ಮಾರ್ಟ್ ಫೋನ್ (world’s smallest smartphone) ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಫೋನ್ನಲ್ಲಿ ಕೇವಲ 3 ಇಂಚಿನ ಡಿಸ್ಪ್ಲೇ ನೀಡಲಾಗಿದ್ದು, ಉಳಿದಂತೆ ಸ್ಮಾರ್ಟ್ಫೋನ್ನಲ್ಲಿರುವ ಎಲ್ಲಾ ರೀತಿಯ ಫೀಚರ್ಗಳು ಇದರಲ್ಲಿದೆ. ಹಾಗಿದ್ರೆ ಮೊನಿ ಮಿಂಟ್ ಸ್ಮಾರ್ಟ್ಫೋನ್ನ ವಿಶೇಷತೆಗಳೇನು ನೋಡೋಣ.
ಡಿಸ್ಪ್ಲೇ:
ಈ ಸ್ಮಾರ್ಟ್ಫೋನ್ನಲ್ಲಿ 3 ಇಂಚಿನ ಡಿಸ್ಪ್ಲೇ ನೀಡಲಾಗಿದೆ. ಇದು 89.5 x 45.5 x 11.5mm ಅಳತೆ ಮತ್ತು 854 × 450 ರೆಸಲ್ಯೂಶನ್ ಹೊಂದಿದೆ.
ಸ್ಟೊರೇಜ್:
ಈ ಮೊಬೈಲ್ನಲ್ಲಿ 3GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಇದರ ಜೊತೆಗೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 128 ಜಿಬಿ ವರೆಗೆ ಸ್ಟೊರೇಜ್ ಅನ್ನು ವಿಸ್ತರಿಸುವ ಆಯ್ಕೆ ಕೂಡ ನೀಡಿರುವುದು ವಿಶೇಷ.
ಪ್ರೊಸೆಸರ್:
ಈ ಫೋನ್ನಲ್ಲಿ 1.5GHz ಕ್ವಾಡ್ಕೋರ್ CPU ಪ್ರೊಸೆಸರ್ ನೀಡಲಾಗಿದೆ. ಹಾಗೆಯೇ ಇದು ಆಂಡ್ರಾಯ್ಡ್ 9 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ:
ಮೊನಿ ಮಿಂಟ್ ಸ್ಮಾರ್ಟ್ಫೋನ್ನಲ್ಲಿ 1,250mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.
ಕ್ಯಾಮೆರಾ:
ಈ ಸ್ಮಾರ್ಟ್ಫೋನ್ನ ಹಿಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದ್ದು, ಹಾಗೆಯೇ ಸೆಲ್ಫಿಗಾಗಿ 2MP ಕ್ಯಾಮೆರಾ ಮುಂಭಾಗದಲ್ಲಿದೆ.
ಮೊನಿ ಮಿಂಟ್ ಬೆಲೆ:
ಈ ಸ್ಮಾರ್ಟ್‌ಫೋನ್ ಇಂಡಿಗೊಗೊದಲ್ಲಿ ವೆಬ್ಸೈಟ್ನಲ್ಲಿ 100 ಡಾಲರ್ಗೆ ಲಭ್ಯವಿದೆ. ಅಂದರೆ ಭಾರತದ ರೂಪಾಯಿ ಮೌಲ್ಯ ಸುಮಾರು 7,421 ರೂ. ನೀವು ಇಂಡಿಗೊಗೊ ಮೈಕ್ರೋ-ಸೈಟ್‌ಗೆ ಹೋಗಿ ವಿಶ್ವದ ಅತೀ ಚಿಕ್ಕ ಸ್ಮಾರ್ಟ್ಫೋನ್ನನ್ನು ಬುಕ್ ಮಾಡಬಹುದು.
ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ
ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ
ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ
(world’s smallest 4G smartphone with a 3-inch screen)